‘ಇಂಡಿ ತಾಲ್ಲೂಕಿನ ಅಗರಖೇಡ ಗ್ರಾಮದ ನಿವಾಸಿ, ವಕೀಲ ರವಿ ಮೇಲಿನಮನಿ (37) ಮೃತರು. ವಿಜಯಪುರದ ಬಸವನಗರದ ರಸ್ತೆಯಲ್ಲಿ ದ್ವಿಚಕ್ರ ವಾಹನದಲ್ಲಿ ಸಾಗುತ್ತಿದ್ದ ರವಿ ಮೇಲಿಮನಿಯವರಿಗೆ ಕಾರು ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ಮೇಲಿನಮನಿ ಅವರ ದೇಹ ಕಾರಿನಡಿ ಸಿಲುಕಿದೆ. ರಸ್ತೆಯಲ್ಲಿ ನಿಂತಿದ್ದ ಜನರು ಕೂಗಿದರೂ ಕಾರು ಚಾಲಕ ನಿಲ್ಲಿಸದೇ ವೇಗವಾಗಿ ಚಾಲನೆ ಮಾಡಿದ್ದಾನೆ. ಎರಡು ಕಿ.ಮೀ.ದೂರದಲ್ಲಿರುವ ಜಿಲ್ಲಾ ಪಂಚಾಯಿತಿ ಪ್ರವೇಶದ್ವಾರದವರೆಗೆ ಶವನನ್ನು ಎಳೆದೊಯ್ದು, ಅದು ಕಾರಿನಿಂದ ಬೇರ್ಪಟ್ಟ ಬಳಿಕ ಚಾಲಕ ಕಾರಿನೊಂದಿಗೆ ಪರಾರಿಯಾದ. ವಕೀಲ ಮೇಲಿನಮನಿ ದೇಹ ಛಿದ್ರವಾಗಿದೆ’ ಎಂದು ಪೊಲೀಸರು ತಿಳಿಸಿದರು.