ಸೋಮವಾರ, ಜೂನ್ 21, 2021
29 °C

ವಿಜಯನಗರ: ಹೆಚ್ಚು ಜನರನ್ನು ಸೇರಿಸಿ ಮದುವೆ: ಐದು ಸಾವಿರ ದಂಡ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹೊಸಪೇಟೆ (ವಿಜಯನಗರ): ಕೋವಿಡ್‌ ಕರ್ಫ್ಯೂ ನಿಯಮ ಉಲ್ಲಂಘಿಸಿ ಮದುವೆ ಮಾಡಿದವರಿಗೆ ಅಧಿಕಾರಿಗಳು ₹5,000 ದಂಡ ಹೇರಿ ಗುರುವಾರ ಬಿಸಿ ಮುಟ್ಟಿಸಿದ್ದಾರೆ.

ಕರ್ಫ್ಯೂ ಅವಧಿಯಲ್ಲಿ 50 ಜನರನ್ನು ಸೇರಿಸಿ ಮದುವೆ ಮಾಡಲು ಅವಕಾಶ ನೀಡಲಾಗಿದೆ. ಆದರೆ, ತಾಲ್ಲೂಕಿನ ಕಮಲಾಪುರದ 17ನೇ ವಾರ್ಡಿನಲ್ಲಿ 50ಕ್ಕಿಂತ ಹೆಚ್ಚು ಜನರನ್ನು ಸೇರಿಸಿ ಮದುವೆ ಮಾಡಲಾಗಿದೆ. ವಿಷಯ ಗೊತ್ತಾಗಿ ಸ್ಥಳಕ್ಕೆ ದೌಡಾಯಿಸಿದ ಅಧಿಕಾರಿಗಳು ವಿವಾಹ ಏರ್ಪಡಿಸಿದ್ದವರಿಗೆ ₹5,000 ದಂಡ ಹೇರಿ, ಎಚ್ಚರಿಕೆ ಕೊಟ್ಟು ಅಲ್ಲಿ ಸೇರಿದ್ದ ಜನರನ್ನು ಕಳುಹಿಸಿದರು.

‘ಕರ್ಫ್ಯೂ ಅವಧಿಯಲ್ಲಿ ಹೆಚ್ಚಿನ ಜನರನ್ನು ಸೇರಿಸಿ ಯಾರೂ ಮದುವೆ ಮಾಡುವಂತಿಲ್ಲ. ಅಳ್ಳಿಕೆರೆಯಲ್ಲಿ ಜನ ಸೇರಿದ್ದರಿಂದ ತಕ್ಷಣವೇ ಸ್ಥಳಕ್ಕೆ ಧಾವಿಸಿ, ಸಂಬಂಧಿಸಿದವರಿಗೆ ದಂಡ ಹೇರಲಾಗಿದೆ. ಬಳಿಕ ಎಚ್ಚರಿಕೆ ಕೊಟ್ಟು ಅಲ್ಲಿದ್ದವರನ್ನು ಕಳುಹಿಸಿಕೊಡಲಾಯಿತು’ ಎಂದು ಹಿರಿಯ ಆರೋಗ್ಯ ಅಧಿಕಾರಿ ಶಶಿಭೂಷಣ್‌ ಹಿರೇಮಠ ‘ಪ್ರಜಾವಾಣಿ’ಗೆ ತಿಳಿಸಿದ್ದಾರೆ. ನೋಡಲ್‌ ಎಂಜಿನಿಯರ್‌ ಹನುಮಂತಪ್ಪ, ಪೊಲೀಸ್‌ ಸಿಬ್ಬಂದಿ ಇದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು