ಆಲಮಟ್ಟಿ: ಆಲಮಟ್ಟಿ ಎಂದೊಡನೆ ಕಣ್ಣಮುಂದೆ ಬರುವುದು ಸುಂದರ ಉದ್ಯಾನಗಳು. ಆದರೆ, ಏಪ್ರಿಲ್ನಿಂದ ಜೂನ್ವರೆಗೆ ಜಲಾಶಯದ ಹಿನ್ನೀರು ಬತ್ತಿದಾಗ ಅನಾವರಣಗೊಳ್ಳುವ ‘ಅಜ್ಞಾತ ಮುಖ’ ನಿಜಕ್ಕೂ ವಿಸ್ಮಯಕಾರಿ.

ಮರುಜೀವ ಪಡೆದ ಹಳೆಯ ಹಾದಿ: ವರ್ಷದ ಒಂಬತ್ತು ತಿಂಗಳು ಜಲಸಮಾಧಿಯಾಗಿರುವ ಹಳೆಯ ಚಿಮ್ಮಲಗಿ ಮತ್ತು ಬೇನಾಳ ಗ್ರಾಮಗಳು ಈಗ ಬೇಸಿಗೆಯ ಬಿಸಿಲಿಗೆ ದರ್ಶನ ನೀಡುತ್ತಿವೆ.

ನದಿ ದಂಡೆಯ ಕಚ್ಚಾ ರಸ್ತೆ, ಮಣ್ಣಿನ ವಾಸನೆ ಹಾಗೂ ಅಲೆಗಳ ನಾದ ಪ್ರಕೃತಿ ಪ್ರೇಮಿಗಳಿಗೆ ಹಳೆಯ ಅನುಭವ ನೀಡುತ್ತವೆ.

ಐತಿಹಾಸಿಕ ಕುರುಹುಗಳು: ಬೇನಾಳ ಗ್ರಾಮದ ಸುತ್ತಲಿನ ದೇವಸ್ಥಾನಗಳ ಅವಶೇಷಗಳು ಇತಿಹಾಸವನ್ನು ನೆನಪಿಸಿದರೆ, ಚಿಮ್ಮಲಗಿ ಭಾಗದ ಬಾವಾಸಾಬ (ಸೂಫಿ ಸಂತ) ಗುಡ್ಡ ಆಧ್ಯಾತ್ಮಿಕ ಶಾಂತಿ ನೀಡುತ್ತದೆ.

ಪ್ರಕೃತಿಯ ಕ್ಯಾನ್ವಾಸ್: ಬೆಟ್ಟದ ತುದಿಯ ಬೇವಿನ ಮರ, ತಂಗಾಳಿ ಮತ್ತು ನದಿಯ ಏಕಾಂತವು ಪ್ರಾಪಂಚಿಕ ಜಂಜಾಟಗಳನ್ನು ಮರೆಸುತ್ತವೆ.

ಶಂಖ-ಚಿಪ್ಪುಗಳ ಬಿಳಿ ಹಾಸಿಗೆ: ಹಿನ್ನೀರು ಸರಿದಂತೆ ಕಿಲೋ ಮೀಟರ್ಗಟ್ಟಲೆ ಹರಡಿರುವ ಅತಿ ಸಣ್ಣ ಬಿಳಿ ಶಂಖ ಮತ್ತು ಚಿಪ್ಪುಗಳು ಮರಳಿನ ಮೇಲೆ ಬಿಳಿ ಹಾಳೆಯನ್ನು ಚೆಲ್ಲಿದಂತೆ ಭಾಸವಾಗುತ್ತವೆ.

ನೀರು ಕಡಿಮೆಯಾದಂತೆ ಬಿಸಿಲಿಗೆ ಒಣಗಿದ ಈ ಜೀವವೈವಿಧ್ಯವು ಕರಾವಳಿಯ ತೀರವನ್ನು ನೆನಪಿಸುತ್ತದೆ.

ಪಕ್ಷಿಲೋಕದ ಕಲರವ: ನೀರಿನ ಜುಳುಜುಳು ನಾದದ ನಡುವೆ ಮೀನುಗಳಿಗಾಗಿ ಹೊಂಚು ಹಾಕುವ ಹಕ್ಕಿಗಳು, ದೂರದಲ್ಲಿ ನರ್ತಿಸುವ ನವಿಲುಗಳ ಹಿಂಡು ಪ್ರಕೃತಿಯ ಜೀವಕಳೆಯನ್ನು ಹೆಚ್ಚಿಸಿವೆ. ಸೂರ್ಯೋದಯ ಮತ್ತು ಸೂರ್ಯಾಸ್ತದ ದೃಶ್ಯಗಳನ್ನು ಸವಿಯಲು ಇದು ಪ್ರಶಸ್ತ ಸಮಯ.

ಈ ನೈಸರ್ಗಿಕ ಸೌಂದರ್ಯವನ್ನು ಸವಿಯಲು ಜೂನ್ ತಿಂಗಳವರೆಗೆ ಮಾತ್ರ ಅವಕಾಶ. ಪಾರ್ವತಿ ಕಟ್ಟಾ ರಸ್ತೆ ಸೇತುವೆಯ ಬೇನಾಳ ಭಾಗದಿಂದ ಈಗ ಕಚ್ಚಾ ರಸ್ತೆ ತೆರೆದುಕೊಂಡಿದ್ದು, ಬೆಳಿಗ್ಗೆ ಅಥವಾ ಸಂಜೆಯ ಪಯಣಕ್ಕೆ ಇದು ಸೂಕ್ತ ತಾಣ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260510-26-1801539713

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.