ಗುರುವಾರ , ನವೆಂಬರ್ 14, 2019
19 °C

ಹೆಚ್ಚಿದ ಡೋಣಿ ಪ್ರವಾಹ; ನೂರಾರು ಎಕರೆ ಬೆಳೆ ಜಲಾವೃತ

Published:
Updated:

ತಾಳಿಕೋಟೆ (ವಿಜಯಪುರ ಜಿಲ್ಲೆ): ಪಟ್ಟಣದ ಬಳಿ ಹರಿಯುವ ಡೋಣಿ ನದಿಯಲ್ಲಿ ಬುಧವಾರವೂ ಪ್ರವಾಹದ ಮಟ್ಟ ಕಡಿಮೆಯಾಗಿಲ್ಲ. ಜಮೀನುಗಳಿಗೆ ಮತ್ತೆ ನೀರು ನುಗ್ಗಿದೆ.

ತಾಲ್ಲೂಕಿನ ನಾಗೂರ ಗ್ರಾಮದ ಇನ್ನೂರಕ್ಕೂ ಅಧಿಕ ಎಕರೆ ಬೆಳೆ ನೀರು ಪಾಲಾಗಿದೆ. ಇದಲ್ಲದೆ ನದಿದಡದ ಹಡಗಿನಾಳ, ಕಲ್ಲದೇವನಹಳ್ಳಿ, ಹರನಾಳ, ತಾಳಿಕೋಟೆ, ಗುತ್ತಿಹಾಳ, ಬೋಳವಾಡ, ಫತ್ತೆಪುರ, ಸಾಸನೂರ, ಹಿರೂರ ಗ್ರಾಮಗಳಲ್ಲಿನ ಜಮೀನುಗಳಿಗೆ ಎರಡನೇ ಬಾರಿ ಪ್ರವಾಹದ ನೀರು ನುಗ್ಗಿದೆ.

ಹಾಳಾದ ಬೆಳೆ, ಜಮೀನಿನಿಂದ ರೈತರು ಮತ್ತೆ ಸಂಕಷ್ಟದಲ್ಲಿದ್ದಾರೆ.

ಪ್ರತಿಕ್ರಿಯಿಸಿ (+)