ಮಂಗಳವಾರ, ನವೆಂಬರ್ 19, 2019
29 °C

ವಿಜಯಪುರದಲ್ಲಿ ನಾಲ್ಕು ಮಕ್ಕಳಿಗೆ ಜನ್ಮ ನೀಡಿದ ತಾಯಿ

Published:
Updated:

ವಿಜಯಪುರ: ಇಬ್ಬರು ಹೆಣ್ಣು ಮಕ್ಕಳನ್ನು ಹೊಂದಿರುವ ತಾಯಿಯೊಬ್ಬರು ಟೆಸ್ಟ್ ಟ್ಯೂಬ್ ಮೂಲಕ ನಾಲ್ಕು ಮಕ್ಕಳಿಗೆ ಇಲ್ಲಿ ಜನ್ಮ ನೀಡಿದ್ದಾರೆ.

ರಾಜಸ್ಥಾನದ ದಾಲಿಬಾಯಿ ಸಗನಲಾಲ್ ಸಂದೇಶ ಎಂಬುವರು ನಾಲ್ಕು ಮಕ್ಕಳಿಗೆ ಜನ್ಮ ನೀಡಿದವರು.
ಇವರು ರಾಜಸ್ಥಾನದ ಜಾಲೋರ್ ಜಿಲ್ಲೆಯ ನೌಸ್ರಾ ಗ್ರಾಮದವರು. 20 ವರ್ಷಗಳಿಂದ ಇಲ್ಲಿಯೇ ನೆಲೆಸಿದ್ದಾರೆ.

ಇವರಿಗೆ ವಿಮಲಾ (ಮದುವೆಯಾಗಿದೆ), ಗುಡ್ಡಿ ಎಂಬ ಹೆಣ್ಣು ಮಕ್ಕಳಿದ್ದು ಲಲಿತ್ (ಮಗ) ಮೃತಪಟ್ಟಿದ್ದಾನೆ.
ತಮ್ಮನ್ನು ನೋಡಿಕೊಳ್ಳಲು ಗಂಡು ಮಗು ಬೇಕು ಎಂಬ ಕಾರಣದಿಂದ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಟೆಸ್ಟ್ ಟ್ಯೂಬ್ (ಪ್ರಣಾಳ ಶಿಶು) ಚಿಕಿತ್ಸೆ ತೆಗೆದುಕೊಂಡಿದ್ದಾರೆ.

ಈಗ ಅವರಿಗೆ ಎಂಟು ತಿಂಗಳು ಆಗಿತ್ತು. ಎರಡು ಗಂಡು, ಎರಡು ಹೆಣ್ಣು ಮಕ್ಕಳಿಗೆ ಜನ್ಮ ನೀಡಿದ್ದು, ತಾಯಿ, ಮಕ್ಕಳು ಆರೋಗ್ಯವಾಗಿದ್ದಾರೆ.

ಇವರು ಮೂರು ಮಕ್ಕಳ ಬಳಿಕ ಆಪರೇಷನ್ ಮಾಡಿಸಿಕೊಂಡಿದ್ದರು. ಸದ್ಯ ಇವರು ಇಂಡಿ ರಸ್ತೆಯ  ರಾಜ್ ರತನ್ ಕಾಲೊನಿಯಲ್ಲಿ ಸ್ವಂತ ಮನೆಯಲ್ಲಿ ಇದ್ದಾರೆ. 25 ವರ್ಷಗಳ ಹಿಂದೆ ಇವರು ಮದುವೆಯಾಗಿದ್ದಾರೆ.

ಪ್ರತಿಕ್ರಿಯಿಸಿ (+)