ಶುಕ್ರವಾರ, ಸೆಪ್ಟೆಂಬರ್ 25, 2020
22 °C

ಆಲಮಟ್ಟಿ ಜಲಾಶಯಕ್ಕೆ ಒಂದೇ ದಿನ 13 ಟಿಎಂಸಿ ಅಡಿ ನೀರು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಆಲಮಟ್ಟಿ(ವಿಜಯಪುರ): ಕೃಷ್ಣಾ ನದಿಯ ಹರಿವು ಹೆಚ್ಚಿದ್ದು, ಶನಿವಾರ ಒಂದೇ ದಿನ ಜಲಾಶಯಕ್ಕೆ 13 ಟಿಎಂಸಿ ಅಡಿ ನೀರು (1,51,598 ಕ್ಯುಸೆಕ್) ಹರಿದು ಬಂದಿದೆ.

ಆಗಸ್ಟ್‌ 6 ರಿಂದ 8ರ ವರೆಗೆ ಜಲಾಶಯಕ್ಕೆ 30 ಟಿಎಂಸಿ ಅಡಿಯಷ್ಟು ನೀರು ಹರಿದು ಬಂದಿದೆ. ಇನ್ನೂ ಮೂರ್ನಾಲ್ಕು ದಿನಗಳ ಕಾಲ ಲಕ್ಷ ಕ್ಯುಸೆಕ್ ಗೂ ಹೆಚ್ಚು ಒಳಹರಿವು ಇರಲಿದೆ.

ಶನಿವಾರ ಜಲಾಶಯದ ಒಳಹರಿವು 1.70 ಲಕ್ಷ ಕ್ಯುಸೆಕ್‌ಗೆ ಏರಿದ್ದರಿಂದ ಹೊರಹರಿವನ್ನು 2.20 ಲಕ್ಷ ಕ್ಯುಸೆಕ್‌ಗೆ ಏರಿಸಲಾಯಿತು. ಜಲಾಶಯದ ಎಲ್ಲ 26 ಗೇಟ್‌ಗಳ ಮೂಲಕ ನೀರನ್ನು ಬಿಡಲಾಗುತ್ತಿದೆ. 

ಜಲಾಶಯದ ಮುಂಭಾಗದ ಅರಳದಿನ್ನಿ ಗ್ರಾಮದ ಕೆಲ ಜಮೀನು ಜಲಾವೃತಗೊಂಡಿದೆ. ಸೂರ್ಯಕಾಂತಿ, ಜೋಳ, ಕಬ್ಬು ಬೆಳೆ ನೀರಿನಲ್ಲಿ ನಿಂತಿವೆ.

519.60 ಮೀ. ಗರಿಷ್ಠ ಎತ್ತರದ ಜಲಾಶಯದಲ್ಲಿ 517.81 ಮೀ. ವರೆಗೆ ನೀರು ಸಂಗ್ರಹವಾಗಿದೆ. ಜಲಾಶಯದಲ್ಲಿ 95 ಟಿಎಂಸಿ ಅಡಿ ನೀರು ಸಂಗ್ರಹವಾಗಿದ್ದು, ಜಲಾಶಯದ ಭರ್ತಿಗೆ ಇನ್ನೂ 28 ಟಿಎಂಸಿ ಅಡಿ ನೀರು ಅಗತ್ಯವಿದೆ. ಜಲಾಶಯದ ವಿದ್ಯುತ್ ಉತ್ಪಾದನೆ ಯಥಾಸ್ಥಿತಿ ಮುಂದುವರೆದಿದ್ದು, 250 ಮೆಗಾವಾಟ್ ವಿದ್ಯುತ್ ಉತ್ಪಾದನೆಯಾಗುತ್ತಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು