ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಂಚಮಸಾಲಿ ಮೀಸಲಾತಿ ಹೋರಾಟ ಸಮಿತಿಗೆ ನೇಮಕ

Last Updated 28 ನವೆಂಬರ್ 2022, 11:08 IST
ಅಕ್ಷರ ಗಾತ್ರ

ವಿಜಯಪುರ: ಅಖಿಲ ಭಾರತ ಲಿಂಗಾಯತ ಪಂಚಮಸಾಲಿ ಸಮಾಜ ಟ್ರಸ್ಟ್ ವಿಜಯಪುರ ಜಿಲ್ಲಾ ಘಟಕದಿಂದ ವಿವಿಧ ತಾಲ್ಲೂಕು ಪಂಚಮಸಾಲಿ 2 ಎ ಮೀಸಲಾತಿ ಹೋರಾಟ ಸಮಿತಿಗೆ ಗೌರವ ಅಧ್ಯಕ್ಷರನ್ನು ನೇಮಕ ಮಾಡಲಾಗಿದೆ ಸಮಿತಿಯ ಜಿಲ್ಲಾ ಗೌರವ ಅಧ್ಯಕ್ಷ ಎನ್.ಎಸ್. ರುದ್ರಗೌಡ ತಿಳಿಸಿದರು.

ನಗರದಲ್ಲಿ ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು, ವಿಜಯಪುರ ನಗರ ಹಾಗೂ ತಾಲ್ಲೂಕು ಗೌರವ ಅಧ್ಯಕ್ಷರಾಗಿ ನೂತನ ಮಹಾನಗರ ಪಾಲಿಕೆ ಸದಸ್ಯ ಪ್ರೇಮಾನಂದ ಬಿರಾದಾರ, ಇಂಡಿ ತಾಲ್ಲೂಕು ಗೌರವ ಅಧ್ಯಕ್ಷರಾಗಿ ಎಸ್.ಎ. ಪಾಟೀಲ (ಡೊಮನಾಳ), ಬಬಲೇಶ್ವರ ತಾಲ್ಲೂಕು ಗೌರವ ಅಧ್ಯಕ್ಷರಾಗಿ ಬಿ.ಎಸ್. ಬಿರಾದಾರ ಅವರನ್ನು ನೇಮಕ ಮಾಡಲಾಗಿದೆ ಎಂದರು.

ಸಿಂದಗಿ ತಾಲ್ಲೂಕು ಗೌರವ ಅಧ್ಯಕ್ಷರಾಗಿ ಚಂದ್ರಶೇಖರ ನಾಗರಬೆಟ್ಟ, ಮುದ್ದೇಬಿಹಾಳ ತಾಲ್ಲೂಕು ಗೌರವ ಅಧ್ಯಕ್ಷರಾಗಿ ಅಮರಪ್ಪ ಗಂಗನಗೌಡ್ರು (ಗುಂಡು ಸಾಹುಕಾರ), ಬಸವನಬಾಗೇವಾಡಿ ತಾಲ್ಲೂಕು ಗೌರವ ಅಧ್ಯಕ್ಷರಾಗಿ ಶ್ರೀಕಾಂತ ಬಿ. ಕೊಟ್ರಶೆಟ್ಟಿ, ತಿಕೋಟಾ ತಾಲ್ಲೂಕು ಗೌರವ ಅಧ್ಯಕ್ಷರಾಗಿ ಅಶೋಕ ನಿಂ.ಬಿರಾದಾರ (ಬಾಬಾನಗರ) ಅವರನ್ನು ನೇಮಕ ಮಾಡಲಾಗಿದೆ ಎಂದು ಹೇಳಿದರು.

ಡಿ.22ಕ್ಕೆ ಅಂತಿಮ ಹೋರಾಟ

ಪಂಚಮಸಾಲಿ ಸಮಾಜಕ್ಕೆ 2 ಎ ಮೀಸಲಾತಿ ಕಲ್ಪಿಸಲು ಆಗ್ರಹಿಸಿ ಡಿಸೆಂಬರ್‌ 22ರಂದು ಬೆಳಗಾವಿಯಲ್ಲಿ ಅಂತಿಮ ಹೋರಾಟ ನಡೆಸಲಾಗುವುದು. ಈ ಹೋರಾಟದಲ್ಲಿ ಸುಮಾರು 10 ಲಕ್ಷ ಜನ ಸೇರಲಿದ್ದಾರೆ ಎಂದು ತಿಳಿಸಿದರು.

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಮೇಲೆ ಸಂಪೂರ್ಣ ವಿಶ್ವಾಸ ಇದೆ. ಡಿ.22ರ ಒಳಗಾಗಿ ಮೀಸಲಾತಿ ಘೋಷಣೆ ಮಾಡುತ್ತಾರೆ ಎಂದು. ಬೊಮ್ಮಾಯಿ ಅವರು ನೀಡದೇ ಇದ್ದರೆ ಮುಂದೆ ಇನ್ನಾರಿಂದಲೂ ಕೊಡಲು ಸಾಧ್ಯವಿಲ್ಲ ಎಂದರು.

ಜಿಲ್ಲಾ ಘಟಕದ ಅಧ್ಯಕ್ಷರ ಬಿ.ಎಂ. ಪಾಟೀಲ(ದೇವರಹಿಪ್ಪರಗಿ), ಪ್ರಭಾಕರ ಎಸ್. ಬಗಲಿ, ನೀಲಕಂಠಗೌಡ ಪಾಟೀಲ, ರಾಜಕುಮಾರ ಪಾಟೀಲ, ರವಿಕಾಂತ ಪಾಟೀಲ, ರಾಜಕುಮಾರ ಕುಲಕರ್ಣಿ, ಅಯ್ಯನಗೌಡ ಬಿರಾದಾರ, ಮಲ್ಲಿಕಾರ್ಜುನ ಹಂಗರಗಿ, ಬಸವರಾಜ ಭೂಮಿ, ಜಿಲ್ಲಾ ವಕ್ತಾರ ದಾನೇಶ ಅವಟಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT