ಶುಕ್ರವಾರ, ಡಿಸೆಂಬರ್ 2, 2022
19 °C

‘ನಾಡಿಗೆ ವಿಜಯನಗರ ಕೊಡುಗೆ ಅಪಾರ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹೊಸಪೇಟೆ (ವಿಜಯನಗರ): ‘ಕರುನಾಡಿಗೆ ವಿಜಯನಗರ ಜಿಲ್ಲೆಯ ಕೊಡುಗೆ ಅಪಾರವಾಗಿದೆ’ ಎಂದು ಕನ್ನಡ ರಕ್ಷಣಾ ವೇದಿಕೆ ರಾಜ್ಯ ಘಟಕದ ಅಧ್ಯಕ್ಷ ಆರ್‌. ವಿಜಯಕುಮಾರ್‌ ತಿಳಿಸಿದರು.

ರಕ್ಷಣಾ ವೇದಿಕೆ ಹಾಗೂ ಅಪ್ಪು ಸೇನೆಯಿಂದ ನಗರದಲ್ಲಿ ಸೋಮವಾರ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ನೂತನ ಪದಾಧಿಕಾರಿಗಳಿಗೆ ಜವಾಬ್ದಾರಿ ವಹಿಸಿ ಮಾತನಾಡಿದರು.

ಕನ್ನಡ ನಾಡಿನ ಶ್ರೀಮಂತ ಕಲೆ, ಸಂಸ್ಕೃತಿ, ಪರಂಪರೆ ಹಾಗೂ ನೆಲ, ಜಲ ಸಂರಕ್ಷಣೆಯಲ್ಲಿ ವಿಜಯನಗರ ಸಾಮ್ರಾಜ್ಯದ ಪಾತ್ರ ಹಿರಿದಾಗಿದೆ. ನೂತನ ಪದಾಧಿಕಾರಿಗಳು ನಾಡು, ನುಡಿ ರಕ್ಷಣೆಗೆ ಸದಾ ಶ್ರಮಿಸಬೇಕೆಂದು ಕಿವಿಮಾತು ಹೇಳಿದರು.

ನೂತನ ಪದಾಧಿಕಾರಿಗಳ ವಿವರ ಇಂತಿದೆ: ವಿರೂಪಾಕ್ಷಿ ವಿ ಹಂಪಿ–ಜಿಲ್ಲಾಧ್ಯಕ್ಷ, ಚೌಡಪ್ಪ–ಜಿಲ್ಲಾ ಉಪಾಧ್ಯಕ್ಷ, ಪರಶುರಾಮ–ಪ್ರಧಾನ ಕಾರ್ಯದರ್ಶಿ, ಮಂಜುನಾಥ–ಸಂಘಟನಾ ಕಾರ್ಯದರ್ಶಿ, ಯಲ್ಲಪ್ಪ ಕರಿ–ಖಜಾಂಚಿ, ವಿ. ಕುಮಾರ್–ರಾಜ್ಯ ಸಂಘಟನಾ ಕಾರ್ಯದರ್ಶಿ.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.