ಹೊಸಪೇಟೆ (ವಿಜಯನಗರ): ರಾಜ್ಯದಲ್ಲಿಯೇ ಪ್ರಥಮ ಬಾರಿಗೆ ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮದ (ಕೆಕೆಆರ್ಟಿಸಿ) ವಿಜಯನಗರ ವಿಭಾಗದಲ್ಲಿ ಜನವರಿ 1ರಿಂದ ಆರಂಭಿಸಿದ ‘ಚಕ್ರದ ಮೇಲಿನ ಹೀರೋಗಳು’, ’ಶೂನ್ಯ ಅಪಘಾತ’ ಮತ್ತು ‘ರಸ್ತೆ ಮೇಲೆ ಕೆಟ್ಟು ನಿಲ್ಲುವ ವಾಹನಗಳನ್ನು ಶೂನ್ಯಕ್ಕೆ ಇಳಿಕೆ’ ಅಭಿಯಾನಕ್ಕೆ ಫಲ ದೊರೆಯತೊಡಗಿದೆ ಎಂದು ಹಿರಿಯ ವಿಭಾಗೀಯ ನಿಯಂತ್ರಣಾಧಿಕಾರಿ ರಾಜೇಶ ಹುದ್ದಾರ್ ಹೇಳಿದರು.

ಇಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 2024–25ರಲ್ಲಿ ಜಿಲ್ಲೆಯಲ್ಲಿ 74 ಅಪಘಾತಗಳು ಸಂಭವಿಸಿದ್ದವು. ಆದರೆ ಕಳೆದ 70 ದಿನಗಳಲ್ಲಿ ಕೇವಲ 1 ಅಪಘಾತವಷ್ಟೇ ಸಂಭವಿಸಿದೆ. 2025ರಲ್ಲಿ ಬಸ್ಗಳು ರಸ್ತೆ ಮಧ್ಯೆ ಕೆಟ್ಟು ನಿಂತ 420 ಪ್ರಕರಣಗಳು ದಾಖಲಾಗಿದ್ದರೆ, ಈ ವರ್ಷ 70 ದಿನಗಳಲ್ಲಿ ಕೇವಲ 16 ಪ್ರಕರಣಗಳಷ್ಟೇ ನಡೆದಿವೆ ಎಂದರು.

‘ರೋಗಿಗಳಿಗೆ ವೈದ್ಯರು ಹೇಗೆ ದೇವರೋ, ಪ್ರಯಾಣಿಕರನ್ನು ಸುರಕ್ಷಿತವಾಗಿ ಕರೆದೊಯ್ಯುವ ಚಾಲಕರೂ ಪ್ರಯಾಣಿಕರ ಪಾಲಿಗೆ ದೇವರು. ಇದೇ ಪರಿಕಲ್ಪನೆಯಲ್ಲಿ ಚಾಲಕರ ಅಪಘಾತ ರಹಿತ ಸೇವೆಯನ್ನು ಗುರುತಿಸಿ ಜಿಲ್ಲೆಯಲ್ಲಿ 316 ಚಾಲಕರನ್ನು ಗೌರವಿಸಲಾಗಿದೆ. ಪದೇ ಪದೇ ಅಪಘಾತ ಮಾಡಿದ ಒಬ್ಬ ಚಾಲಕರನ್ನು ವಜಾಗೊಳಿಸುವ ಮೂಲಕ ಎಚ್ಚರಿಕೆ ಸಂದೇಶವನ್ನೂ ರವಾನಿಸಲಾಗಿದೆ. ಚಾಲನಾ ಸಮಯುದಲ್ಲಿ ಪ್ರತಿ ಕ್ಷಣ ಏಕಾಗ್ರತೆ ವಹಿಸಿ ಚಾಲನೆ ಮಾಡುವ ಕುರಿತಂತೆ ಮನವರಿಕೆ ಮಾಡುವ ಕೆಲಸವನ್ನು ಯಶಸ್ವಿಯಾಗಿ ನಡೆಸಲಾಗಿದೆ. ಇದು ಫಲ ನೀಡುತ್ತಿದೆ’ ಎಂದು ರಾಜೇಶ ಹುದ್ದಾರ್ ಹೇಳಿದರು.

ಬಸ್ ಸಮೀಕ್ಷೆ: ಬಸ್ಗಳು ರಸ್ತೆ ಮಧ್ಯೆ ಕೆಟ್ಟು ನಿಲ್ಲುವುದರಿಂದ ಹಲವು ಸಮಸ್ಯೆಗಳು ಹಾಗೂ ನಿಗಮಕ್ಕೆ ನಷ್ಟ ಉಂಟಾಗುತ್ತದೆ. ಇದನ್ನು ತಪ್ಪಿಸಲು ಬಸ್ಗಳ ಸ್ಥಿತಿಗತಿ ತಿಳಿಯಲು ಸಮೀಕ್ಷೆಯನ್ನು ಕಳೆದ ಸೆಪ್ಟೆಂಬರ್ನಲ್ಲಿ ಆರಂಭಿಸಲಾಯಿತು. ಅದರ ಬಳಿಕ ಬಸ್ಗಳ ಬಿಡಿಭಾಗಗಳ ಪೂರೈಕೆ ಸುಧಾರಿಸಲಾಯಿತು. ಹೀಗಾಗಿ ಪ್ರತಿ ತಿಂಗಳು ಸರಾಸರಿ 25 ಬಸ್ಗಳು ಕೆಟ್ಟು ನಿಲ್ಲುವ ಸಂಖ್ಯೆ ಇದೀಗ 7ಕ್ಕೆ ಇಳಿದಿದೆ ಎಂದು ಅವರು ಮಾಹಿತಿ ನೀಡಿದರು.

ವಿಭಾಗದಲ್ಲಿರುವ 1,900 ಸಿಬ್ಬಂದಿಯ ಪೈಕಿ 600 ಚಾಲಕರು, 500 ನಿರ್ವಾಹಕರು ಹಾಗೂ 328 ಮೆಕ್ಯಾನಿಕ್ಗಳು ಇದ್ದಾರೆ. 120 ಗುತ್ತಿಗೆ ಆಧಾರದಲ್ಲಿ ಚಾಲಕರಿದ್ದಾರೆ. ಇದೀಗ ಬಂದಿರುವ ಬಿ 6 ತಂತ್ರಜ್ಞಾನದಿಂದಾಗಿ ಚಾಲಕರ ಚಾಲನಾ ಕೌಶಲ, ತಪ್ಪುಗಳು ಬಸ್ನಲ್ಲೇ ದಾಖಲಾಗುತ್ತವೆ. ಅದರ ಆಧಾರದಲ್ಲೇ ಅವರಿಗೆ ತಿಳಿವಳಿಕೆ ನೀಡುವ ಕೆಲಸ ನಡೆಯುತ್ತಿದೆ ಎಂದರು.

ನಿಗಮದ ವಿಭಾಗೀಯ ತಾಂತ್ರಿಕ ಎಂಜಿನಿಯರ್ ನಾಗರಾಜ್, ಚಾಲಕ ಕೆ.ರವಿಕುಮಾರ್, ನಿರ್ವಾಹಕ ಮಲ್ಲಿಕಾರ್ಜುನ, ಮೆಕ್ಯಾನಿಕ್ ಎಲ್.ಎನ್.ಪಾಂಡು ನಾಯ್ಕ ಇದ್ದರು.

ಫ್ಲೈಓವರ್ ಆದ ಬಳಿಕ ಸುಧಾರಣೆ

ಒಟ್ಟು 25 ನಗರ ಸಾರಿಗೆ ಬಸ್ಗಳ ಪೈಕಿ ಸದ್ಯ 9 ಮಾತ್ರ ನಗರದಲ್ಲಿ ಸಂಚರಿಸುತ್ತಿದ್ದು 16 ಹೊರಗಡೆಗೆ ತೆರಳುತ್ತಿವೆ. ಅನಂತಶಯನಗುಡಿ ರೈಲ್ವೆ ಫ್ಲೈಓವರ್ ಸಿದ್ಧವಾದ ಬಳಿಕ ಎಲ್ಲಾ ಬಸ್ಗಳನ್ನು ನಗರ ಮತ್ತು ಸುತ್ತಮುತ್ತಲಲ್ಲೇ ಓಡಿಸಲು ಯೋಜನೆ ರೂಪಿಸಲಾಗುವುದು. ರಾಜಾಪುರ ಕಲ್ಲಹಳ್ಳಿ ಮರಿಯಮ್ಮನಹಳ್ಳಿ ಹಂಪಿ ಸಹಿತ ನಗರ ಮತ್ತು ಸುತ್ತಮುತ್ತ ಸ್ವಲ್ಪ ದೂರಕ್ಕೆ ಬಸ್ ಓಡಿಸುವ ಯೋಜನೆ ಇದೆ ಎಂದು ಡಿ.ಸಿ ರಾಜೇಶ ಹುದ್ದಾರ್ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.