ಇಂಡಿ: ಪಟ್ಟಣದ ಸಿದ್ದಸಿರಿ ಬ್ಯಾಂಕ್ ₹140.27 ಕೋಟಿ ಠೇವಣಿ ಸಂಗ್ರಹ ಮಾಡಿ ದಾಖಲೆ ಸೃಷ್ಟಿಸಿದೆ ಎಂದು ಸಿದ್ದಸಿರಿ ಇಂಡಿ ವಲಯ ಅಧಿಕಾರಿ ರವಿಗೌಡ ಪಾಟೀಲ ತಿಳಿಸಿದರು.

ಪಟ್ಟದಲ್ಲಿ ಶುಕ್ರವಾರ ಬ್ಯಾಂಕ್ನಲ್ಲಿ ಆಯೋಜಿಸಿದ್ದ 19ನೇ ವರ್ಷದ ವಾರ್ಷಿಕೋತ್ಸವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ರಾಜ್ಯದಾದ್ಯಂತ ಸಿದ್ದಸಿರಿ ಬ್ಯಾಂಕ್ 19 ವರ್ಷಗಳಲ್ಲಿ ₹4,315 ಕೋಟಿಗಳ ಠೇವಣಿ ಸಂಗ್ರಹಿಸಿದೆ. ₹69 ಕೋಟಿ ಶೇರು ಬಂಡವಾಳವನ್ನು ಹೊಂದಿ, ಶೇರುದಾರರಿಗೆ 2022-23ರಲ್ಲಿ ಶೇಕಡಾ 25 ಡಿವಿಡೆಂಡ್, 2023-24ರಲ್ಲಿ ಶೇ.18 ಡಿವಿಡೆಂಡ್ ನೀಡಿದ ರಾಜ್ಯದ ಏಕೈಕ ಸೌಹಾರ್ದ ಸಹಕಾರ ಸಂಘವಾಗಿದೆ. ರಾಜ್ಯದಾದ್ಯಂತ ಸಿದ್ಧಸಿರಿ ಸೌಹಾರ್ದ ಸಹಕಾರ 1,194 ಸಿಬ್ಬಂದಿ, ಚಿಂಚೊಳ್ಳಿ ಎಥನಾಲ್ ಪವರ್ ಘಟಕದಲ್ಲಿ 580 ಸಿಬ್ಬಂದಿ ಹಾಗೂ 564 ಪಿಗ್ಮಿ ಸಂಗ್ರಹಕಾರರಿಗೆ ಉದ್ಯೋಗ ಕಲ್ಪಿಸಿದೆ ಎಂದರು.

ವಿಜಯಪುರದ ಸಿದ್ಧೇಶ್ವರ ದೇವಾಲಯ ಆವರಣದಲ್ಲಿರುವ ಮುಖ್ಯ ಕಚೇರಿಯಲ್ಲಿ ದಿನದ 24 ಗಂಟೆ 365 ದಿನಗಳು ನಿರಂತರ ಸೇವೆ ನೀಡುತ್ತಿರುವ ದೇಶದ ಏಕೈಕ ಸೌಹಾರ್ದ ಸಹಕಾರ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಎಲ್ಲ ಶಾಖೆಗಳು ಕೋರ್ ಬ್ಯಾಂಕಿಂಗ್ ವ್ಯವಸ್ಥೆಯನ್ನು ಹೊಂದಿದ್ದು, ಬೀದಿ ವ್ಯಾಪಾರಸ್ಥರಿಗೆ ಕೇಸರಿ ಸ್ವಾವಲಂಬಿ ಯೋಜನೆ ಅಡಿಯಲ್ಲಿ ಬಡ್ಡಿ ರಹಿತ ಸಾಲ ನೀಡಲಾಗಿದ್ದು, ವೃದ್ಧರು, ದಿವ್ಯಾಂಗರ ಮನೆ ಬಾಗಿಲಿಗೆ ಸೇವೆ ಒದಗಿಸಿ ಗ್ರಾಹಕ ಸ್ನೇಹಿಯಾಗಿ ಕಾರ್ಯನಿರ್ವಹಿಸುತ್ತಿದೆ ಎಂದು ತಿಳಿಸಿದರು.

ಸಿದ್ದಸಿರಿ ಸೌಹಾರ್ದದ ಆಶ್ರಯದಲ್ಲಿ ವಿಜಯಪುರದಲ್ಲಿ ಸಿದ್ಧಸಿರಿ ಕೋಲ್ಡ್ ಸ್ಟೋರೇಜ್- 5100 ಟನ್ ಸಾಮರ್ಥ್ಯ, ಜೇವರ್ಗಿಯಲ್ಲಿ ಸಿದ್ಧಸಿರಿ ಇಂಧನ ಕೇಂದ್ರ, ಆರು ಸಿದ್ಧಸಿರಿ ಕೃಷಿ ಕೇಂದ್ರಗಳು (ವಿಜಯಪುರ, ಬಿಜ್ಜರಿಗಿ, ಬಬಲೇಶ್ವರ, ಸಿಂದಗಿ, ಝಳಕಿ ಹಾಗೂ ಚಿಂಚೋಳಿ), ಕಲಬುರಗಿ ಜಿಲ್ಲೆಯ ಚಿಂಚೋಳಿಯಲ್ಲಿ 423 ಕೆಎಲ್ ಪಿಡಿ ಎಥೆನಾಲ್, 30 ಮೆಗಾ ವ್ಯಾಟ್ ಪವರ ಹಾಗೂ ಉತ್ಪಾದನಾ ಘಟಕ ಮತ್ತು 5000 ಮೆಟ್ರಿಕ್ ಟೆನ್ ಕಬ್ಬು ನುರಿಸುವ ಸಾಮರ್ಥ್ಯವುಳ್ಳ ಘಟಕ, ವಿಜಯಪುರದಲ್ಲಿ 39 ಸಿದ್ಧಸಿರಿ ಶುದ್ಧ ಕುಡಿಯುವ ನೀರಿನ ಘಟಕ, 22 ಸಿದ್ಧಸಿರಿ ಇ- ಸ್ಟಾಂಪ್, 18 ಸಿದ್ಧಸಿರಿ ಸ್ವಂತ ಕಟ್ಟಡಗಳು, 25 ಸಿದ್ಧಸಿರಿ ಖಾಲಿ ನಿವೇಶನಗಳು ಹೊಂದಿದೆ ಎಂದರು.

ಇಂಡಿ ಶಾಖಾ ವ್ಯವಸ್ಥಾಪಕ ಶಿವಾನಂದ ಚಾಳಿಕಾರ ಹಾಗೂ ಸಿಬ್ಬಂದಿ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.