ಹೊಸಪೇಟೆ: ಜಿಲ್ಲಾ ಖನಿಜ ನಿಧಿ (ಡಿಎಂಎಫ್) ವಿಚಾರದಲ್ಲಿ ವಿಜಯನಗರ ಜಿಲ್ಲೆಗೆ ಅನ್ಯಾಯ ಆಗುತ್ತಲೇ ಇದ್ದು, ಇದನ್ನು ತಪ್ಪಿಸಬೇಕು. ಗಣಿ ಸಂಪದ್ಭರಿತ ಸಂಡೂರು ತಾಲ್ಲೂಕಿನ ಕೆಲವು ಭಾಗಗಳು ಹೊಸಪೇಟೆಗೆ ಹೊಂದಿಕೊಂಡಿರುವ ಕಾರಣ ಅಲ್ಲಿಂದ ಡಿಎಂಎಫ್ ನಿಧಿಯಲ್ಲಿ ಜಿಲ್ಲೆಗೆ ಹಂಚಿಕೆ ಆಗಬೇಕಿದೆ ಎಂದು ವಿಜಯನಗರ ಜಿಲ್ಲಾ ಜನಜಾಗೃತಿ ವೇದಿಕೆಯ ಪ್ರಧಾನ ಕಾರ್ಯದರ್ಶಿ ವೈ.ಯಮುನೇಶ್ ಹೇಳಿದರು.

ಡಿಎಂಎಫ್ ಕುರಿತಂತೆ ಗುರುವಾರ ಇಲ್ಲಿ ನಿಯೋಗದೊಂದಿಗೆ ಜಿಲ್ಲಾಧಿಕಾರಿ ಕಚೇರಿಗೆ ತೆರಳಿದ ಅವರು ಡಿ.ಸಿ ಕವಿತಾ ಎಸ್.ಮನ್ನಿಕೇರಿ ಅವರಿಗೆ ಮನವಿ ಸಲ್ಲಿಸಿದರು.

‘ಖನಿಜ ನಿಧಿ ಹಂಚಿಕೆಯಲ್ಲಿ ವಿಜಯನಗರ ಜಿಲ್ಲೆ ಬಗ್ಗೆ ಸರ್ಕಾರವು ಮಲತಾಯಿ ದೋರಣೆ ತಳೆದಿದ್ದು, ನೂತನ ಜಿಲ್ಲೆ ರಚನೆಯಾಗಿ 5 ವರ್ಷಗಳಾದರೂ ಜಿಲ್ಲೆಗೆ ಅತ್ಯಲ್ಪ ಪ್ರಮಾಣದ ನಿಧಿ ಹಂಚಿಕೆಯಾಗುತ್ತಿದೆ’ ಎಂದರು.

ವೇದಿಕೆಯ ಅಧ್ಯಕ್ಷ ಯು.ಆಂಜನೇಯಲು ಮಾತನಾಡಿ, ಪ್ರಸ್ತುತ ಹೊಸಪೇಟೆ ನಗರದ ವಾರ್ಡ್ಗಳಲ್ಲಿ ಜಿಲ್ಲಾ ಖನಿಜ ನಿಧಿಯಿಂದ ರಸ್ತೆ ಮತ್ತು ವಿದ್ಯುತ್ ಕಾಮಗಾರಿಗಳ ಅಭಿವೃದ್ಧಿಗೆ ಚಾಲನೆ ನೀಡಿರುವುದು ಸ್ವಾಗತಾರ್ಹ. ಆದರೆ ಕಾಮಗಾರಿಗಳಲ್ಲಿ ಗುಣಮಟ್ಟ ಕಾಯ್ದುಕೊಳ್ಳಬೇಕು ಎಂದರು.

ವೇದಿಕೆಯ ಪ್ರಮುಖರಾದ ಈ.ಪ್ರಶಾಂತ್, ನಜೀರ್ಸಾಬ್, ಪಿ.ನಾಗರಾಜ್, ಎನ್.ವಾಸುದೇವಪ್ಪ, ಡಿ.ವಿಶ್ವನಾಥ, ಕಾಶಿನಾಥ ಕುಲಕರ್ಣಿ, ಎ.ಭೀಮಪ್ಪ, ಎಂ.ಶಂಕ್ರಪ್ಪ, ಕೆ.ವಿ.ರಾಮಲಿ, ಟಿ.ನಾಗೇಂದ್ರಪ್ಪ ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260515-25-1084760186

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.