ಸೋಮವಾರ, ನವೆಂಬರ್ 28, 2022
20 °C
ನಾಗಠಾಣ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಸಮುದಾಯ ಭವನ ನಿರ್ಮಾಣಕ್ಕೆ ಆದ್ಯತೆ

ದೇವಾಲಯಗಳಿಗೆ ₹ 2 ಕೋಟಿ ಅನುದಾನ: ಉಮೇಶ ಕಾರಜೋಳ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ವಿಜಯಪುರ: ನಾಗಠಾಣ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಚಡಚಣ ಹಾಗೂ ವಿಜಯಪುರ ತಾಲ್ಲೂಕಿನ ವಿವಿಧ ದೇವಾಲಯಗಳಿಗೆ ₹2 ಕೋಟಿ ಅನುದಾನವನ್ನು ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ ಅವರ ಮನವಿಯ ಮೇರೆಗೆ ಮುಖ್ಯಮಂತ್ರಿ  ಬೊಮ್ಮಾಯಿ ಅವರು ಬಿಡುಗಡೆ ಮಾಡಿದ್ದಾರೆ ಎಂದು ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಉಮೇಶ ಕಾರಜೋಳ ತಿಳಿಸಿದ್ದಾರೆ.

ಚಡಚಣ ತಾಲ್ಲೂಕಿನ ರೇವತಗಾಂವದ ಲಗಮವ್ವ ದೇವಾಲಯಕ್ಕೆ ₹3 ಲಕ್ಷ, ಮಾತಂಗಿ ದೇವಾಲಯಕ್ಕೆ ₹2 ಲಕ್ಷ, ಶಿರಾಡೋಣ ಗ್ರಾಮದ ಮಹಾದೇವ ದೇವಾಲಯಕ್ಕೆ ₹5 ಲಕ್ಷ, ದಸೂರ ಗ್ರಾಮದ ಚಾಮುಂಡಿ ದೇವಾಲಯಕ್ಕೆ ₹3 ಲಕ್ಷ, ಜೇರಂಕಲಗಿಯ ಶ್ರೀ ಗುರು ರಾಘವೇಂದ್ರ ಮಠದ ದೇವಾಲಯಕ್ಕೆ ₹5 ಲಕ್ಷ, ಗೋಡಿಹಾಳದ ಶ್ರೀ ಬಿಸಲ ಸಿದ್ದೇಶ್ವರ ದೇವಾಲಯಕ್ಕೆ ₹3 ಲಕ್ಷ, ಶಿರನಾಳದ ಪಾಂಡುರಂಗ ದೇವಾಲಯಕ್ಕೆ ₹5 ಲಕ್ಷ ನೀಡಿದ್ದಾರೆ ಎಂದರು.

ಕಾತ್ರಾಳದ ಶ್ರೀ ಮಲ್ಲಿಕಾರ್ಜುನ ದೇವಾಲಯಕ್ಕೆ ₹5 ಲಕ್ಷ, ದಸೂರದ ಗಣಪತಿ ದೇವಾಲಯಕ್ಕೆ ₹2 ಲಕ್ಷ, ದೇವರನಿಂಬರಗಿಯ ಮರಗಮ್ಮ ದೇವಾಲಯಕ್ಕೆ ₹3 ಲಕ್ಷ, ಹಲಸಂಗಿ ಅಮೃತೇಶ್ವರ ದೇವಾಲಯಕ್ಕೆ ₹10 ಲಕ್ಷ, ಶಿರನಾಳದ ಶ್ರೀ ದಿಗಂಬರೇಶ್ವರ ದೇವಾಲಯಕ್ಕೆ ₹10 ಲಕ್ಷ, ಹಲಸಂಗಿಯ ಪ್ರಭುಲಿಂಗೇಶ್ವರ ದೇವಾಲಯಕ್ಕೆ ₹2 ಲಕ್ಷ, ಲೋಣಿ ಬಿ.ಕೆ. ಗ್ರಾಮದ ಸಿದ್ಧಿ ವಿನಾಯಕ ದೇವಾಲಯಕ್ಕೆ ₹2 ಲಕ್ಷ, ಕಾತ್ರಾಳದ ಮಲ್ಲಿಕಾರ್ಜುನ ದೇವಾಲಯಕ್ಕೆ ₹5 ಲಕ್ಷ, ಬರಡೋಲದ ಶ್ರೀ ಚಿದಂಬರ ದೇವಾಲಯಕ್ಕೆ ₹5 ಲಕ್ಷ ನೀಡಿದ್ದಾರೆ ಎಂದು ತಿಳಿಸಿದ್ದಾರೆ.

ಶಿರನಾಳದ ಹನುಮಾನ ದೇವಾಲಯಕ್ಕೆ ₹5 ಲಕ್ಷ, ತಿಡಗುಂದಿಯ ಹನುಮಾನ ದೇವಾಲಯಕ್ಕೆ ₹10 ಲಕ್ಷ, ಡೋಮನಾಳದ ಶ್ರೀ ಮಲ್ಲಿಕಾರ್ಜುನ ದೇವಾಲಯಕ್ಕೆ ₹5 ಲಕ್ಷ, ಖತಿಜಾಪೂರದ ಲಕ್ಷ್ಮಿ ದೇವಾಲಯಕ್ಕೆ ₹5 ಲಕ್ಷ, ಯೋಗಾಪೂರ ಬಡಾವಣೆ (ವಾ.16) ಓಂ ಸಾಯಿ ಗಜಾನನ ದೇವಾಲಯ ಬಳಿ ಸಮುದಾಯ ಭವನ ನಿರ್ಮಾಣಕ್ಕೆ ₹3 ಲಕ್ಷ, ಬ್ಯಾಂಕರ್ಸ್‌ ಕಾಲೊನಿ ಮರಗಮ್ಮ ದೇವಾಲಯದಲ್ಲಿ ಸಮುದಾಯ ಭವನ ನಿರ್ಮಾಣಕ್ಕೆ ₹3 ಲಕ್ಷ, ಶಾಂತಿನಿಕೇತನ ಶಾಲೆ ಬಳಿ ಇರುವ ಲಕ್ಷ್ಮಿ ದೇವಿ ದೇವಾಲಯಕ್ಕೆ ಸಮುದಾಯ ಭವನ ನಿರ್ಮಾಣಕ್ಕೆ ₹3 ಲಕ್ಷ, ಜುಮನಾಳ ಗ್ರಾಮದ ಹುಲಿಗೆಮ್ಮ ದೇವಾಳಯ ಬಳಿ ಸಮುದಾಯ ಭವನ ನಿರ್ಮಾಣಕ್ಕೆ ₹3 ಲಕ್ಷ ನೀಡಿದ್ದಾರೆ ಎಂದರು.

ಹೊನ್ನುಟಗಿ ಗ್ರಾಮದ ಶ್ರೀ ಮಲ್ಲಿಕಾರ್ಜುನ ದೇವಾಲಯ ಬಳಿ ಸಮುದಾಯ ಭವನ ನಿರ್ಮಾಣಕ್ಕೆ ₹3 ಲಕ್ಷ, ಹೊನ್ನುಟಗಿ ಗ್ರಾಮದ ಮಲ್ಲಿಕಾರ್ಜುನ ದೇವಾಲಯದ ಬಳಿ ಸಮುದಾಯ ಭವನ ನಿರ್ಮಾಣಕ್ಕೆ ₹10 ಲಕ್ಷ, ಬೊಮ್ಮನಹಳ್ಳಿ ಗ್ರಾಮದಲ್ಲಿ ಶ್ರೀ ಜಡೆಯ ಶಾಂತಲಿಂಗೇಶ್ವರ ಬಳಿ ಸಮುದಾಯ ಭವನ ನಿರ್ಮಾಣಕ್ಕೆ ₹5 ಲಕ್ಷ, ಬೊಮ್ಮನಹಳ್ಳಿ ಗವಿಮಠದಲ್ಲಿ ಸಮುದಾಯ ಭವನ ನಿರ್ಮಾಣಕ್ಕೆ ₹10 ಲಕ್ಷ, ಕನ್ನಾಳ ಗ್ರಾಮದ ಭೀಮಾಶಂಕರ ಮಠದಲ್ಲಿ ಸಮುದಾಯ ಭವನ ನಿರ್ಮಾಣಕ್ಕೆ ₹5 ಲಕ್ಷ  ಹಾಗೂ ಗುಣಕಿ ಗ್ರಾಮದ ಶ್ರೀ ಮಲ್ಲಿಕಾರ್ಜುನ ದೇವಾಲಯದ ಮುಂಭಾಗದಲ್ಲಿ ಸಮುದಾಯ ಭವನ ನಿರ್ಮಾಣಕ್ಕೆ ₹5 ಲಕ್ಷ, ಶಿವಣಗಿಯ ಮಾದಾರ ಓಣಿಯಲ್ಲಿ ಸಮುದಾಯ ಭವನ ನಿರ್ಮಾಣಕ್ಕೆ ₹25 ಲಕ್ಷ ನೀಡಲಾಗಿದೆ ಎಂದು ಅವರು ತಿಳಿಸಿದ್ದಾರೆ.‌

ಮಧಭಾವಿ ಗ್ರಾಮದಲ್ಲಿ ಭೋವಿ ಸಮಾಜದ ದುರ್ಗಾದೇವಿ ದೇವಾಲಯದ ಬಳಿ ಸಮುದಾಯ ಭವನ ನಿರ್ಮಾಣಕ್ಕೆ ₹10 ಲಕ್ಷ, ಹಡಗಲಿ ಗ್ರಾಮದಲ್ಲಿ ಹರಿಜನ ಕೇರಿಯಲ್ಲಿ ಸಮುದಾಯ ಭವನ ನಿರ್ಮಾಣಕ್ಕೆ ₹20 ಲಕ್ಷ, ಕವಲಗಿ ಗ್ರಾಮದಲ್ಲಿ ಮಾದರ ಓಣಿಯಲ್ಲಿ ಮರಗಮ್ಮ ದೇವಾಲಯ ನಿರ್ಮಾಣಕ್ಕೆ ₹5 ಲಕ್ಷ, ಐನಾಪೂರ ಗ್ರಾಮದಲ್ಲಿ ಡಾ.ಅಂಬೇಡ್ಕರ್‌ ಸಮುದಾಯ ಭವನ ನಿರ್ಮಾಣಕ್ಕೆ ₹20 ಲಕ್ಷ, ನಾಗಠಾಣ ಗ್ರಾಮದಲ್ಲಿ ಡಾ.ಬಿ.ಆರ್. ಅಂಬೇಡ್ಕರ್‌ ಸಮುದಾಯ ಭವನ ನಿರ್ಮಾಣಕ್ಕೆ ₹20 ಲಕ್ಷ, ಹೆಗಡಿಹಾಳ ಗ್ರಾಮದಲ್ಲಿ ಭೋವಿ ಸಮಾಜದ ಸಮುದಾಯ ಭವನ ನಿರ್ಮಾಣಕ್ಕಾಗಿ ₹5 ಲಕ್ಷ, ಜುಮನಾಳ ಗ್ರಾಮದ ಮಾದಾರ ಕಾಲೊನಿಯಲ್ಲಿರುವ ಶ್ರೀ ಮಹಾಲಕ್ಷ್ಮಿ ದೇವಾಲಯದ ಬಳಿ ಸಮುದಾಯ ಭವನ ನಿರ್ಮಾಣಕ್ಕಾಗಿ ₹5 ಲಕ್ಷ ಅನುದಾನವನ್ನು ಮುಖ್ಯಮಂತ್ರಿಗಳು ಬಿಡುಗಡೆ ಮಾಡಿದ್ದಾರೆ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.