ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮನೆಗಳ್ಳರ ಬಂಧನ: ₹10.26 ಲಕ್ಷ ಮೌಲ್ಯದ ಚಿನ್ನಾಭರಣ ವಶ

Last Updated 24 ಆಗಸ್ಟ್ 2020, 16:28 IST
ಅಕ್ಷರ ಗಾತ್ರ

ವಿಜಯಪುರ: ನಗರದ ವಿವಿಧೆಡೆ ನಡೆದ ಸರಣಿ ಮನೆಗಳವು ಪ್ರಕರಣಕ್ಕೆ ಸಂಬಂಧಿಸಿದಂತೆ ಒಬ್ಬ ಬಾಲಾಪರಾಧಿ ಸೇರಿದಂತೆ ಮೂವರನ್ನು ಇಟ್ಟಂಗಿಹಾಳ ನಾಕಾ ಹತ್ತಿರ ಪೊಲೀಸರು ಸೋಮವಾರ ಬಂಧಿಸಿದ್ದಾರೆ.

ಮದಿನಾ ನಗರದ ರೇಡಿಯೊ ಕೇಂದ್ರದ ಹತ್ತಿರದ ನಿವಾಸಿ, ಮೆಕ್ಯಾನಿಕ್ ಸ್ವರೂಪ ಜಾಲವಾದಿ(21), ನೆಹರೂ ನಗರ ಗ್ಯಾಂಗ್‌ ಬಾವಡಿ ನಿವಾಸಿಸತೀಶ ನಾಯಕ(26) ಮತ್ತು ಬಾಲಪರಾಧಿ ಬಂಧಿತ ಆರೋಪಿಗಳಾಗಿದ್ದಾರೆ.

ಬಂಧಿತ ಆರೋಪಿಗಳಿಂದ ₹ 10.26 ಲಕ್ಷ ಮೌಲ್ಯದ 190 ಗ್ರಾಂ ಬಂಗಾರದ ಆಭರಣವನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಅನುಪಮ್‌ ಅಗರವಾಲ್‌ ತಿಳಿಸಿದ್ದಾರೆ.

ಡಿಎಸ್‌ಪಿ ಕೆ.ಸಿ.ಲಕ್ಷ್ಮೀನಾರಾಯಣ ನೇತೃತ್ವದಲ್ಲಿ ಗೋಳಗುಮ್ಮಟ ಸಿಪಿಐ ಬಸವರಾಜ ಮುಕರ್ತಿಹಾಳ, ಆದರ್ಶನಗರ ಠಾಣೆ ಪಿಎಸ್‌ಐಎಸ್.ಬಿ.ಆಜೂರ, ಸಿಬ್ಬಂದಿಗಳಾದ ಎಸ್.ಎಸ್.ಮಾಳೆಗಾಂವ್, ವೈ.ಪಿ.ಕಬಾಡೆ, ಸಂಜಯ ಬನಪಟ್ಟಿ, ಮಹೇಶ ಸಾಲಿಕೇರಿ, ಬಿ.ಕೆ.ರೋಣಿಹಾಳ, ಸುನೀಲ ಗೌಳಿ, ಗುಂಡಣ್ಣ ಗಿರಣಿವಡ್ಡರ, ಚಂದ್ರು ಹತ್ತರಕಿ ಅವರನ್ನು ಒಳಗೊಂಡ ತನಿಖಾ ತಂಡ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT