ಮಂಗಳವಾರ, ಜನವರಿ 19, 2021
17 °C

ಅಣಿವೀರಭದ್ರೇಶ್ವರ ದೇವಸ್ಥಾನ: ₹9.45 ಲಕ್ಷ ಹುಂಡಿ ಸಂಗ್ರಹ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕಾಳಗಿ: ತಾಲ್ಲೂಕಿನ ಕೋರವಾರ ಅಣಿವೀರಭದ್ರೇಶ್ವರ ದೇವಸ್ಥಾನದಲ್ಲಿ ಒಂದು ವರ್ಷದಿಂದ ಸಂಗ್ರಹವಾಗಿದ್ದ ಭಕ್ತರ ಹುಂಡಿ ಹಣವನ್ನು ಗುರುವಾರ ಎಣಿಕೆ ಮಾಡಲಾಯಿತು.

ದೇವಸ್ಥಾನ ಸಮಿತಿ ಅಧ್ಯಕ್ಷೆ, ಕಾಳಗಿ ತಹಶೀಲ್ದಾರ್ ನೀಲಪ್ರಭಾ ಬಬಲಾದ ನೇತೃತ್ವದಲ್ಲಿ ಹುಂಡಿ ಪೆಟ್ಟಿಗೆ ತೆರೆದು ಕಂದಾಯ ಇಲಾಖೆ ಸಿಬ್ಬಂದಿ ಹಣ ಎಣಿಕೆ ಮಾಡಿದರು.

₹9,45,560 ನಗದು ಸಂಗ್ರಹವಾಗಿದ್ದು ಅದರಂತೆ ಒಂದು ಬೆಳ್ಳಿ ಖಡ್ಗ, 10ಕ್ಕೂ ಹೆಚ್ಚು ಕಣ್ಬಟ್ಟಲುಗಳು, ಒಂದು ಚಿನ್ನದ ಸುತ್ತುಂಗರು ಕಂಡುಬಂದಿದೆ. ಹುಂಡಿಯ ಈ ಎಲ್ಲವನ್ನು ದೇವಸ್ಥಾನದ ಹೆಬ್ಬಾಳ ಗ್ರಾಮದ ಕರ್ನಾಟಕ ಗ್ರಾಮೀಣ ಬ್ಯಾಂಕ್ ಖಾತೆಗೆ ಜಮಾ ಮಾಡಲಾಯಿತು ಎಂದು ತಹಶೀಲ್ದಾರ್ ನೀಲಪ್ರಭಾ ಬಬಲಾದ ತಿಳಿಸಿದ್ದಾರೆ.

ಗ್ರೇಡ್-2 ತಹಶೀಲ್ದಾರ್ ಶಾಂತಗೌಡ ಬಿರಾದಾರ, ಶಿರಸ್ತೆದಾರ ಸಂತೋಷ ಚಂದನಕೇರಾ, ಕಂದಾಯ ನಿರೀಕ್ಷಕ ಕರಬಸಪ್ಪ ಬೆನಕನಳ್ಳಿ, ರೇವಣಸಿದ್ದಯ್ಯ ಹಿರೇಮಠ ಮತ್ತು ವಿವಿಧ ಗ್ರಾಮ ಲೆಕ್ಕಾಧಿಕಾರಿಗಳು, ಗ್ರಾಮ ಸಹಾಯಕರು, ಬ್ಯಾಂಕ್ ಸಿಬ್ಬಂದಿ ಇದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು