ಆಲಮಟ್ಟಿ: ಬೇಸಿಗೆಯ ಬಿಸಲಿನ ಪ್ರಖರತೆ ಹೆಚ್ಚಿದರೂ, ವ್ಯವಸ್ಥಿತ ನೀರು- ನಿರ್ವಹಣೆಯ ಕಾರಣ ಮಂಗಳವಾರ (ಮೇ12) ಆಲಮಟ್ಟಿ ಜಲಾಶಯದಲ್ಲಿ ಇನ್ನೂ 9.44 ಟಿಎಂಸಿ ಅಡಿ ಬಳಕೆ ಯೋಗ್ಯ ನೀರಿದೆ.

ಹೀಗಾಗಿ ಜೂನ್ 30 ರವರೆಗೂ ಮಳೆ ಬಾರದೇ, ಜಲಾಶಯದ ಒಳಹರಿವು ಆರಂಭಗೊಳ್ಳದಿದ್ದರೂ ಆಲಮಟ್ಟಿ ಜಲಾಶಯದ ಅವಲಂಬಿತ ಯಾವುದೇ ನಗರ, ಗ್ರಾಮಗಳಿಗೆ ಕುಡಿಯುವ ನೀರು ಪೂರೈಕೆಯಲ್ಲಿ ಯಾವುದೇ ತೊಂದರೆಯಿಲ್ಲ.ಸದ್ಯಕ್ಕೆ ನೀರಿನ ಆತಂಕದ ಸ್ಥಿತಿ ಅಂತೂ ಇಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಡೆಡ್ ಸ್ಟೋರೇಜ್ ನೀರು ಬಳಕೆ: ಆಲಮಟ್ಟಿ ಜಲಾಶಯದಲ್ಲಿ ಪೂರ್ಣ ಪ್ರಮಾಣದಲ್ಲಿ ನೀರು ಭರ್ತಿ ಪ್ರಕ್ರಿಯೆ ಆರಂಭಗೊಂಡಿದ್ದು 2002ರಲ್ಲಿ. ಅಲ್ಲಿಂದ ಇಲ್ಲಿಯವರೆಗೆ 8 ಬಾರಿ ಡೆಡ್ ಸ್ಟೋರೇಜ್ಗಿಂತ ಕಡಿಮೆ ಮಟ್ಟಕ್ಕೆ ಜಲಾಶಯದ ಮಟ್ಟ ಕುಸಿದಿದೆ.

ಈ ವರ್ಷ ಜಲಾಶಯ ಡೆಡ್ ಸ್ಟೋರೇಜ್ ಮಟ್ಟ (ಅಂದರೆ 506.87 ಮೀ ಎತ್ತರಕ್ಕೆ) ತಲುಪಲು ಇನ್ನೂ 2.34 ಮೀಟರ್ (ಸುಮಾರು 8.3 ಅಡಿ) ಬಾಕಿಯಿದೆ. ಜಲಾಶಯದ ಮೊದಲಿನ ನೀರಿನ ಸಂಗ್ರಹದ ಅಂಕಿ ಅಂಶಗಳನ್ನು ಗಮನಿಸಿದರೆ ಈ ವರ್ಷ ನೀರಿನ ಯಾವುದೇ ಆತಂಕದ ಸ್ಥಿತಿಗೆ ಇನ್ನೂ ತಲುಪಿಲ್ಲ.

8 ಬಾರಿ ಡೆಡ್ ಸ್ಟೋರೇಜ್: 2003, 2004, 2005, 2009, 2012, 2013, 2016 ಹಾಗೂ 2017 ರಲ್ಲಿ ಸೇರಿ ಒಟ್ಟು 8 ಬಾರಿ ಜಲಾಶಯ ತನ್ನ ಡೆಡ್ ಸ್ಟೋರೇಜ್ ಮಟ್ಟಕ್ಕಿಂತ ಕಡಿಮೆ ಮಟ್ಟಕ್ಕೆ ಇಳಿದಿದೆ. ಆ ಸಂದರ್ಭಗಳಲ್ಲಿ ಡೆಡ್ ಸ್ಟೋರೇಜ್ ನೀರನ್ನು ಕುಡಿಯುವ ನೀರಿಗೆ ಬಳಸಿಕೊಳ್ಳಲಾಗಿದೆ. ಆಲಮಟ್ಟಿ ಜಲಾಶಯದಲ್ಲಿ 17.62 ಟಿಎಂಸಿ ಅಡಿಯಷ್ಟು ನೀರು ಡೆಡ್ ಸ್ಟೋರೇಜ್ ನೀರಿದೆ. ಆಲಮಟ್ಟಿ ಜಲಾಶಯದ ಡೆಡ್ ಸ್ಟೋರೇಜ್ ನೀರಿನಷ್ಟು (ಅಂದರೆ 17 ಟಿಎಂಸಿ ಅಡಿ) ಸಂಗ್ರಹ ಸಾಮರ್ಥ್ಯ ಜಲಾಶಯಗಳೇ ರಾಜ್ಯದ ಹಲವೆಡೆ ಇವೆ. ಇಡೀ ರಾಜ್ಯದಲ್ಲಿಯೇ ಹೆಚ್ಚು ಡೆಡ್ ಸ್ಟೋರೇಜ್ ಹೊಂದಿದ ಜಲಾಶಯಗಳಲ್ಲಿ ಆಲಮಟ್ಟಿಯೂ ಒಂದು. ಆದರೆ ಈ ವರ್ಷ ಡೆಡ್ ಸ್ಟೋರೇಜ್ ಮಟ್ಟಕ್ಕಿಂತಲೂ ಆಲಮಟ್ಟಿ ಜಲಾಶಯದಲ್ಲಿ 9.44 ಟಿಎಂಸಿ ಅಡಿ ಬಳಕೆಯೋಗ್ಯ ನೀರು ಇನ್ನೂ ಇದೆ.

2002 ಮತ್ತು 2017 ರಲ್ಲಿ ಕನಿಷ್ಠ ಮಟ್ಟ: 2003ರಲ್ಲಿ ಜಲಾಶಯದ ಮಟ್ಟ 502.72 ಮೀಗೆ ಕುಸಿದಿತ್ತು. ಆಗ ಜಲಾಶಯದಲ್ಲಿ ಕೇವಲ 8.777 ಟಿಎಂಸಿ ಅಡಿ ನೀರಿತ್ತು. ಇತ್ತೀಚಿನ ವರ್ಷಗಳಲ್ಲಿ 2017 ರಲ್ಲಿ ಜೂನ್ 7 ರಂದು ಜಲಾಶಯದ ಮಟ್ಟ 503.47 ಮೀ ಗೆ ತಲುಪಿತ್ತು. ಆಗ ಜಲಾಶಯದಲ್ಲಿ ಕೇವಲ 9.815 ಟಿಎಂಸಿ ಅಡಿ ನೀರಿತ್ತು. 2016 ರಲ್ಲಿ ಜಲಾಶಯದ ಮಟ್ಟ 505.31 ಮೀಗೆ, 2012 ರಲ್ಲಿ 505.98 ಮೀ ಗೆ, 2013 ರಲ್ಲಿ 506.19 ಮೀಗೆ, 2009 ರಲ್ಲಿ 506.94 ಮೀ ಗೆ, 2005 ರಲ್ಲಿ 506.33 ಮೀಗೆ, 2004 ರಲ್ಲಿ 506.20 ಮೀಗೆ ಜಲಾಶಯದ ಮಟ್ಟ ಕುಸಿದಿತ್ತು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260513-26-1478623208

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.