ಸಿಡಿಲಿನಿಂದ ವ್ಯಕ್ತಿ ಸಾವು: ₹ 5 ಲಕ್ಷ ಪರಿಹಾರ

ವಿಜಯಪುರ: ನಾಗಠಾಣ ಗ್ರಾಮದಲ್ಲಿ ಇತ್ತೀಚೆಗೆ ಸಿಡಿಲು ಬಡಿದು ಸಾವನಪ್ಪಿದ ಬಗಲಿ ಕುಟುಂಬಕ್ಕೆ ಶಾಸಕ ಡಾ. ದೇವಾನಂದ ಚವ್ಹಾಣ ₹ 5 ಲಕ್ಷ ಪರಿಹಾರ ಚೆಕ್ ನೀಡಿದರು.
ಮೇ 1ರಂದು ಹುಣಶಾಳ ಗ್ರಾಮದ ಹತ್ತಿರ ಸಿಡಿಲು ಬಡಿದು ಶಿವರಾಜ ಸಿದ್ದಪ್ಪ ಬಗಲಿ ಸಾವಿಗೀಡಾಗಿದ್ದರು.
ಪರಿಹಾರ ವಿತರಿಸಿ ಮಾತನಾಡಿದ ಶಾಸಕ ಡಾ. ದೇವಾನಂದ ಚವ್ಹಾಣ, ಸಾವಿಗೀಡಾದವರು ಮರಳಿ ಬರಲು ಸಾಧ್ಯವಿಲ್ಲ. ಸಾಂತ್ವನ ಒಂದೇ ದಾರಿಯಾಗಿದೆ. ಸರ್ಕಾರ ಮೃತರ ಕುಟುಂಬದ ಅನುಕೂಲಕ್ಕಾಗಿ ₹ 5 ಲಕ್ಷ ಪರಿಹಾರ ನೀಡಿದೆ. ಕುಟುಂಬದವರು ಇದರ ಸದುಪಯೋಗ ಪಡೆದುಕೊಂಡು, ಜೀವನ ಸುಧಾರಿಸಿಕೊಳ್ಳಬೇಕು ಎಂದು ಮನವಿ ಮಾಡಿದರು.
ನಾಗಠಾಣ ಮತಕ್ಷೇತ್ರದ ಮಡಸನಾಳ ಗ್ರಾಮದಲ್ಲಿ ಸಿಡಿಲು ಬಡಿದು ಎಮ್ಮೆ ಹಾಗೂ ಆಕಳು ಮೃತಪಟ್ಟಿದ್ದು, ಇವುಗಳ ಪರಿಹಾರ ಧನವಾಗಿ ಸರ್ಕಾರದಿಂದ ₹ 60 ಸಾವಿರ ಚೆಕ್ ಅನ್ನು ರೈತರಾದ ದುಂಡಪ್ಪ ಲಕ್ಷ್ಮಣ ಹಿರೇಕುರುಬರ ಅವರಿಗೆ ವಿತರಿಸಲಾಯಿತು.
ಜೆಡಿಎಸ್ ಮುಖಂಡರಾದ ಚಂದ್ರಶೇಖರ ಅರಕೇರಿ, ಗ್ರಾಮಲೆಕ್ಕಾಧಿಕಾರಿ ತೌಶೀಫ್, ತಾಜಿಮ್ ತರೀಕ್, ಬಿ.ಎ.ಮಿರ್ಜಿ, ಕಂದಾಯ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.
ನಾಗಠಾಣ ಗ್ರಾಮದಲ್ಲಿ ಸಿಡಿಲು ಬಡಿದು ನಿಧನ ಹೊಂದಿದ ರೈತನ ಕುಟುಂಬಕ್ಕೆ ಶಾಸಕ ಡಾ. ದೇವಾನಂದ ಚವ್ಹಾಣ ಸರಕಾರದಿಂದ ಬರುವ 5 ಲಕ್ಷ.ರೂ ಚೆಕ್ ವಿತರಿಸಿದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.