ಭಾನುವಾರ, ಅಕ್ಟೋಬರ್ 2, 2022
19 °C

ದೇಶ ಪ್ರೇಮ ಇಮ್ಮಡಿಗೊಳಿಸಿದ ಸಂಕಲ್ಪ ನಡಿಗೆ: ಶಾಸಕ ಎ.ಎಸ್.ಪಾಟೀಲ ನಡಹಳ್ಳಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ನಾಲತವಾಡ: ಸ್ವಾತಂತ್ರ ಅಮೃತ ಮಹೋತ್ಸವದ ನಿಮಿತ್ತ ಶಾಸಕ, ಆಹಾರ ನಾಗರೀಕ ಪೂರೈಕೆ ನಿಗಮದ ಅಧ್ಯಕ್ಷ ಎ.ಎಸ್.ಪಾಟೀಲ ನಡಹಳ್ಳಿಯವರು ಕೈಗೊಂಡಿರುವ ಯುವ ಸಂಕಲ್ಪ ನಡಿಗೆಯು ಮಂಗಳವಾರ ಪಟ್ಟಣಕ್ಕೆ ಆಗಮಿಸುತ್ತಿದ್ದಂತೆ ಭವ್ಯವಾದ ಸ್ವಾಗತ ಕೋರಲಾಯಿತು.

ಮುರಾಳದಿಂದ ಪಟ್ಟಣದ ವೀರೇಶ್ವರ ವೃತ್ತಕ್ಕೆ ಆಗಮಿಸುತ್ತಿದ್ದಂತೆ ಜೆಸಿಬಿ ಮೂಲಕ ಪುಷ್ಪ ವೃಷ್ಠಿ ಮಾಡಲಾಯಿತು. ನಾಡಿನ ವಿವಿಧ ಕಲಾ ತಂಡಗಳು,ನಾಲ್ಕು ಸಾವಿರಕ್ಕೂ ಅಧಿಕ ವಿದ್ಯಾರ್ಥಿಗಳು, ಕಾರ್ಯಕರ್ತರು, ಅಭಿಮಾನಿಗಳು ಯುವ ಸಂಕಲ್ಪ ನಡಿಗೆಯಲ್ಲಿ ಭಾಗವಹಿಸಿದ್ದರು.

ನಡಿಗೆಯಲ್ಲಿ ದೇಶ ಭಕ್ತಿ ಸಾರುವ ಹಾಡುಗಳು, ನೃತ್ಯ, ಘೋಷಣೆಗಳು ಮೊಳಗಿದವು. ದೇಶ ಭಕ್ತಿ ಹಾಡುಗಳ ಡಿಜೆಗೆ ಶಾಸಕ ಎ.ಎಸ್.ಪಾಟೀಲ ನಡಹಳ್ಳಿ ಹೆಜ್ಜೆ ಹಾಕುತ್ತಿದ್ದಂತೆ ಕಾಲೇಜು ವಿದ್ಯಾರ್ಥಿಗಳು, ಶಿಕ್ಷಕರು ನೃತ್ಯ ಮಾಡಿ ಎಲ್ಲರ ಗಮನ ಸೆಳೆದರು.

ಸಂಕಲ್ಪ ನಡಿಗೆಯಲ್ಲಿ ಶಾಸಕ ಎ.ಎಸ್.ಪಾಟೀಲ ನಡಹಳ್ಳಿಯವರ ಪತ್ನಿ ಮಹಾದೇವಿ ಪಾಟೀಲ ಹಾಗೂ ಪುತ್ರ ಭರತ್ ಪಾಟೀಲ ಡೊಳ್ಳು ಬಾರಿಸಿದರು. ಶಾಲಾ ಕಾಲೇಜುಗಳ ಮಕ್ಕಳಿಗೆ, ಶಿಕ್ಷಕರಿಗೆ, ಕಾರ್ಯಕರ್ತರಿಗೆ ವಿತರಿಸಿದ ಸಮವಸ್ತ್ರಗಳು ಅವರ ಕೈಯಲ್ಲಿ ಇರುವ ರಾಷ್ಟ್ರ ಧ್ವಜಗಳು ರಾಷ್ಟ್ರಾಭಿಮಾನ ಮೂಡಿಸುವಂತಿದ್ದವು.

ಇದಕ್ಕೂ ಮೊದಲು ಮುರಾಳದಲ್ಲಿ ರಕ್ಕಸಗಿ ಕ್ಲಸ್ಟರ್‌ನ ಮಕ್ಕಳು ಮಳೆಯನ್ನು ಲೆಕ್ಕಿಸದೆ ಮಾಡಿದ ನೃತ್ಯ ರೂಪಕಗಳು ಜನ ಮನ ಸೂರೆಗೊಂಡವು.

ಮುರಾಳ, ತಂಗಡಗಿ,ರಕ್ಕಸಗಿ ಕ್ಲಸ್ಟರ್ ನ ಮಕ್ಕಳು ಮುರಾಳದಿಂದ ನಾಗರಬೆಟ್ಟ ಮಾರ್ಗವಾಗಿ ನಾಲತವಾಡಕ್ಕೆ ಯುವ ಸಂಕಲ್ಪ ನಡಿಗೆಯಲ್ಲಿ ಉತ್ಸಾಹದಿಂದ ಬಂದಿದ್ದರು. ಎಂ.ಎಸ್.ಪಾಟೀಲ, ಶಂಕರಗೌಡ ಗಾದಿ, ಪಾಪಣ್ಣ ಗಾದಿ, ರಮೇಶ ಮುದ್ನೂರ, ಸಂಗಣ್ಣ ಹಾವರಗಿ, ಘಾಳಪೂಜಿಯ ಶರಣಪ್ಪ ಮಂಗಳೂರು ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು