ಆಲಮೇಲ: ಕನ್ನಡ ಸಾಹಿತ್ಯ ಪರಿಷತ್ತು ಶತಮಾನ ಪೂರೈಸಿ ಕನ್ನಡ ಪರ ಕೆಲಸ ಮಾಡುತ್ತಿರುವ ಸಂಸ್ಥೆಯಾಗಿ, ಹೆಮ್ಮರವಾಗಿ ಬೆಳೆದಿದೆ ಎಂದು ಪ್ರೊ ಗಂಗಾಧರ ಪತ್ತಾರ ಹೇಳಿದರು.

ಅವರು ಪಟ್ಟಣದಲ್ಲಿ ಸೋಮವಾರ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತು ಹಮ್ಮಿಕೊಂಡಿರುವ ಕನ್ನಡ ಸಾಹಿತ್ಯ ಪರಿಷತ್ತಿನ ಸಂಸ್ಥಾಪನ ದಿನಾಚರಣೆ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದರು.

ಕರ್ನಾಟಕದ ಕನ್ನಡ ಭಾಷೆಯ ನೆಲ ಜಲ, ಕನ್ನಡ ಉಳಿವಿಗಾಗಿ ಕನ್ನಡ ಸಾಹಿತ್ಯ ಪರಿಷತ್ತು ಆರಂಭಿಸಿದವರು ಮೈಸೂರು ಒಡೆಯರು. ಕನ್ನಡ ಸಾಹಿತ್ಯ ಪರಿಷತ್ತು ಕನ್ನಡಪರ ಕೆಲಸ ಮಾಡುತ್ತಾ ಬೆಳ್ಳಿ ಮಹೋತ್ಸವ, ರಜತ ಮಹೋತ್ಸವ, ಶತಮಾನೋತ್ಸವ ಪೂರೈಸಿದ ಸರ್ಕಾರದ ಅಧೀನದಲ್ಲಿ ಕೆಲಸ ಮಾಡುವ ಸ್ವಾಯತ್ತ ಸಂಸ್ಥೆಯಾಗಿ ಮುನ್ನಡೆಯುತ್ತಿದೆ. ಕನ್ನಡ ಸಾಹಿತ್ಯ ಪರಿಷತ್ತು ಪ್ರಾರಂಭಗೊಂಡು 111 ವರ್ಷಗಳು ಪೂರೈಸಿದೆ. ಮುಂದೆಯೂ ನಿರಂತರವಾಗಿ ಕನ್ನಡ ಪರವಾಗಿ ಕೆಲಸ ಮಾಡಲಿದೆ ಎಂದು ಹೇಳಿದರು.

ಅಳ್ಳೊಳ್ಳಿ ಮಠದ ಶ್ರೀಶೈಲಯ್ಯ ಮಹಾಸ್ವಾಮಿ ಸಾನಿಧ್ಯ ವಹಿಸಿದ್ದರು. ಕಸಾಪ ಗೌರವ ಅಧ್ಯಕ್ಷ ಡಾ. ಸಂದೀಪ ಪಾಟೀಲ, ಕಸಾಪ ಅಧ್ಯಕ್ಷ ಶಿವಶರಣ ಗುಂದಗಿ, ಆಯುಬ ದೇವರಮನಿ, ಮೈಬೊಬ್ ಮಸಳಿ, ರವಿ ಬಡದಾಳ, ಅಶೋಕ ವಾರದ, ಶ್ರೀಶೈಲ ಮಠಪತಿ, ಶಶಿಧರ ನಯ್ಕೋಡಿ, ಪ್ರಕಾಶ ಜಿಂಗಡೆ, ಶಿವು ಮೇಲಿನಮನಿ, ರಾಜು ಮೇತ್ರಿ ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260512-26-925146322

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.