ಹೊಸಪೇಟೆ (ವಿಜಯನಗರ): ಯೋಗ ಕೇವಲ ವ್ಯಾಯಾಮವಲ್ಲ; ಅದು ಅಂತರಂಗಕ್ಕೆ ಸಂಬಂಧಿಸಿದ ಶುದ್ಧ ವಿಜ್ಞಾನ ಹಾಗೂ ಗಣಿತ. ಯಾವುದೇ ಬಂಧನಗಳಿಲ್ಲದ ಬಯಲು ಯೋಗವಾಗಿ ಇದು ವಿಶ್ವಕ್ಕೆ ತೆರೆದುಕೊಳ್ಳಬೇಕು ಎಂದು ಕೊಟ್ಟೂರು ಸಂಸ್ಥಾನ ಮಠದ ಬಸವಲಿಂಗ ಮಹಾಸ್ವಾಮೀಜಿ ಹೇಳಿದರು.

ಹಂಪಿ ಕನ್ನಡ ವಿಶ್ವವಿದ್ಯಾಲಯದ ಯೋಗ ಅಧ್ಯಯನ ವಿಭಾಗ, ಹರಪನಹಳ್ಳಿಯ ಜನನಿ ಯೋಗ ಮತ್ತು ಪ್ರಕೃತಿ ಚಿಕಿತ್ಸಾ ಆಸ್ಪತ್ರೆ ಹಾಗೂ ಸಂಶೋಧನಾ ಕೇಂದ್ರ, ಪತಂಜಲಿ ಯೋಗ ಸಮಿತಿ ಹಾಗೂ ಮಠದ ಸಂಯುಕ್ತ ಆಶ್ರಯದಲ್ಲಿ ಸೋಮವಾರ ಯೋಗ ಪರಂಪರೆ ಕುರಿತು ಆಯೋಜಿಸಿದ್ದ ರಾಜ್ಯಮಟ್ಟದ ವಿಚಾರ ಸಂಕಿರಣದ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.

ಧರ್ಮ ಮತ್ತು ಅಧ್ಯಾತ್ಮ ಎರಡೂ ಭಿನ್ನ. ಜೀವನ ಸಾರ್ಥಕತೆಗೆ ಅಧ್ಯಾತ್ಮ ಅಗತ್ಯ. ಅಧ್ಯಾತ್ಮ ಯೋಗಯುಕ್ತವಾದಾಗ ಅದು ಸಮಾಜಕ್ಕೆ ಪ್ರಯೋಜವಾಗುತ್ತದೆ. ಯೋಗವನ್ನು ಯೋಗಿಗಳಷ್ಟೇ ಮಾಡಬೇಕೆಂಬುದು ತಪ್ಪು ಕಲ್ಪನೆ, ಭೋಗ ಜೀವನದಲ್ಲಿ ಸರಿಯಾಗಿ ಭೋಗಿಸಲು ಸಹ ಯೋಗ ಮಾಡಬೇಕು ಎಂಬುದನ್ನು ತಿಳಿದುಕೊಳ್ಳಬೇಕು ಎಂದರು.

ಕೇವಲ ಆಸನ ಯೋಗವಲ್ಲ. ಯಮ, ನಿಯಮ, ಪ್ರತ್ಯಾಹಾರಗಳಿಲ್ಲದ ಯೋಗಾಸನ ನಿರರ್ಥಕ. ಜೀವನದ ಒತ್ತಡಗಳಿಂದ ಮುಕ್ತಿ ಪಡೆಯಲು ಯೋಗವೊಂದೇ ಸಾಧನ ಎಂದು ಹೇಳಿದರು.

ಅಧ್ಯಕ್ಷತೆ ವಹಿಸಿದ್ದ ಕುಲಪತಿ ಪ್ರೊ.ಡಿ.ವಿ.ಪರಮಶಿವಮೂರ್ತಿ ಮಾತನಾಡಿ, ಯುದ್ಧೋನ್ಮಾದದಲ್ಲಿರುವ ಇಂದಿನ ಸ್ಥಿತಿಯಲ್ಲಿ ಭಾರತ ನಿರ್ಲಿಪ್ತವಾಗಿ ಯೋಗದ ಮೂಲಕ ವಿಶ್ವಶಾಂತಿಯ ಸಂದೇಶವನ್ನು ಸಾರುತ್ತಿದೆ. ಇದು ದೇಹ ಮತ್ತು ಮನಸ್ಸನ್ನು ಬೆಸೆಯುವ ಕೊಂಡಿ’ ಎಂದರು

ಪತಂಜಲಿ ಯೋಗ ಸಮಿತಿಯ ರಾಜ್ಯ ಪ್ರಭಾರಿ ಡಾ.ಭವರ್ಲಾಲ್ ಆರ್ಯ ಮಾತನಾಡಿ, ಜಗತ್ತಿಗೆ ಯೋಗ ಪರಿಚಯಿಸಿದವರಲ್ಲಿ ಕನ್ನಡಿಗರೇ ಮುಂಚೂಣಿಯಲ್ಲಿರುವುದು ವಿಶೇಷ. ಮಾನವನನ್ನು ಮಹಾಮಾನವನ್ನಾಗಿ ಮಾಡುವ ಶಕ್ತಿ ಯೋಗಕ್ಕಿದೆ’ ಎಂದರು.

ಯೋಗ ವಿಭಾಗದ ನಿರ್ದೇಶಕ ಪ್ರೊ.ಮಾಧವ ಪೆರಾಜೆ ಪ್ರಾಸ್ತಾವಿಕ ಮಾತನಾಡಿದರು. ಅತಿಥಿ ಉಪನ್ಯಾಸಕ ಕೃಷ್ಣ ನಾಯ್ಕ್, ಸಿದ್ದರಾಮೇಶ ಸಹಕರಿಸಿದರು.

ಪ್ರಾಚೀನ ಕನ್ನಡ ಸಾಹಿತ್ಯ, ವಚನ ಸಾಹಿತ್ಯ, ದಾಸಸಾಹಿತ್ಯದಲ್ಲಿ ಯೋಗದ ಪರಿಕಲ್ಪನೆ ಎಂಬ ವಿಚಾರವಾಗಿ ಪ್ರೊ.ಎಫ್.ಟಿ.ಹಳ್ಳಿಕೇರಿ, ಬಸವರಾಜಸ್ವಾಮಿ, ಲಕ್ಷ್ಮೀಕಾಂತ ಕೆದ್ಲಾಯ ವಿಚಾರ ಮಂಡಿಸಿದರು. ತತ್ವಶಾಸ್ತ್ರದಲ್ಲಿ ಯೋಗದ ಪರಿಕಲ್ಪನೆ ಬಗ್ಗೆ ಪ್ರೊ.ಐ.ಎಸ್.ಕುಂಬಾರ್, ದೃಶ್ಯಕಲೆಗಳಲ್ಲಿ ಯೋಗ ಪರಿಕಲ್ಪನೆ ಬಗ್ಗೆ ಪ್ರೊ.ಮೋಹನ್ ಪಾಂಜಾಳ್, ಶಾಸನಗಳಲ್ಲಿ ಯೋಗ ಕಲ್ಪನೆ ಬಗ್ಗೆ ಪ್ರೊ.ಅಮರೇಶ್ ಯಾತಗಲ್ ವಿಚಾರ ಮಂಡಿಸಿದರು. ಪ್ರೊ.ಶಿವಾನಂದ ವಿರಕ್ತಮಠ ಅವರ ಅಧ್ಯಕ್ಷತೆಯಲ್ಲಿ ಸಂವಾದ ಗೋಷ್ಠಿ ನಡೆಯಿತು.

ಸಮಾರೋಪ ಸಮಾರಂಭದಲ್ಲಿ ಕನ್ನಡ ವಿವಿ ಲಲಿತಕಲೆಗಳ ನಿಕಾಯದ ಪ್ರೊ.ಶಿವಾನಂದ ವಿರಕ್ತಮಠ, ಪತಂಜಲಿ ಸಮಿತಿಯ ಬಾಲಚಂದ್ರ ಶರ್ಮಾ, ಜನನಿ ಯೋಗ ಮತ್ತು ಪ್ರಕೃತಿ ಚಿಕಿತ್ಸಾ ಕೇಂದ್ರದ ಸಾರ್ವಜನಿಕ ಸಂಪರ್ಕ ವಿಭಾಗದ ಮುಖ್ಯಸ್ಥ ಉದಯಶಂಕರ ಭಟ್ ಇದ್ದರು. ಕುಲಸಚಿವ ಪ್ರೊ.ವಿರೂಪಾಕ್ಷಿ ಪೂಜಾರಹಳ್ಳಿ ಅಧ್ಯಕ್ಷತೆ ವಹಿಸಿದ್ದರು.

‘ಯೋಗ ಎನ್ನುವುದು ತತ್ವಜ್ಞಾನ ವಿಜ್ಞಾನ’ ದಿಕ್ಸೂಚಿ ಭಾಷಣ ಮಾಡಿದ ಜನನಿ ಯೋಗ ಮತ್ತು ಪ್ರಕೃತಿ ಚಿಕಿತ್ಸಾ ಆಸ್ಪತ್ರೆಯ ನಿರ್ದೇಶಕ ಡಾ.ರಾಜೇಶ್ ಪಾದೇಕಲ್ ಯೋಗ ಎನ್ನುವುದು ತತ್ವಜ್ಞಾನ ಹಾಗೂ ವಿಜ್ಞಾನ. ಇದನ್ನು ಜೀವನದಲ್ಲಿ ಹೇಗೆ ಅಳವಡಿಸಿಕೊಳ್ಳಬೇಕು ಎನ್ನುವ ಅವಲೋಕನ ಅಗತ್ಯ ಎಂದು ಪ್ರತಿಪಾದಿಸಿದರು. ಭಾರತೀಯ ತತ್ವಶಾಸ್ತ್ರದ ಷಡ್ದರ್ಶನಗಳಲ್ಲಿ ಯೋಗ ಮುಖ್ಯವಾದದ್ದು. ನಿತ್ಯಜೀವನದಲ್ಲಿ ಯೋಗ ಅಳವಡಿಸಿಕೊಂಡರೆ ಮಾತ್ರ ಸರ್ವಾಂಗೀಣ ಅಭಿವೃದ್ಧಿ ಸಾಧ್ಯ ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.