ಇಂಡಿ: ತಾಲ್ಲೂಕಿನ ಲಚ್ಯಾಣ ಗ್ರಾಮದಲ್ಲಿ ಪವಾಡ ಪುರುಷ ಲಿಂಗೈಕ್ಯ ಸಿದ್ದಲಿಂಗ ಮಹಾರಾಜರ ಸಮಾಧಿ ಸ್ಥಳದ ಜೀರ್ಣೋದ್ಧಾರ ಕಾರ್ಯ ಭರದಿಂದ ಸಾಗಿದ್ದು, ನೂತನ ಕಟ್ಟಡಕ್ಕಾಗಿ ದೇಣಿಗೆ ಸಂಗ್ರಹ ಕಾರ್ಯಕ್ಕೆ ಬಂಥನಾಳ ಗ್ರಾಮದ ವೃಷಭಲಿಂಗೇಶ್ವರ ಮಹಾಶಿವಯೋಗಿ ಹಾಗೂ ಯರನಾಳ ಗ್ರಾಮದ ಗುರು ಸಂಗನಬಸವ ಸ್ವಾಮೀಜಿ ಶುಕ್ರವಾರ ಚಾಲನೆ ನೀಡಿದರು.

ಉಭಯ ಶ್ರೀಗಳ ಸಾನ್ನಿಧ್ಯದಲ್ಲಿ ನಡೆದ ಈ ಕಾರ್ಯಕ್ಕೆ ಪ್ರಥಮ ದಿನವೇ ಸ್ಥಳೀಯ ಭಕ್ತರು ಸ್ಪಂದಿಸಿ ದೇಣಿಗೆ ನೀಡುವ ವಾಗ್ದಾನ ಮಾಡಿದರು. ಒಂದೇ ದಿನದಲ್ಲಿ ₹11.36 ಲಕ್ಷ ಸಂಗ್ರಹವಾಯಿತು.

ಯರನಾಳದ ಗುರುಸಂಗನಬಸವ ಸ್ವಾಮೀಜಿ ಮಾತನಾಡಿ, ‘ಯರನಾಳ ,ಲಚ್ಯಾಣ ಎರಡು ಮಠಗಳು. ವೇದಾಂತ ಅಂತರರಾಷ್ಟ್ರೀಯ ಶಿಕ್ಷಣ ಸಂಸ್ಥೆ ವತಿಯಿಂದ ಜೀರ್ಣೋದ್ಧಾರಕ್ಕೆ ₹1 ಕೋಟಿ ಧನಸಹಾಯ ನೀಡಲಾಗುವುದು’ ಎಂದರು.

ಬಂಥನಾಳದ ವೃಷಭಲಿಂಗೇಶ್ವರ ಮಹಾಶಿವಯೋಗಿ ಮಾತನಾಡಿ, ‘2027ರಲ್ಲಿ ಪವಾಡ ಪುರುಷ ಸಿದ್ಧಲಿಂಗ ಮಹಾರಾಜರ ಲಿಂಗೈಕ್ಯ ಶತಮಾನೋತ್ಸವ ಅದ್ದೂರಿಯಾಗಿ ಮಾಡಲು ಉದ್ದೇಶಿಸಲಾಗಿದ್ದು, ಮಠದಲ್ಲಿ ಜೀರ್ಣೋದ್ಧಾರ ಕಾರ್ಯ ನಿತ್ಯ ಭರದಿಂದ ಸಾಗಿವೆ. ಭಕ್ತರು ತನು, ಮನ, ಧನದಿಂದ ಸಹಕರಿಸಬೇಕು’ ಎಂದರು.

ನಿವೃತ್ತ ಮುಖ್ಯಶಿಕ್ಷಕ ಡಿ.ಎಸ್.ಪಾಟೀಲ, ಎಂ.ಎಸ್.ಮುಜಗೊಂಡ, ಜಗನ್ನಾಥ ಕೋಟೆ, ನಿವೃತ್ತ ಶಿಕ್ಷಕ ವಿ.ಎಂ.ಕರಾಳೆ, ನಿವೃತ್ತ ಪ್ರಾಚಾರ್ಯ ಎ.ಪಿ. ಕಾಗವಾಡ, ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ, ಸದಸ್ಯ ಅಶೋಕಗೌಡ ಪಾಟೀಲ, ಕಮರಿಮಠದ ವ್ಯವಸ್ಥಾಪಕ ಎಂ.ಕೆ. ಬಿರಾದಾರ ಸೇರಿದಂತೆ ಅನೇಕರು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.