ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೈದಿಗಳನ್ನು ಸಾಕ್ಷರನ್ನಾಗಿಸಲು ಸಲಹೆ

ಜಿಲ್ಲಾ ಸೆಷನ್ಸ್ ನ್ಯಾಯಾಧೀಶ ಸದಾನಂದ ಎನ್. ನಾಯಕ
Last Updated 1 ನವೆಂಬರ್ 2021, 13:14 IST
ಅಕ್ಷರ ಗಾತ್ರ

ವಿಜಯಪುರ: ಅನಕ್ಷರಸ್ಥ ಕೈದಿಗಳನ್ನು ಸಾಕ್ಷರನ್ನಾಗಿಸಿ ಸಮಾಜದ ಮುಖ್ಯವಾಹಿನಿಗೆ ತರುವ ಪ್ರಯತ್ನ ಮಾಡಬೇಕು ಎಂದು ಜಿಲ್ಲಾ ಮತ್ತು ಸೆಷನ್ಸ್‌ ನ್ಯಾಯಾಧೀಶ ಸದಾನಂದ ಎನ್. ನಾಯಕ ಹೇಳಿದರು.

ಜಿಲ್ಲೆಯ ಕೇಂದ್ರ ಕಾರಾಗೃಹದಲ್ಲಿ ಜಿಲ್ಲಾ ವಯಸ್ಕರ ಶಿಕ್ಷಣ ಇಲಾಖೆ ಹಾಗೂ ಜಿಲ್ಲಾ ಪಂಚಾಯ್ತಿ ಆಶ್ರಯದಲ್ಲಿ ಕೈದಿಗಳಿಗಾಗಿ ಆಯೋಜಿಸಿದ್ದ ’ಕಲಿಕೆಯಿಂದ ಬದಲಾವಣೆ‘ ಸಾಕ್ಷರತಾ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಕೈದಿಗಳನ್ನು ಅಕ್ಷರಸ್ಥರನ್ನಾಗಿಸಿ ಸಮಾಜದಲ್ಲಿ ಒಳ್ಳೆಯ ರೀತಿಯಲ್ಲಿ ಬದುಕುವುದನ್ನು ಕಲಿಸಬೇಕು ಮತ್ತು ಶಿಕ್ಷಣದ ಅನುಭವ ಪಡೆದು ಮುಂದೆ ಸಮಾಜದಲ್ಲಿ ಒಳ್ಳೆಯ ಹೆಸರು ತರುವಂತಾಗಬೇಕು ಎಂದು ಅವರು ಹೇಳಿದರು.

ವಿಜಯಪುರ ತಾಲ್ಲೂಕು ಪಂಚಾಯ್ತಿ ಕಾರ್ಯನಿರ್ವಾಹಕ ಅಧಿಕಾರಿ ಮೆಹಬೂಬ ಜಿಲಾನಿ, ಕಾರಾಗೃಹ ಹೊಸ ಮನುಷ್ಯನ ಉದಯದ ತಾಣವಾಗಿದ್ದು, ಮನುಷ್ಯನಲ್ಲಿ ಮಾನವೀಯತೆ ಉದ್ಭವವಾದರೆ ಹೊಸ ಮನುಷ್ಯ ಆಗಲು ಸಾಧ್ಯ ಎಂದರು.

ಜಿಲ್ಲಾ ವಯಸ್ಕರ ಶಿಕ್ಷಣಾಧಿಕಾರಿ ಆನಂದ ದೇವರನಾವದಗಿ, ಅನಕ್ಷರಸ್ಥರೆಲ್ಲರೂ ಅಕ್ಷರ ಕಲಿತು ಸಾಕ್ಷರರಾಗಿ ಕೌಶಲಾಭಿವೃದ್ಧಿ ಹೊಂದಲು ಹಾಗೂ ಸಮಾಜದ ನಿರ್ಮಾಣಕ್ಕಾಗಿ ನಾನು ಕಲಿತ ಋಣವನ್ನು ಕಲಿಸಿ ತೀರಿಸುತ್ತೇನೆ ಎಂದು ಸಾಕ್ಷರತಾ ಪ್ರಮಾಣ ವಚನವನ್ನು ಬೋಧಿಸಿದರು.

ಜಿಲ್ಲಾ ಕೇಂದ್ರ ಕಾರಾಗೃಹದ ಅಧೀಕ್ಷಕ ಐ.ಜೆ.ಮ್ಯಾಗೇರಿ ಮಾತನಾಡಿ, ಕಾರಾಗೃಹದಲ್ಲಿರುವ 267 ಅನಕ್ಷರಸ್ಥ ಕೈದಿಗಳನ್ನು ಕತ್ತಲೆಯಿಂದ ಬೆಳಕಿನೆಡೆಗೆ ಕರೆತಂದು ಸಮಾಜದಲ್ಲಿ ಶಾಂತಿ, ಸಹಬಾಳ್ವೆ,ಸಹನೆ ಹಾಗೂ ಸಾಕ್ಷರನ್ನಾಗಿಸಿಸುತ್ತೆವೆ ಎಂದು ಹೇಳಿದರು.

ಜಿಲ್ಲಾ ವಯಸ್ಕರ ಶಿಕ್ಷಣ ಇಲಾಖೆಯ ಕಾರ್ಯಕ್ರಮದ ಸಹಾಯಕಿ ಟಿ.ಎ.ಬಗಲಿ, ಶಕೀನಾ ಬೇಗಂ ಜಿಲ್ಲಾ ಕೇಂದ್ರ ಕಾರಾಗೃಹದ ಸಹಾಯಕ ಅಧಿಕ್ಷಕ ಎಚ್.ಎ.ಚೌಗಲೆ, ಮಹೇಶ್ ಮಾಲಗತ್ತಿ, ಕೇಂದ್ರ ಕಾರಾಗೃಹದ ಅಧಿಕಾರಿಗಳು ಮತ್ತು ಸಿಬ್ಬಂದಿ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT