ಹೊಸಪೇಟೆ (ವಿಜಯನಗರ): ಪೊಲೀಸರು ಒತ್ತಡದಲ್ಲೇ ತಮ್ಮ ಕರ್ತವ್ಯ ನಿರ್ವಹಿಸಬೇಕು, ಅದರಲ್ಲೂ ಮಹಿಳಾ ಪೊಲೀಸರ ಒತ್ತಡ ಇನ್ನೊಂದು ಬಗೆಯದು. ಆಟೋಟ, ಮನರಂಜನಾ ಕಾರ್ಯಕ್ರಮಗಳ ಮೂಲಕ ಇಂತಹ ಒತ್ತಡವನ್ನು ಒಂದಿಷ್ಟು ಮಟ್ಟಿಗೆ ಕಡಿಮೆಗೊಳಿಸುವ ಪ್ರಯತ್ನ ಭಾನುವಾರ ಇಲ್ಲಿ ಜಿಲ್ಲಾ ಪೊಲೀಸ್ ಅಧೀಕ್ಷಕರಾದ ಎಸ್.ಜಾಹ್ನವಿ ಅವರ ನೇತೃತ್ವದಲ್ಲಿ ನಡೆಯಿತು.

ಎಸ್ಪಿ ಕಚೇರಿಯಲ್ಲಿ ಸಭಾ ಕಾರ್ಯಕ್ರಮ ನಡೆದ ಬಳಿಕ ಪೊಲೀಸ್ ಪರೇಡ್ ಮೈದಾನದಲ್ಲಿ ಹಲವು ಆಟೋಟಗಳು, ಮನರಂಜನಾ ಕಾರ್ಯಕ್ರಮಗಳು ನಡೆದವು. ಜಿಲ್ಲೆಯ ಮೂರೂ ಪೊಲೀಸ್ ಉಪವಿಭಾಗಗಳು ಸೇರಿ ಸುಮಾರು 130ರಷ್ಟು ಮಹಿಳಾ ಸಿಬ್ಬಂದಿ ಕರ್ತವ್ಯದಲ್ಲಿದ್ದು, ಬಹುತೇಕ ಎಲ್ಲರೂ ಪಾಲ್ಗೊಂಡಿದ್ದರು. ನಿಜವಾದ ಅರ್ಥದಲ್ಲಿ ಮಹಿಳಾ ದಿನಾಚರಣೆ ನಡೆಯಿತು.

‘ಶಿಕ್ಷಣ ನಮ್ಮ ಪ್ರಗತಿಗೆ ಪ್ರಬಲ ಅಸ್ತ್ರವಾಗಬೇಕು’ ಎಂಬ ಸಂದೇಶ ಸಾರಿದ ಎಸ್ಪಿ ಎಸ್.ಜಾಹ್ನವಿ, ಮಹಿಳೆಯರು ಇಂದು ಎಲ್ಲಾ ಕ್ಷೇತ್ರಗಳಲ್ಲೂ ಗಮನಾರ್ಹ ಸಾಧನೆ ಮಾಡುತ್ತಿದ್ದಾರೆ, ಅದು ಹೆಮ್ಮೆಯ ಸಂಗತಿ. ಜತೆಗೆ ಮಹಿಳಾ ಪೊಲೀಸ್ ಸಿಬ್ಬಂದಿ ತಮ್ಮ ಒತ್ತಡ ಕಡಿಮೆ ಮಾಡಿಕೊಳ್ಳುವ ನಿಟ್ಟಿನಲ್ಲಿ ಪ್ರಯತ್ನ ಮಾಡಬೇಕು ಎಂದರು.

ಕಾರ್ಯಕ್ರಮದಲ್ಲಿ ಹೆಚ್ಚುವರಿ ಸಿವಿಲ್ ನ್ಯಾಯಾಧೀಶೆ ಹಾಗೂ ಜೆಎಂಎಫ್ಸಿ ಜೆ.ಚೈತ್ರಾ, ಎರಡನೇ ಹೆಚ್ಚುವರಿ ಸಿವಿಲ್ ನ್ಯಾಯಾಧೀಶೆ ಮತ್ತು ಜೆಎಂಎಫ್ಸಿ ಶೃತಿ ತೇಲಿ ಪಾಲ್ಗೊಂಡಿದ್ದರು.

ಪ್ರತಿಭೆ ಪ್ರದರ್ಶನ: ಬಳಿಕ ಪೊಲೀಸ್ ಪರೇಡ್ ಮೈದಾನದಲ್ಲಿ ಮಹಿಳಾ ಪೊಲೀಸ್ ಸಿಬ್ಬಂದಿಗಾಗಿ ವಿವಿಧ ಆಟೋಟ ಸ್ಪರ್ಧೆಗಳು, ಮನರಂಜನಾ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಯಿತು. ಕೆಲವರು ರ್ಯಾಂಪ್ ವಾಕ್ ಮಾಡಿ ವಿಶ್ವ ಸುಂದರಿ ಸ್ಪರ್ಧೆಗೆ ತಾವೂ ಸೈ ಎಂಬುದನ್ನು ತೋರಿಸಿಕೊಟ್ಟರು. ಉಳಿದಂತೆ ನೃತ್ಯ, ಮ್ಯೂಸಿಕ್ ಚೇರ್ ವಿವಿಧ ವಿನೋದಾವಳಿಗಳು ನಡೆದವು.

‘ಜಾಗೃತಿ ಸಮಯ ಮುಗಿಯಿತು’

‘ದೋಷಪೂರಿತ ನಂಬರ್ ಪ್ಲೇಟ್ನೊಂದಿಗೆ ವಾಹನ ಸವಾರಿ ಮಾಡಲೇಬಾರದು. ಅದರ ಬಗ್ಗೆ ಈಗಾಗಲೇ ಹಲವು ತಿಂಗಳ ಅರಿವು ಮೂಡಿಸಲಾಗಿದೆ ಇದೀಗ ಕಟ್ಟುನಿಟ್ಟಾಗಿ ನಿಯಮ ಪಾಲನೆ ಜಾರಿಯಾಗಿದೆ. ಎಲ್ಲರೂ ಇದನ್ನು ಪಾಲಿಸಬೇಕು. ತಪ್ಪಿದಲ್ಲಿ ದಂಡ ನಿಶ್ಚಿತ. ಇದರ ಜತೆಗೆ ಹೆಲ್ಮೆಟ್ ಕಡ್ಡಾಯ ಸಂಬಂಧ ಪ್ರತ್ಯೇಕ ನಿಯಮವೂ ಇಲ್ಲ. ಎಲ್ಲರೂ ಹೆಲ್ಮೆಟ್ ಧರಿಸಬೇಕು. ಅದಕ್ಕಾಗಿ ದಂಡ ವಿಧಿಸಿದರೆ ಅದನ್ನು ಆಕ್ಷೇಪಿಸುವಂತಿಲ್ಲ’ ಎಂದು ಎಸ್ಪಿ ಜಾಹ್ನವಿ ಅವರು ‘ಪ್ರಜಾವಾಣಿ’ ಜತೆಗೆ ಮಾತನಾಡುತ್ತ ಖಡಕ್ ಎಚ್ಚರಿಕೆ ನೀಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.