ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಮಹಿಳಾ ಪ್ರಾತಿನಿಧ್ಯದಿಂದ ಸಮಾಜ ಪರಿಪೂರ್ಣ’

ಕಾನೂನು ಸೇವಾ ಸಮಿತಿ, ಕನ್ನಡ ವಿಶ್ವವಿದ್ಯಾಲಯ, ಜನನಿ ಸಂಘದಿಂದ ಮಹಿಳಾ ದಿನಾಚರಣೆ
Last Updated 9 ಮಾರ್ಚ್ 2022, 12:30 IST
ಅಕ್ಷರ ಗಾತ್ರ

ಹೊಸಪೇಟೆ (ವಿಜಯನಗರ): ವಿವಿಧ ಸಂಘಟನೆಗಳಿಂದ ಮಂಗಳವಾರ ಹಲವೆಡೆ ಅಂತರರಾಷ್ಟ್ರೀಯ ಮಹಿಳಾ ದಿನ ಆಚರಿಸಲಾಯಿತು. ಅದರ ವಿವರ ಇಂತಿದೆ.

ಹಂಪಿ ಕನ್ನಡ ವಿಶ್ವವಿದ್ಯಾಲಯ:

ಮಹಿಳಾ ಅಧ್ಯಯನ ವಿಭಾಗ, ಅಲ್ಲಂ ಸುಮಂಗಲಮ್ಮ ಮತ್ತು ಅಲ್ಲಂ ಕರಿಬಸಪ್ಪ ದತ್ತಿ ನಿಧಿ, ಯುಜಿಸಿ ಸಹಭಾಗಿತ್ವದಲ್ಲಿ ಮಹಿಳಾ ಅಧ್ಯಯನ ಕೇಂದ್ರ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಕುಲಪತಿ ಪ್ರೊ.ಸ.ಚಿ. ರಮೇಶ ಮಾತನಾಡಿ, ಒಬ್ಬ ವ್ಯಕ್ತಿ, ಕುಟುಂಬ ಮತ್ತು ಸಮಾಜ ಪರಿಪೂರ್ಣವಾಗಬೇಕಾದರೆ ಮಹಿಳಾ ಪ್ರಾತಿನಿಧ್ಯ ಬಹಳ ಮುಖ್ಯ ಎಂದರು.

ಸಮಾಜಶಾಸ್ತ್ರ ಅಧ್ಯಯನ ವಿಭಾಗದ ಪ್ರಾಧ್ಯಾಪಕಿ ಎಸ್. ಜಯಶ್ರೀ, ಕಾರ್ಯಕಾರಿ ಸಮಿತಿ ಸದಸ್ಯೆ ನಯನಶ್ರೀ, ಆಡಳಿತ ಮಂಡಳಿ ಸದಸ್ಯೆ ರಾಜೇಶ್ವರಿ ನಾಯ್ಡು, ಪ್ರಾಧ್ಯಾಪಕರಾದ ಶಿವಾನಂದ ವಿರಕ್ತಮಠ, ತಾಯಿಶ್ರೀ, ಸುಮಲತಾ ಇದ್ದರು.

ಕಾನೂನು ಸೇವಾ ಸಮಿತಿ, ವಕೀಲರ ಸಂಘ:

ಜಿಲ್ಲಾ ಸತ್ರ ನ್ಯಾಯಾಧೀಶ ಶುಭವೀರ್ ಜೈನ್ ಮಾತನಾಡಿ, ಮಹಿಳೆಯರು ಉನ್ನತ ಸ್ಥಾನ ಗಳಿಸುತ್ತಿರುವುದು ಸಂತಸದ ಸಂಗತಿ. ಸ್ವತಂತ್ರವಾಗಿ ತಮ್ಮ ಕಾರ್ಯಸಿದ್ಧಿ ಕೈಗೊಂಡಾಗ ಯಶಸ್ಸು ಸಿಗುತ್ತದೆ‌. ಪ್ರತಿಯೊಬ್ಬರು ತಮ್ಮ ಹಕ್ಕುಗಳ ಜೊತೆಗೆ ಕರ್ತವ್ಯದ ಬಗ್ಗೆ ತಿಳಿದುಕೊಂಡಾಗ ಸಮಾನತೆ ನೆಲೆಸುತ್ತದೆ ಎಂದರು.

ಹೆಚ್ಚುವರಿ ಸಿವಿಲ್ ಮತ್ತು ಜೆಎಂಎಫ್‌ಸಿ ನ್ಯಾಯಾಧೀಶೆ ತೃಪ್ತಿ ಧರಣಿ,ತಾಲ್ಲೂಕು ಕಾನೂನು ಸೇವಾ ಸಮಿತಿ ಅಧ್ಯಕ್ಷ ಪದ್ಮ ಪ್ರಸಾದ್, ಸದಸ್ಯ ಕಾರ್ಯದರ್ಶಿ ಕಿಶನ್ ಬಿ.ಮಾಡಲಗಿ, 2ನೇ ಹೆಚ್ಚುವರಿ ಸಿವಿಲ್ ಮತ್ತು ಜೆಎಂಎಫ್‌ಸಿ ನ್ಯಾಯಾಧೀಶ ಜಿ.ಸಂಜೀವ್ ಕುಮಾರ್, ವಕೀಲರ ಸಂಘದ ಅಧ್ಯಕ್ಷ ಕೆ.ವಿ.ಬಸವರಾಜ, ಪ್ರಧಾನ ಕಾರ್ಯದರ್ಶಿ ಎ.ಕರುಣಾನಿಧಿ, ಗೀತಾ, ಜೆ.ತ್ರಿವೇಣಿ, ರೇಣುಕಾ, ಸುಧಾ ಜೋಷಿ ಇದ್ದರು.

ಜನನಿ ಮಹಿಳಾ ಸಬಲೀಕರಣ ಸಮಿತಿ:

‘ಹೆಣ್ಣಿಗೆ ಅನುಕಂಪ ಸಿಗುವ ಬದಲಾಗಿ ಹಕ್ಕು ದೊರಕಿದಾಗ ಸಾಧನೆಗೆ ಹಾದಿ ಸಿಗುತ್ತದೆ. ಮಹಿಳೆಯರು ನಿರಾಯಾಸವಾಗಿ ಮುಖ್ಯವಾಹಿನಿಗೆ ಬರಬಹುದು’ ಎಂದು ಮಹಿಳಾ ಹೋರಾಟಗಾರ್ತಿ ಲೀಲಾ ಮಲ್ಲಿಕಾರ್ಜುನ ತಿಳಿಸಿದರು.

ಪ್ರಭಾರ ತಹಶೀಲ್ದಾರ್ ಮೇಘ, ಸಾವಿತ್ರಿಬಾಯಿ ಫುಲೆ ಶಿಕ್ಷಕಿಯರ ಸಂಘದ ಜಿಲ್ಲಾಧ್ಯಕ್ಷೆ ಉಮಾದೇವಿ, ಶಿಶು ಅಭಿವೃದ್ಧಿ ಯೋಜನಾಧಿಕಾರಿ ಸಿಂಧು ಯಲಿಗಾರ್, ಜನನಿ ಸಮಿತಿಯ ಅಧ್ಯಕ್ಷೆ ಗೀತಾಶಂಕರ್, ಪ್ರಧಾನ ಕಾರ್ಯದರ್ಶಿ ಹುಲಿಗೆಮ್ಮ, ಸ್ವಾತಿಸಿಂಗ್, ರೇಖಾರಾಣಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT