ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೊಸಪೇಟೆಯಲ್ಲಿ ಕೋತಿಗಳ ಹಾವಳಿ–ಹಲವರಿಗೆ ಗಾಯ

Published 6 ಜೂನ್ 2023, 6:19 IST
Last Updated 6 ಜೂನ್ 2023, 6:19 IST
ಅಕ್ಷರ ಗಾತ್ರ

ಹೊಸಪೇಟೆ (ವಿಜಯನಗರ): ನಗರದ ವಿವಿಧ ವಾರ್ಡ್‌ಗಳಲ್ಲಿ ರಾತ್ರಿಯ ವೇಳೆ ಹುಚ್ಚು ಕೋತಿಗಳ ಹಾವಳಿ ಜಾಸ್ತಿಯಾಗಿದ್ದು, ಕೋತಿಯ ಕಡಿತಕ್ಕೆ ಜನಸಾಮಾನ್ಯರು ತತ್ತರಗೊಂಡಿದ್ದಾರೆ.

ಗಾಯಗೊಂಡ ಹತ್ತಾರು ಜನ ನಗರದ ಸರ್ಕಾರಿ ಆಸ್ಪತ್ರೆ ಹಾಗೂ ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಕಳೆದ 15 ದಿನಗಳಿಂದ ಕೋತಿಗಳ ಭಯದಲ್ಲಿ ಜನ ಬದುಕುತ್ತಿದ್ದು, ನಗರಸಭೆ  ಮತ್ತು ಅರಣ್ಯ ಇಲಾಖೆಯವರಿಗೆ ಹಿಡಿಶಾಪ ಹಾಕುತ್ತಿದ್ದಾರೆ.

ಆಸ್ಪತ್ರೆಗೆ ದಾಖಲಾದ ವ್ಯಕ್ತಿಯ ಆರೋಗ್ಯ ವಿಚಾರಿಸಿದ ಭಗತ್ ಸಿಂಗ್ ರಕ್ತಧಾನಿಗಳ ಸಂಘದ ಅಧ್ಯಕ್ಷರೂ ಆಗಿರುವ ಆಟೋರಿಕ್ಷಾ ಟಾಟಾ ಎಸಿ, ಮಿನಿ ಲಾರಿ ಚಾಲಕರ ಸಂಘದ ಅಧ್ಯಕ್ಷ ಕೆ.ಎಂ.ಸಂತೋಷ್ ಕುಮಾರ್ ಹಾಗೂ ಮುಖಂಡರಾದ ನಬಿಸಾಬ್, ಅಲ್ತಾಫ್, ಕೋತಿಗಳ ಕಡತಕ್ಕೆ ಒಳಗಾಗಿರುವ ಜನರ ಚಿಕಿತ್ಸೆ ವೆಚ್ಚವನ್ನು ಸಂಬಂಧಪಟ್ಟ ಇಲಾಖೆ ಭರಿಸಬೇಕು ಹಾಗೂ ಪರಿಹಾರ ನೀಡಬೇಕು ಎಂದು ಆಗ್ರಹಿಸಿದ್ದಾರೆ.

ಜನಸಾಮಾನ್ಯರಿಗೆ ತೊಂದರೆ ಕೊಡುತ್ತಿರುವ ಹುಚ್ಚು ಕೋತಿಗಳನ್ನು ತಕ್ಷಣವೇ ಹಿಡಿದು ಸ್ಥಳಾಂತರಿಸಬೇಕು, ವಿಳಂಬವಾದಲ್ಲಿ ನಗರದ ಅರಣ್ಯ ಇಲಾಖೆ ಅಧಿಕಾರಿಗಳು ಹಾಗೂ ನಗರಸಭೆ ಅಧಿಕಾರಿಗಳು ವಿರುದ್ಧ ಪ್ರತಿಭಟನೆ ಅನಿವಾರ್ಯ ಎಂದು ಭಗತ್‌ ಸಿಂಗ್ ರಕ್ತದಾನಿಗಳ ಸಂಘ ಎಚ್ಚರಿಸಿದೆ.

ಕಪ್ಪು ಕೋತಿಯಾದರೆ ಅದು ಅರಣ್ಯ ಇಲಾಖೆಗೆ ಸಂಬಂಧಿಸಿದ್ದಾಗಿದ್ದು, ಕೆಂಪು ಕೋತಿಯಾದರೆ ಅದು ನಗರಸಭೆಗೆ ಸಂಬಂಧಿಸಿದ್ದಾಗಿರುತ್ತದೆ. ರಾತ್ರಿ ಕಡಿಯುತ್ತಿರುವುದು ಕೆಂಪು ಕೋತಿ, ಇದನ್ನು ನಗರಸಭೆಯೇ ನಿಭಾಯಿಸಬೇಕು ಎಂದು ಅರಣ್ಯ ಇಲಾಖೆ ಅಧಿಕಾರಿಗಳು ಹೇಳುತ್ತಿದ್ದಾರೆ ಎಂದು ಸಂಘ ಹೇಳಿದೆ.

ಡಿಎಚ್‌ಒ ಮತ್ತು ನಗರಸಭೆ ಆಯುಕ್ತರು ಸೋಮವಾರ ಆಸ್ಪತ್ರೆಗೆ ಭೇಟಿ ನೀಡಿದ್ದು, ಕೋತಿ ಕಡಿತಕ್ಕೆ ಒಳಗಾದವರಿಗೆ ಉಚಿತ ಲಸಿಕೆ ಲಭ್ಯವಿದೆ ಎಂದು ಭರವಸೆ ನೀಡಿದ್ದಾರೆ. 

ಹುಚ್ಚು ಕೋತಿಗಳನ್ನು ಹಿಡಿದು ಬೇರೆಡೆಗೆ ಸಾಗಿಸಲು ಪ್ರಯತ್ನ ಆರಂಭವಾಗಿದೆ ಎಂದು ನಗರಸಭೆ ಮೂಲಗಳು ತಿಳಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT