ಹೂವಿನಹಡಗಲಿ: ಇಲ್ಲಿನ ಸಾರಿಗೆ ಘಟಕದಲ್ಲಿ ಗುತ್ತಿಗೆ ಆಧಾರದಲ್ಲಿ ಸೇವೆ ಸಲ್ಲಿಸುತ್ತಿರುವ 28 ಮಂದಿ ಚಾಲಕರಿಗೆ ಗುತ್ತಿಗೆ ಏಜೆನ್ಸಿಯವರು ಎರಡು ತಿಂಗಳ ವೇತನ, ಮೂರು ವರ್ಷದ ಭವಿಷ್ಯ ನಿಧಿ ಬಾಕಿ ಉಳಿಸಿಕೊಂಡಿರುವುದನ್ನು ವಿರೋಧಿಸಿ ಮಂಗಳವಾರ ಕರ್ತವ್ಯಕ್ಕೆ ಗೈರಾಗಿ ಪ್ರತಿಭಟಿಸಿದರು.

ಗುತ್ತಿಗೆ ಚಾಲಕರು ಕರ್ತವ್ಯ ಬಹಿಷ್ಕರಿಸಿ ಮುಷ್ಕರ ಹೂಡಿದ್ದರಿಂದ 25ಕ್ಕೂ ಹೆಚ್ಚು ಗ್ರಾಮೀಣ ಬಸ್ ಮಾರ್ಗಗಳು ಬಂದ್ ಆಗಿದ್ದವು. ಇದರಿಂದ ಗ್ರಾಮೀಣ ಸಾರಿಗೆ ಸೇವೆಯಲ್ಲಿ ವ್ಯತ್ಯಯ ಉಂಟಾಗಿ, ಸಾರ್ವಜನಿಕರು, ವಿದ್ಯಾರ್ಥಿಗಳು ತೀವ್ರ ತೊಂದರೆ ಅನುಭವಿದರು.

ಪೂಜಾ ಸೆಕ್ಯೂರಿಟಿ ಸರ್ವೀಸ್ ಹೆಸರಿನ ಏಜೆನ್ಸಿಯವರು ಎರಡು ತಿಂಗಳಿಂದ ವೇತನ ನೀಡಿಲ್ಲ. ಕಳೆದ ಮೂರು ವರ್ಷದಿಂದ ಪ್ರತಿ ತಿಂಗಳ ವೇತನದಲ್ಲಿ ₹2,800 ಹಣವನ್ನು ಭವಿಷ್ಯ ನಿಧಿಗೆಂದು ಕಡಿತ ಮಾಡಿದ್ದರೂ ಇನ್ನೂವರೆಗೆ ಪಿಎಫ್ ಗೆ ಜಮೆ ಮಾಡಿಲ್ಲ. ತಿಂಗಳ ವೇತನ ಸರಿಯಾಗಿ ನೀಡದಿರುವುದರಿಂದ ಜೀವನ ನಿರ್ವಹಣೆ ಕಷ್ಟವಾಗಿದೆ. ಮಕ್ಕಳ ಶಾಲಾ ಶುಲ್ಕ ಪಾವತಿಸಿಲ್ಲ ಎಂಬ ಕಾರಣಕ್ಕೆ ಶಾಲೆಯವರು ಎಸ್ಸೆಸ್ಸೆಲ್ಸಿ ಪರೀಕ್ಷೆ ಪ್ರವೇಶ ಪತ್ರ ನೀಡಿಲ್ಲ. ಈ ಸಮಸ್ಯೆಗಳ ಕುರಿತು ಘಟಕದ ಅಧಿಕಾರಿಗಳು, ವಿಭಾಗದ ಅಧಿಕಾರಿಗಳ ಗಮನಕ್ಕೆ ತಂದರೆ ನೀವು ಸಂಸ್ಥೆಯ ಸಿಬ್ಬಂದಿಯಲ್ಲ, ಏಜೆನ್ಸಿಯವರನ್ನು ಕೇಳಿ ಎನ್ನುತ್ತಾರೆ. ಏಜೆನ್ಸಿಯವರು ನಮ್ಮನ್ನು ಕ್ಯಾರೇ ಎನ್ನುತ್ತಿಲ್ಲ. ಹೀಗಾದರೆ ದುಡಿದ ಸಂಬಳವನ್ನು ಯಾರ ಬಳಿ ಕೇಳಬೇಕು’ ಎಂದು ಗುತ್ತಿಗೆ ಚಾಲಕರು ಪ್ರಶ್ನಿಸಿದರು.

‘ಏಜೆನ್ಸಿಯವರು ಪ್ರತಿ ತಿಂಗಳು ₹25 ಸಾವಿರ ವೇತನ ನೀಡುತ್ತಿಲ್ಲ. ನಾವು ಕರ್ತವ್ಯ ವಹಿಸಿಕೊಳ್ಳಲು ಘಟಕಕ್ಕೆ ಬಂದರೂ ಕೆಲವೊಮ್ಮೆ ಕರ್ತವ್ಯ ಸಿಗುವುದಿಲ್ಲ. ನಮ್ಮದಲ್ಲದ ತಪ್ಪಿಗೂ ದಿನಕ್ಕೆ ₹590 ದಂಡ ಹಾಕುತ್ತಾರೆ. ದಿನಕ್ಕೆ 8 ತಾಸು ಕೆಲಸ ಮುಗಿಸಿದ ಬಳಿಕ ಹೆಚ್ಚುವರಿ ಒಂದು ತಾಸಿಗೆ ₹100 ನೀಡುವ ನಿಯಮವಿದ್ದರೂ ಓವರ್ ಟೈಂ ಡ್ಯೂಟಿ ಹಣ ನೀಡುತ್ತಿಲ್ಲ. ಈ ಕುರಿತು ಘಟಕದಲ್ಲಿ ಪ್ರಶ್ನಿಸುವವರನ್ನು ಗುರಿಯಾಗಿಸಿ ತೊಂದರೆ ಕೊಡುತ್ತಾರೆ. ಕೆಲಸದಿಂದ ತೆಗೆಯುವುದಾಗಿ ಬೆದರಿಸುತ್ತಾರೆ’ ಎಂದು ಅಳಲು ತೋಡಿಕೊಂಡರು.

ಏಜೆನ್ಸಿಯವರ ಗುತ್ತಿಗೆ ಅವಧಿ ಮುಗಿದಿರುವುದರಿಂದ ಅವರಿಂದ ಬಾಕಿ ವೇತನ ಮತ್ತು ಕಡಿತಗೊಳಿಸಿರುವ ಪಿಎಫ್ ಹಣವನ್ನು ಜಮೆ ಮಾಡಿಸಬೇಕು. ಪ್ರತಿ ತಿಂಗಳ 10ರೊಳಗಾಗಿ ವೇತನ ನೀಡಬೇಕು. ಗುತ್ತಿಗೆ ಚಾಲಕರ ಸೇವಾ ನಿಯಮಗಳನ್ನು ನೀಡಬೇಕು. ಸಾರಿಗೆ ವಿಭಾಗದ ಅಧಿಕಾರಿಗಳು ಏಜೆನ್ಸಿಯವರ ಬಳಿ ಚರ್ಚಿಸಿ ಎಲ್ಲ ಸಮಸ್ಯೆಗಳನ್ನು ಬಗೆಹರಿಸುವ ಸ್ಪಷ್ಟ ಭರವಸೆ ನೀಡಿದ ಬಳಿಕ ಕರ್ತವ್ಯಕ್ಕೆ ಹಾಜರಾಗುತ್ತೇವೆ ಎಂದು ಪಟ್ಟು ಹಿಡಿದರು.

ಗುತ್ತಿಗೆ ಚಾಲಕರಾದ ನವೀನ್, ನಾಗರಾಜ, ಪ್ರಶಾಂತ, ಉಜರತ್ತಿ ವೀರೇಶ, ಶರಣಪ್ಪ, ಆನಂದ, ಪ್ರಭು ಇತರರು ಇದ್ದರು.

ಹೊಸಪೇಟೆ ಸಾರಿಗೆ ವಿಭಾಗದ ಅಧಿಕಾರಿ ಇಲ್ಲಿನ ಘಟಕಕ್ಕೆ ಭೇಟಿ ನೀಡಿ ಗುತ್ತಿಗೆ ಚಾಲಕರ ಮನವೊಲಿಸುವ ಪ್ರಯತ್ನ ನಡೆಸಿದ್ದಾರೆ.

‘ಮನವೊಲಿಸಲು ಯತ್ನ’

‘ಗುತ್ತಿಗೆ ಪಡೆದ ಏಜೆನ್ಸಿಯ ಅವಧಿ ಮುಗಿದ ಕಾರಣ ಸಂಬಳ ಕೊಡದೆ ಸತಾಯಿಸುತ್ತಿದ್ದಾರೆ, ಅವರು ಇಟ್ಟಿರುವ ₹60 ಲಕ್ಷ ಠೇವಣಿ ನಮ್ಮ ಬಳಿ ಇದೆ, ಅದರಲ್ಲಿ ಸಂಬಳ ಕೊಡುತ್ತೇವೆ, ಕರ್ತವ್ಯಕ್ಕೆ ಹಾಜರಾಗಿ ಎಂದು ನಾವು ಚಾಲಕರಿಗೆ ತಿಳಿಸಿದ್ದೇವೆ. ಅವರಿಗೆ ಮನವರಿಕೆ ಆಗುತ್ತಿಲ್ಲ. ಅವರ ಮುಷ್ಕರದಿಂದ ಇಂದು ಬಸ್ ಸಂಚಾರದಲ್ಲಿ ಸ್ವಲ್ಪ ವ್ಯತ್ಯಯ ಉಂಟಾಗಿರುವುದು ನಿಜ, ನಾಳೆಯೂ ಮುಷ್ಕರ ಮುಂದುವರಿದರೆ ನಮ್ಮ ಸಿಬ್ಬಂದಿಯನ್ನು ನಿಯೋಜಿಸಿ ಬಸ್ ಓಡಿಸಲು ಕ್ರಮ ಕೈಗೊಳ್ಳುತ್ತೇವೆ’ ಎಂದು ಕೆಕೆಆರ್ಟಿಸಿ ಹಿರಿಯ ವಿಭಾಗೀಯ ನಿಯಂತ್ರಣಾಧಿಕಾರಿ ರಾಜೇಶ ಹುದ್ದಾರ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.