ಶನಿವಾರ, ಫೆಬ್ರವರಿ 27, 2021
28 °C
ಮಹಿಳಾ ಮುನ್ನೆಡೆ ಸಂಘಟನೆಯಿಂದ ವಿನೂತನ ಪ್ರತಿಭಟನೆ

ಮದ್ಯ ನಿಷೇಧಿಸಿ ಬುದ್ಧನ ಮಾರ್ಗ ಪಾಲಿಸಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ವಿಜಯಪುರ: ಭಾರತದಲ್ಲಿ ಹುಟ್ಟಿದ ಬುದ್ಧ ಭಾರತದಲ್ಲಿಯೇ ಪರಕೀಯನಾದ, ಇಂದು ಭಗವಾನ್ ಬುದ್ಧನ 2564ನೇ ಪೂರ್ಣಿಮೆಯನ್ನು ಆಚರಿಸುತ್ತಿದ್ದೆವೆ. ಆದರೆ, ಅವರು ಬೋಧಿಸಿದ ಸತ್ಯದ ಮಾರ್ಗ ಇಂದಿಗೂ ಜಗತ್ತಿಗೆ ಮುಖ್ಯವಾಗಿ ಕಾಣುತ್ತಿದೆ ಎಂದು ವಕೀಲ ಶ್ರೀನಾಥ ಪೂಜಾರಿ ಹೇಳಿದರು.

ಬುದ್ಧ ಪೂರ್ಣಿಮೆ ಅಂಗವಾಗಿ ನಗರದ ಬುದ್ಧ ವಿಹಾರದಲ್ಲಿ ಪ್ರಾರ್ಥನೆ ಸಲ್ಲಿಸಿದ ಬಳಿಕ ಮಹಿಳಾ ಮುನ್ನೆಡೆ ಹಾಗೂ ದಲಿತ ವಿದ್ಯಾರ್ಥಿ ಪರಿಷತ್ತು ಆಯೋಜಿಸಿದ್ದ ಮದ್ಯವಿರೋಧಿ ಬಿತ್ತಿ ಪತ್ರ ಪ್ರದರ್ಶನ ಮಾಡಿ ಅವರು ಮಾತನಾಡಿದರು.

ಕೊರೊನಾ ರೋಗದ ಸಂದರ್ಭದಲ್ಲಿ ಜನಸಾಮಾನ್ಯರು ಹಲವಾರು ಸಮಸ್ಯೆಗಳ ನಡುವೆ ಜೀವನ ಸಾಗಿಸುತ್ತಿದ್ದರು. ಆದರೆ, ಸರ್ಕಾರ ಹಣದ ಮೂಲವಾಗಿ ಮದ್ಯಮಾರಾಟ ಆಯ್ಕೆ ಮಾಡಿಕೊಂಡು ಬಡವರ, ದುಡಿಯುವ ಜನರ ಜೀವನ ಹಾಳು ಮಾಡದೆ. ಬುದ್ಧನ ವಾಣಿಯಂತೆ ಮದ್ಯವನ್ನು ನಿಷೇಧಿಸಿ ಸಮಾಜದ ಸ್ವಾಸ್ಥ್ಯ ಕಾಪಾಡಬೇಕಾಗಿದೆ ಎಂದು ಹೇಳಿದರು.

ಭಾರತೀಯ ಬೌದ್ಧ ಮಹಾಸಭಾದ ಪದಾಧಿಕಾರಿಗಳಾದ ವೆಂಕಟೇಶ ವಗ್ಗ್ಯಾನವರ, ಭಾಗ್ಯಶ್ರೀ ವಗ್ಗ್ಯಾನವರ, ಶಾಂತು ಶಹಪುರ, ಭಾರತಿ ಹೊಸಮನಿ, ಶಿವು ಮ್ಯಾಗೇರಿ, ನಾಗರಾಜ ಲಂಬು ಹಾಗೂ ದಲಿತ ವಿದ್ಯಾರ್ಥಿ ಪರಿಷತ್ ಪದಾಧಿಕಾರಿಗಳಾದ ರಾಕೇಶ ಕುಮಟಗಿ, ರಮೆಶ ಹಾದಿಮನಿ, ಶೇಖರ ಚೂರಿ, ಪವನ ಚವಡಿಕರ್ ಉಪಸ್ಥಿತರಿದ್ದರು.

ಹಿರೇಮಠ ಅಕಾಡೆಮಿ

ಬುದ್ಧನ ಸಂದೇಶ ಒಂದು ವರ್ಗ ಅಥವಾ ಧರ್ಮಕ್ಕೆ ಸೀಮಿತವಲ್ಲ. ಇಡೀ ಮನುಕುಲಕ್ಕೆ ದಿವ್ಯಸಂದೇಶಗಳಾಗಿವೆ. ಇಡಿ ಜಗತ್ತೆ ಆಧರಿಸುವಂತಹ ಅಮರ ಚೇತನ ಬುದ್ಧ ಎಂದು ಕನ್ನಡ ಉಪನ್ಯಾಸಕ  ಶರಣಗೌಡ ಪಾಟೀಲ ಹೇಳಿದರು.

ಇಲ್ಲಿನ ಕಿತ್ತೂರ ರಾಣಿ ಚನ್ನಮ್ಮ ನಗರದ ಹಿರೇಮಠ ಅಕಾಡೆಮಿ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ಬುದ್ಧ ಪೂರ್ಣಿಮಾದಲ್ಲಿ  ಮಾತನಾಡಿದರು.

ಅಕಾಡೆಮಿಯ ನಿರ್ದೇಶಕ ಬಸವೇಶ ಪಿ ಹಿರೇಮಠ, ರಾಜೇಂದ್ರಕುಮಾರ ಬಿರಾದಾರ, ಉಪನ್ಯಾಸಕ  ಯಮನೂರಪ್ಪ ಅರಬಿ ಹಾಗೂ ಶಿವಾಜಿ ಮೊರೆ, ಸಿದ್ದರಾಮ ರಬ್ಬಾ ಇದ್ದರು.

ಕನ್ನಡ ಸಾಹಿತ್ಯ ಪರಿಷತ್‌

ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಸಭಾಭವನದ ಆವರಣದಲ್ಲಿ ಭಗವಾನ್ ಬುದ್ಧ ಹಾಗೂ ರವೀಂದ್ರನಾಥ ಟ್ಯಾಗೋರ್ ಅವರ ಜನ್ಮದಿನಾಚರಣೆ ಆಚರಿಸಲಾಯಿತು.

ಕಸಾಪ ಜಿಲ್ಲಾ ಘಟಕದ ಅಧ್ಯಕ್ಷ ಮಲ್ಲಿಕಾರ್ಜುನ ಯಂಡಿಗೇರಿ ಮಾತನಾಡಿ, ಗೌತಮ ಬುದ್ಧ ಬೌದ್ಧಧರ್ಮದ ಸಂಸ್ಥಾಪಕ ಮಾತ್ರವಲ್ಲ, ದಾರ್ಶನಿಕ. ಬುದ್ಧನು ದೇವರಲ್ಲ, ದೇವದೂತನೂ ಅಲ್ಲ. ಆದರೆ, ಜಗತ್ತಿಗೆ ಪರಮ ಸತ್ಯವನ್ನು ಬೋಧಿಸಿದ ಮಹಾಗುರು ಎಂದು ಬಣ್ಣಿಸಿದರು.

ಪರಿಷತ್ತಿನ ಕಾರ್ಯದರ್ಶಿ ಬಸವರಾಜ ಕುಂಬಾರ, ಪದಾಧಿಕಾರಿಗಳಾದ ದಾಕ್ಷಾಯಿಣಿ ಬಿರಾದಾರ, ಎಸ್.ವೈ.ನಡುವಿನ ಕೇರಿ, ಶಿವಲಿಂಗ ಕಿಣಗಿ, ಎಂ.ಆರ್. ಕಬಾಡೆ ಉಪಸ್ಥಿತರಿದ್ದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು