ಆಲಮೇಲ: ಹೆಸ್ಕಾಂ ಅಧಿಕಾರಿಗಳ ನಿರ್ಲಕ್ಷ್ಯದಿಂದ ಕುಡಿಯುವ ನೀರಿಗಾಗಿ ಪರದಾಡುವಂತಾಗಿದೆ. ಬೆಳೆಗಳು ಒಣಗುವ ಆತಂಕ ಎದುರಾಗಿದೆ ಎಂದು ರೈತರು ದೂರಿದ್ದಾರೆ.

ಆಲಮೇಲ ತಾಲ್ಲೂಕಿನ ತೊಂಟಾಪುರ ಗ್ರಾಮದ ರೈತರಿಗೆ ಕಳೆದ ನಾಲ್ಕೈದು ದಿನಗಳಿಂದ ವಿದ್ಯುತ್ ಇಲ್ಲದೆ ಕುಡಿಯುವ ನೀರಿಗಾಗಿ ಪರದಾಟ ಅನುಭವಿಸುವಂತಾಗಿದೆ. ತೊಂಟಾಪುರ ಗ್ರಾಮ ಆಲಮೆಲ ತಾಲ್ಲೂಕಿನ ಗ್ರಾಮವಾದರೆ ಈ ಗ್ರಾಮದ ರೈತರಿಗೆ ಇಂಡಿ ತಾಲ್ಲೂಕಿನ ನಾದ ಕೆಇಬಿಯಿಂದ ವಿದ್ಯುತ್ ವಿತರಣೆ ಯಾಗುತ್ತದೆ. ಕಳೆದು ನಾಲ್ಕೈದು ದಿನಗಳಿಂದ ವಿದ್ಯುತ್ ಸಂಪರ್ಕ ಕಡಿತಗೊಂಡಿದ್ದು ಈ ಬಗ್ಗೆ ನಾದ ಹೆಸ್ಕಾಂ ಅಧಿಕಾರಿಗಳಿಗೆ ವಿಚಾರಿಸಿದರೆ ತೊಂಟಾಪುರ ಗ್ರಾಮ ತಮ್ಮ ವ್ಯಾಪ್ತಿಗೆ ಬರುವುದಿಲ್ಲ ಅಲಮೇಲ ಸೆಕ್ಷನ್ಗೆ ಬರುತ್ತೆ ಅಲ್ಲೇ ವಿಚಾರಿಸಿಕೊಳ್ಳಿ ಎನ್ನುತ್ತಾರೆ.

ತೊಂಟಾಪುರ ಭಾಗ ಆಲಮೇಲ ಸೆಕ್ಷನ್ಗೆ ಬರುತ್ತದೆ. ನಾದ ವಿದ್ಯುತ್ ವಿತರಣಾ ಕೇಂದ್ರದಲ್ಲಿ ಲೋಡ್ ಹೆಚ್ಚಾಗಿದ್ದು ತೊಂಟಾಪುರ ಗ್ರಾಮಕ್ಕೆ ವಿದ್ಯುತ್ ವಿತರಣೆ ಮಾಡುವುದಿಲ್ಲ ಎನ್ನುತ್ತಾರೆ ಅಧಿಕಾರಿಗಳು ಎಂದು ರೈತರು ತಮ್ಮ ಅಳಲನ್ನು ಮಾಧ್ಯಮದವರೊಂದಿಗೆ ತೋಡಿಕೊಂಡರು.

ಬುಧವಾರ ಆಲಮೇಲದ ಕೆಇಬಿ ಅಧಿಕಾರಿಗಳಿಗೆ ಸಂಪರ್ಕಿಸಿ ವಿಚಾರಿಸಿದರೆ ‘ತೊಂಟಾಪುರ ಗ್ರಾಮಕ್ಕೆ ಇಂಡಿ ತಾಲೂಕಿನ ನಾದ ಗ್ರಾಮದ ವಿದ್ಯುತ್ ವಿತರಣಾ ಕೇಂದ್ರದಿಂದ ವಿತರಣೆ ಆಗುತ್ತದೆ ಅಲ್ಲೇ ವಿಚಾರಿಸಿಕೊಳ್ಳಿ’ ಎನ್ನುತ್ತಾರೆ. ಹೀಗಾದರೆ ತೊಂಟಾಪುರ ಗ್ರಾಮದ ರೈತರು ಯಾರಿಗೆ ಕೇಳಬೇಕು ಎಂದು ದಿಕ್ಕು ತೋಚದೆ ಪರಿತಪಿಸುತ್ತಿದ್ದಾರೆ.

ಸಂಬಂಧಿಸಿದ ಅಧಿಕಾರಿಗಳು ತಕ್ಷಣವೇ ಸಮಸ್ಯೆ ಪರಿಹರಿಸಬೇಕು ಇಲ್ಲದಿದ್ದರೆ ಸಂಬಂಧಿಸಿದ ಅಧಿಕಾರಿಗಳ ವಿರುದ್ಧ ಜಿಲ್ಲಾಧಿಕಾರಿ ಕಚೇರಿ ಮುಂದೆ ಧರಣಿ ಸತ್ಯಾಗ್ರ ಮಾಡಲಾಗುವುದು ಎಂದು ರೈತರು ಹೇಳಿದರು. ಸಿದ್ದಪ್ಪಗೌಡ ಬಿರಾದಾರ, ನಾಗಪ್ಪ ಗೌಡ ಬಿರಾದಾರ, ಸಿಪುತ್ರ ತಾವರಖೇಡ, ಮಾಳಪ್ಪ ಬಿರಾದಾರ, ಶಿವಲಿಂಗ ಬಿರಾದಾರ, ರಾಜು ತಾವರಖೇಡ, ಉಮೇಶ ತಾವರಖೇಡ, ಸಂಜು ಬಿರಾದಾರ, ಕಾಮಣ್ಣ ಬಿರಾದಾರ, ಆಕಾಶ್ ಬಿರಾದಾರ, ಸುನಿಲ್ ತಾವರಖೇಡ ಮುಂತಾದವರು ಇದೇ ವೇಳೆ ಆಲಮೇಲ ವಿದ್ಯುತ್ ವಿತರಣಾ ಕೇಂದ್ರ ಅಧಿಕಾರಿಗಳೊಂದಿಗೆ ಚರ್ಚಿಸಿ ಮನವಿ ಮಾಡಿಕೊಂಡರು.

ತೊಂಟಾಪುರ ಗ್ರಾಮ ಆಲಮೇಲ ಸೆಕ್ಷನ್ ಬರುವುದರಿಂದ ನಾದ ವಿತರಣೆ ಕೇಂದ್ರದಲ್ಲಿ ಲೋಡ್ ಹೆಚ್ಚಾಗಿದ್ದು ವಿದ್ಯುತ್ ನೀಡಲಾಗುವುದಿಲ್ಲ ಮಾನವೀಯ ದೃಷ್ಟಿಯಿಂದ ಕುಡಿಯುವ ನೀರಿಗಾಗಿ ತಾತ್ಕಾಲಿಕವಾಗಿ ಒಂದು ಗಂಟೆ ಮಾತ್ರ ನೀಡಬಹುದು. ನಿರಂತರವಾಗಿ ನೀಡಲಾಗುವುದಿಲ್ಲ. ಈ ಸಮಸ್ಯೆ ಆಲಮೇಲ ಅಧಿಕಾರಿಗಳು ಸರಿಪಡಿಸಿಕೊಳ್ಳಬೇಕು.

-ಉಮೇಶ್ ಸೋಲಾಪುರ. ನಾದ ವಿದ್ಯುತ್ ವಿತರಣಾ ಕೇಂದ್ರದ ಅಧಿಕಾರಿ.

ಕಳೆದ 50 ವರ್ಷಗಳಿಂದ ನಾದ ವಿದ್ಯುತ್ ವಿತರಣಾ ಕೇಂದ್ರದಿಂದಲೇ ತೊಂಟಾಪುರ ಗ್ರಾಮಕ್ಕೆ ವಿದ್ಯುತ್ ಪೂರೈಕೆ ಮಾಡಲಾಗುತ್ತಿದೆ. ಸದ್ಯ ಏಕಾಏಕಿ ಸ್ಥಗಿತಗೊಳಿಸಿ ನಮ್ಮ ವ್ಯಾಪ್ತಿಗೆ ಬರುವುದಿಲ್ಲಂದರೆ ಸರಿಯೇ. ಈ ಬಗ್ಗೆ ಮೇಲಧಿಕಾರಿಗಳು ರೈತರ ಸಮಸ್ಯೆಯನ್ನು ಬಗೆಹರಿಸಬೇಕು. ಇಲ್ಲದಿದ್ದರೆ ಜಿಲ್ಲಾಧಿಕಾರಿ ಕಚೇರಿ ಮುಂದೆ ಧರಣಿ ಸತ್ಯಾಗ್ರಹ ಮಾಡಲಾಗುವುದು. -ನಿಂಗಪ್ಪ ಬಿರಾದಾರ್ ತೊಂಟಾಪುರ್ ಗ್ರಾಮದ ರೈತ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260411-26-1759088556

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.