ವಿಜಯಪುರ: ನಗರದ ವಿವಿಧ ಪೊಲೀಸ್ ಠಾಣೆಗಳ ವ್ಯಾಪ್ತಿಯಲ್ಲಿ ಒಂದು ತಿಂಗಳ ಅವಧಿಯಲ್ಲಿ ನಡೆದ ಕಳ್ಳತನ ಪ್ರಕರಣಗಳಿಗೆ ಸಂಬಂಧಿಸಿದಂತೆ ಯಶಸ್ವಿ ಕಾರ್ಯಾಚರಣೆ ನಡೆಸಿ, 14 ಆರೋಪಿಗಳನ್ನು ಬಂಧಿಸಿ, ₹67.79 ಲಕ್ಷ ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ.

ಜಿಲ್ಲಾ ಪೊಲೀಸ್ ಕಚೇರಿಯಲ್ಲಿ ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮಣ ನಿಂಬರಗಿ, ನಗರದ ವಿವಿಧ ಪೊಲೀಸ್ ಠಾಣೆಗಳ ವ್ಯಾಪ್ತಿಯಲ್ಲಿ ನಡೆದಿದ್ದ 12 ಮನೆ, ಇತರೆ ಕಳ್ಳತನ ಹಾಗೂ ಮೋಸ ಮಾಡಿ ನಕಲಿ ಬಂಗಾರದ ನಾಣ್ಯಗಳನ್ನು ಕೊಟ್ಟು ಹಣ ತೆಗೆದುಕೊಂಡ ಪ್ರಕರಣಗಳಿಗೆ ಸಂಬಂಧಿಸಿದಂತೆ ಕಾನೂನು ಸಂಘರ್ಷಕ್ಕೊಳಪಟ್ಟ ಒಬ್ಬ ಬಾಲಕ ಸೇರಿದಂತೆ ಒಟ್ಟು 14 ಜನ ಆರೋಪಿಗಳನ್ನು ಬಂಧಿಸಿ, 271 ಗ್ರಾಂ ಬಂಗಾರದ ಆಭರಣಗಳು ಹಾಗೂ ನಗದು ₹30 ಲಕ್ಷ ಹಾಗೂ ಬೈಕು, ಒಂದು ಹಿಟ್ಯಾಚ್ ಬ್ರೇಕರ್, ಒಂದು ಎಸಿ ಸೇರಿದಂತೆ ಒಟ್ಟು ₹67,79,500 ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಂಡು, ಆರೋಪಿಗಳನ್ನು ಕೋರ್ಟ್ಗೆ ಹಾಜರು ಪಡಿಸಲಾಗಿದೆ ಎಂದು ತಿಳಿಸಿದರು.

ನಕಲಿ ಬಂಗಾರದ ನಾಣ್ಯ:

ನಕಲಿ ಬಂಗಾರದ ನಾಣ್ಯಗಳನ್ನು ತೋರಿಸಿ ಹಣ ದೋಚಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಗೋಳಗುಮ್ಮಟ ಠಾಣೆ ಪೊಲೀಸರು ವಿಜಯನಗರ ಜಿಲ್ಲೆಯ ಹೊಸಪೇಟೆ ತಾಲ್ಲೂಕಿನ ಗರಗದ ಕೆ.ಮುನೇಶ್ (26) ಎಂಬಾತನಿಂದ ₹10 ಲಕ್ಷ ಹಾಗೂ ಮೊಬೈಲ್ ಪೋನ್ನ್ನು ವಶಪಡಿಸಿಕೊಂಡಿದ್ದಾರೆ ಎಂದರು.

ಮನೆ ಕಳವು ಪ್ರಕರಣ:

ಜಲನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದ್ದ ಮನೆ ಕಳವು ಪ್ರಕರಣದಲ್ಲಿ ಕಾನೂನು ಸಂಘರ್ಷಕ್ಕೊಳಗಾದ ಬಾಲಕನಿಂದ ₹4.80 ಲಕ್ಷ ಮೌಲ್ಯದ 51 ಗ್ರಾಂ ತೂಕದ ಬಂಗಾರದ ಆಭರಣ ವಶಪಡಿಸಿಕೊಳ್ಳಲಾಗಿದೆ ಎಂದರು.

ಆದರ್ಶನಗರ ಪೊಲೀಸ್ ಠಾಣೆಯಲ್ಲಿ ದಾಖಲಾದ ಮನೆ ಕಳವು ಪ್ರಕರಣದಲ್ಲಿ ಗ್ಯಾಂಗ್ ಬಾವಡಿ ರಾಯಲ್ ಮ್ಯಾರೇಜ್ ಹಾಲ್ ಹತ್ತಿರದ ನಿವಾಸಿಯಾದ ಆರೋಪಿ ಮುರ್ತುಜಸಾಬ(21)ನಿಂದ 45 ಗ್ರಾಂ ಬಂಗಾರದ ಸಾಮಾನುಗಳನ್ನು ಮತ್ತು ₹5.10 ಲಕ್ಷ ಮೌಲ್ಯದ ಮೂರು ಬೈಕುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ತಿಳಿಸಿದರು.

ಎಪಿಎಂಸಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದ ಎರಡು ಮನೆ ಕಳವು ಪ್ರಕರಣಕ್ಕೆ ಸಂಬಂಧಿಸಿದಂತೆ ಚಡಚಣ ತಾಲ್ಲೂಕಿನ ಹಾವಿನಾಳದ ಆರೋಪಿ ಮೋದಿನಸಾಬ ವಾಲೀಕಾರ ಎಂಬಾತನನ್ನು ಬಂಧಿಸಿ, 172 ಗ್ರಾಂ ಬಂಗಾರದ ಆಭರಣಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದರು.

ಕಿವಿಯೋಲೆ ವಶ:

ವಿಜಯಪುರ ದರ್ಗಾ ರಸ್ತೆಯ ಶಕ್ತಿ ನಗರದ ಆರೋಪಿ ಮುದಸ್ಸರ್ ಪಠಾಣ (30) ಎಂಬಾತನನ್ನು ಬಂಧಿಸಿ 3 ಗ್ರಾಂ ಬಂಗಾರದ ಕಿವಿಯೊಲೆ ಹಾಗೂ ₹2500 ನಗದು ಸೇರಿದಂತೆ ಒಟ್ಟು ₹14,500 ಕಿಮ್ಮತ್ತಿನವುಗಳನ್ನು ಆದರ್ಶನಗರ ಪೊಲೀಸರು ವಶಪಡಿಸಿಕೊಂಡಿದ್ದಾರೆ.

ಎಸಿ ಕಳವು:

ವಿಜಯಪುರದ ಶಾಲಿ ಹುಸೇನಿ ನಗರದ ಆರೋಪಿ ಆಶೀಫ್ ಉಸ್ಥಾನ ಜಮಾದಾರ(33) ಎಂಬಾತನ್ನು ಆದರ್ಶ ನಗರ ಠಾಣೆ ಪೊಲೀಸರು ಬಂಧಿಸಿ, ಎಸಿ, ಎಸಿ ಔಟ್ ಡೋರ್ ಯುನಿಟ್ ಸೇರಿದಂತೆ ₹ 40 ಸಾವಿರ ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ.

ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶಂಕರ ಮಾರಿಹಾಳ ಹಾಗೂ ರಾಮನಗೌಡ ಹಟ್ಟಿ, ವಿಜಯಪುರ ನಗರ ಡಿವೈಎಸ್ಪಿ ಬಸವರಾಜ ಯಲಿಗಾರ, ಗೋಳಗುಮ್ಮಟ ಸಿಪಿಐ ಮಲ್ಲಯ್ಯ ಮಠಪತಿ, ಪಿಎಸ್ಐ ಸೀತಾರಾಮ ಲಮಾಣಿ, ಪ್ರೇಮಾ ಕುಚಬಾಳ, ಜ್ಯೋತಿ ಖೋತ, ಡಿ.ಎಂ.ಸಂಗಾಪೂರ, ಸಿ.ಆರ್.ಸಾಗರ, ಎಂ.ಡಿ.ಘೋರಿ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.