ಹರಪನಹಳ್ಳಿ (ವಿಜಯನಗರ ಜಿಲ್ಲೆ): ತಾಲ್ಲೂಕಿನ ಯರಬಾಳು ಗ್ರಾಮದಲ್ಲಿ ಮುಸಿಯಾ ( ವನ್ಯಜೀವಿ) ದಾಳಿ ಮಾಡಿದ ಪರಿಣಾಮ ಐದು ತಿಂಗಳಲ್ಲಿ 12ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದು, ಗ್ರಾಮಸ್ಥರು ಆತಂಕಗೊಂಡಿದ್ದಾರೆ.

ಐದು ತಿಂಗಳಿಂದ ಗ್ರಾಮದಲ್ಲೇ ಬೀಡುಬಿಟ್ಟಿರುವ ಮುಸಿಯಾ,

ಕಳೆದ ಒಂದು ತಿಂಗಳಲ್ಲಿ 8ಕ್ಕೂ ಹೆಚ್ಚು ಜನರಿಗೆ ಕಚ್ಚಿ ಗಾಯಗೊಳಿಸಿದೆ. ಇದರಿಂದಾಗಿ ಇಡೀ ಗ್ರಾಮಸ್ಥರು ಮನೆಯಿಂದ ಹೊರಬರಲು ಹಿಂದೇಟು ಹಾಕುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ.

ವಿಪರೀತವಾಗಿ ವರ್ತಿಸುತ್ತಿರುವ ಮುಸಿಯಾ, ಕಂಡ ಕಂಡವರ ಮೇಲೆ ಎರಗುತ್ತಿದೆ. ಈಗಾಗಲೇ ಎನ್. ಮಂಜಪ್ಪ, ಹನುಮಂತಪ್ಪ, ಹಾಲನಗೌಡ, ಪ್ರಹ್ಲಾದ್, ನವೀನ್, ಬಸವರಾಜ್, ಪ್ರಕಾಶ್ ಸೇರಿದಂತೆ 12ಕ್ಕೂ ಹೆಚ್ಚು ಜನರಿಗೆ ಕಚ್ಚಿ ತೀವ್ರವಾಗಿ ಗಾಯಗೊಳಿಸಿದೆ. ಗಾಯಾಳುಗಳಿಗೆ ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗಿದೆ.

ರೈತರು ಟ್ರಾಕ್ಟರ್ ನಲ್ಲಿ ಜಮೀನಿಗೆ ಹೋಗುತ್ತಿರುವಾಗ ಹೆಚ್ಚಿನ ಸಲ ದಾಳಿ ಮಾಡಿದೆ ಎಂದು ಗಾಯಾಳು ಪ್ರಕಾಶ್ ತಿಳಿಸಿದರು.

"ದಿನದಿಂದ ದಿನಕ್ಕೆ ಗಾಯಾಳುಗಳ ಸಂಖ್ಯೆ ಹೆಚ್ಚಾಗುತ್ತಿದೆ. ಅರಣ್ಯ ಇಲಾಖೆ ಅಧಿಕಾರಿಗಳು ಮುಸಿಯಾವನ್ನು ಸೆರೆಹಿಡಿದು ನಮ್ಮ ಗ್ರಾಮಕ್ಕೆ ನೆಮ್ಮದಿ ಒದಗಿಸಬೇಕು" ಎಂದು ಯರಬಾಳು ಗ್ರಾಮಸ್ಥರು ಒಕ್ಕೊರಲಿನಿಂದ ಆಗ್ರಹಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.