ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಜಯಪುರ: ಕೋವಿಡ್‌ ರೋಗಿಗಳ ಸೇವೆಗೆ ಸಲಹೆ

Last Updated 14 ಮೇ 2021, 10:55 IST
ಅಕ್ಷರ ಗಾತ್ರ

ವಿಜಯಪುರ: ಕಾಯಕ, ದಾಸೋಹಿಬಸವೇಶ್ವರ ಜಯಂತಿ ಹಾಗೂ ರಂಜಾನ್ ಹಬ್ಬದ ಈ ಶುಭ ಸಂದರ್ಭದಲ್ಲಿ ನಾವು ನಮ್ಮ ಕಾಯಕವನ್ನು ದ್ವಿಗುಣಗೊಳಿಸಿ, ಹೆಚ್ಚು-ಹೆಚ್ಚು ರೋಗಿಗಳ ಸೇವೆ ಮಾಡಿ, ಅವರ ಕುಟುಂಬದವರ ಮುಖದಲ್ಲಿ ಮಂದಹಾಸ ಮೂಡಿಸಲುವೈದ್ಯರು ಪ್ರತಿಜ್ಞೆ ಮಾಡಬೇಕುಎಂದು ಬಿ.ಎಲ್.ಡಿ.ಇ ಅಧ್ಯಕ್ಷ ಎಂ.ಬಿ.ಪಾಟೀಲ ಹೇಳಿದರು.

ಬಿ.ಎಲ್.ಡಿ.ಇ ಡೀಮ್ಡ್ ವಿವಿಯಲ್ಲಿ ಬಸವೇಶ್ವರರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಅವರು ಮಾತನಾಡಿದರು.

ವಿಶ್ವವಿದ್ಯಾಲಯದ ಉಪಕುಲಪತಿ ಡಾ.ಎಂ.ಎಸ್.ಬಿರಾದಾರ ಅವರ ಆಕಸ್ಮಿಕ ಅಗಲಿಕೆಯ ನಂತರ ನಾವ್ಯಾರು ಧೃತಿಗೆಡುವುದು ಬೇಡ. ಈ ಕೊರೊನಾ ಹೋರಾಟದಲ್ಲಿ ವೈದ್ಯರೊಂದಿಗೆ ನಾನೇ ಮುಂದೆ ನಿಂತುಜೊತೆಯಾಗಿ ಕೆಲಸ ಮಾಡುತ್ತೇನೆ. ನಾವೆಲ್ಲ ಒಂದು ತಂಡವಾಗಿ ಒಮ್ಮತದಿಂದ ಈ ಸಂಕಷ್ಟವನ್ನು ಸವಾಲಾಗಿ ಸ್ವೀಕರಿಸಿ ದುಡಿಯೋಣ ಎಂದರು.

ಇನ್ನೂ ಮುಂದೆ ಪ್ರತಿದಿನವೂ ಆಸ್ಪತ್ರೆಯ ಚಟುವಟಿಕೆಗಳ ಮೇಲೆ ನಾನು ಸ್ವತಃ ಗಮನ ಹರಿಸುತ್ತೇನೆ. ಮೇಲಿಂದ-ಮೇಲೆ ವೈದ್ಯರೊಂದಿಗೆ ಸಭೆ ನಡೆಸಿ ನಿಮ್ಮ ಸಲಹೆ ಪಡೆದು, ನಾವೆಲ್ಲರೂ ಕುಟುಂಬವಾಗಿ ಮುನ್ನೆಡೆದು, ಜನರ ಸೇವೆ ಮಾಡೋಣ ಎಂದು ಹೇಳಿದರು.

ಡಾ.ಅರುಣ ಇನಾಮದಾರ,ಸಮ ಉಪಕುಲಪತಿ ಡಾ.ಆರ್.ಎಸ್ ಮುಧೋಳ, ಡಾ.ಎಂ.ಎಸ್.ಬಿರಾದಾರ, ಡಾ.ಆರ್.ಸಿ.ಬಿದರಿ, ಡಾ.ರಾಜೇಶ ಹೊನ್ನುಟಗಿ, ಪ್ರಾಚಾರ್ಯ ಡಾ.ಅರವಿಂದ ಪಾಟೀಲ ಸಭೆಯಲ್ಲಿ ಉಪಸ್ಥಿತರಿದ್ದರು. ಇತ್ತೀಚೆಗೆ ನಿಧನರಾದ ಡಾ.ಎಂ.ಎಸ್.ಬಿರಾದಾರ ಅವರ ಆತ್ಮಕ್ಕೆ ಶಾಂತಿ ಕೋರಿ ಮೌನ ಆಚರಿಸಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT