ಮುದ್ದೇಬಿಹಾಳ: ತಾಲ್ಲೂಕಿನ ಬಿದರಕುಂದಿ ಆದರ್ಶ ವಿದ್ಯಾಲಯದಲ್ಲಿ ಪ್ರಸ್ತುತ ಸಾಲಿನ ತರಗತಿ ದಾಖಲಾತಿಗಾಗಿ 4ನೇ ಸುತ್ತಿನ ಕೌನ್ಸೆಲಿಂಗ್ ಪ್ರಕ್ರಿಯೆ ಆ.13 ಹಾಗೂ 14 ರಂದು ಹಮ್ಮಿಕೊಳ್ಳಲಾಗಿದೆ.
6ನೇ ತರಗತಿ ದಾಖಲಾತಿಗಾಗಿ ಮೀಸಲಾತಿವಾರು ಖಾಲಿ ಇರುವ ಸ್ಥಾನಗಳಿಗೆ ಈಗಾಗಲೇ 1, 2, 3ನೇ ಸುತ್ತಿನ ದಾಖಲಾತಿ ಪ್ರಕ್ರಿಯೆ ಪೂರ್ಣಗೊಂಡಿದ್ದು, ಉಳಿದ ಆರು ಸ್ಥಾನಗಳಿಗೆ 1:20 ಅನುಪಾತದಲ್ಲಿ ಅರ್ಹ ಅಭ್ಯರ್ಥಿಗಳ ಪಟ್ಟಿಯನ್ನು ಬಿಇಒ ಹಾಗೂ ಶಾಲೆಯ ಸೂಚನಾ ಫಲಕದಲ್ಲಿ ಪ್ರಕಟಿಸಲಾಗಿದೆ.
ಆ.13 ರಂದು ಬೆಳಗ್ಗೆ 10ಕ್ಕೆ ಒಂದು ಸಾಮಾನ್ಯ ಸ್ಥಾನಕ್ಕೆ ಹಾಗೂ ಆ.14 ರಂದು ಬೆಳಗ್ಗೆ 10ಕ್ಕೆ ಐದು ಮೀಸಲಾತಿ ವರ್ಗದ ಸ್ಥಾನಗಳಿಗೆ ಕೌನ್ಸಲಿಂಗ್ ಪ್ರಕ್ರಿಯೆ ನಡೆಸಲಾಗುವುದು ಎಂದು ಬಿಇಒ ಬಿ.ಎಸ್.ಸಾವಳಗಿ ಹಾಗೂ ಆರ್.ಎಂ.ಎಸ್.ಎ ಶಾಲೆ ಮುಖ್ಯಶಿಕ್ಷಕಿ ಎನ್.ಬಿ.ತೆಗ್ಗಿನಮಠ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.