ಹೊಸಪೇಟೆ (ವಿಜಯನಗರ): ಹಗರಿಬೊಮ್ಮನಹಳ್ಳಿಯ ಎಫ್ಡಿಎ ಟಿ.ಎಂ.ಚೆನ್ನಬಸಯ್ಯ ಎಂಬುವವರ ಮನೆಯಲ್ಲಿ ಜನವರಿ 10ರಂದು ನಡೆದಿದ್ದ ಕಳವು ಪ್ರಕರಣವನ್ನು ಬೆನ್ನುಹತ್ತಿದ ಪೊಲೀಸರಿಗೆ, ಹಳೆಯ ಮೂರು ಮನೆಗಳವು ಪ್ರಕರಣಗಳನ್ನೂ ಭೇದಿಸುವುದು ಸಾಧ್ಯವಾಗಿದ್ದು, ಇಬ್ಬರು ಕಳ್ಳರಿಂದ ₹14.06 ಲಕ್ಷ ಮೌಲ್ಯದ ಚಿನ್ನ, ಬೆಳ್ಳಿ ಆಭರಣವನ್ನು ವಶಪಡಿಸಿಕೊಂಡಿದ್ದಾರೆ.

ಎಸ್ಪಿ ಎಸ್.ಜಾಹ್ನವಿ ಅವರು ಸೋಮವಾರ ಇಲ್ಲಿನ ತಮ್ಮ ಕಚೇರಿಯಲ್ಲಿ ಈ ಬಗ್ಗೆ ಮಾಹಿತಿ ನೀಡಿದರು. ಹಗರಿಬೊಮ್ಮನಹಳ್ಳಿ ತಾಲ್ಲೂಕಿನ ಗದ್ದಿಕೇರಿ ಗ್ರಾಮದ ಕುಮಾರಹಳ್ಳಿ ಆನಂದ (24) ಮತ್ತು ಅರಳೇಹಳ್ಳಿಯ ಜಹಾಂಗೀರ್ ಬಾಷಾ (36) ಬಂಧಿತ ಆರೋಪಿಗಳು. ಈ ಪೈಕಿ ಜಹಾಂಗೀರ್ ಬೈಕ್ ಕಳ್ಳತನದ ಎರಡು ಪ್ರಕರಣಗಳು ಮತ್ತು ಒಂದು ಮನೆಗಳವು ಪ್ರಕರಣಗಳಲ್ಲಿ ಈ ಮೊದಲು ಬಂಧಿತನಾಗಿದ್ದ ಎಂದರು.

ಘಟನೆಯ ವಿವರ: ಜನವರಿ 10ರಂದು ಹಗರಿಬೊಮ್ಮನಹಳ್ಳಿಯ ಚಿರಸ್ಥಹಳ್ಳಿ ಗ್ರಾಮದ ಚೆನ್ನಬಸಯ್ಯ ಅವರ ಮನೆಯ ಬಾಗಿಲು ಮುರಿದು ₹ 92 ಸಾವಿರ ಮೌಲ್ಯದ ಬೆಳ್ಳಿ ಮತ್ತು ಬಂಗಾರದ ಆಭರಣಗಳನ್ನು ಕಳವು ಮಾಡಲಾಗಿತ್ತು. ಸಿಪಿಐ ವಿಕಾಸ್ ಪಿ.ಲಮಾಣಿ ನೇತೃತ್ವದ ತಂಡವು ಪ್ರಕರಣದಲ್ಲಿ ಭಾಗಿಯಾದ ಇಬ್ಬರನ್ನು ಬಂಧಿಸಿ ವಿಚಾರಿಸಿದಾಗ ಇತರ ಮೂರು ಮನೆಗಳವು ಪ್ರಕರಣಗಳಲ್ಲೂ ಅವರು ಶಾಮೀಲಾಗಿದ್ದ ವಿಷಯ ಗೊತ್ತಾಯಿತು.

ಹಗರಿಬೊಮ್ಮನಹಳ್ಳಿ ಠಾಣೆಯಲ್ಲಿ ಒಂದು, ತಂಬ್ರಹಳ್ಳಿ ಠಾಣೆಯಲ್ಲಿ ಒಂದು ಹಾಗೂ ಮರಿಯಮ್ಮನಹಳ್ಳಿ ಠಾಣೆಯಲ್ಲಿ ಇನ್ನೊಂದು ಕಳವು ಪ್ರಕರಣ ದಾಖಲಾಗಿತ್ತು. ಇಲ್ಲೂ ಈ ಇಬ್ಬರೇ ಕಳವು ಮಾಡಿದ್ದು ದೃಢಪಟ್ಟಿತ್ತು. ಆರೋಪಿಗಳು ಒಟ್ಟು ನಾಲ್ಕು ಮನೆಗಳಿಂದ ಕಳವು ಮಾಡಿದ ₹12.56 ಮೌಲ್ಯದ 96.54 ಗ್ರಾಂ ತೂಕದ ವಿವಿಧ ಬಂಗಾರದ ಆಭರಣಗಳನ್ನು ಮತ್ತು ₹1.50 ಲಕ್ಷ ಮೌಲ್ಯದ 750 ಗ್ರಾಂ ಬೆಳ್ಳಿಯ ಆಭರಣಗಳನ್ನು ವಶಕ್ಕೆ ಪಡೆಯಲಾಗಿದೆ ಎಂದು ಎಸ್ಪಿ ಜಾಹ್ನವಿ ತಿಳಿಸಿದರು.

ಕಾರ್ಯಾಚರಣೆಯಲ್ಲಿ ಪಿಎಸ್ಐಗಳಾದ ಉಮಾಪತಿ ಬಿ., ತಾರಾಬಾಯಿ, ನಾಗರಾಜ ಕೊಟಗಿ ಹಾಗೂ ಸಿಬ್ಬಂದಿ ಕಿರಣ್ ಕುಮಾರ್, ರಾಮಾಂಜಿನೇಯ, ಹೆಗ್ಗಪ್ಪ, ಮಹೇಶ ಎಂ., ದೊಡ್ಡ ಬಸಪ್ಪ, ಸುರೇಶ್ ಕುಮಾರ್ ಪಾಲ್ಗೊಂಡಿದ್ದರು.

ಪತ್ರಿಕಾಗೋಷ್ಠಿಯಲ್ಲಿ ಕಾರ್ಯಾಚರಣೆಯಲ್ಲಿ ಪಾಲ್ಗೊಡ ಸಿಬ್ಬಂದಿಯ ಜತೆಗೆ ಎಎಸ್ಪಿ ಜಿ.ಮಂಜುನಾಥ್, ಡಿವೈಎಸ್ಪಿ ಮಲ್ಲೇಶ್ ದೊಡ್ಮನಿ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.