ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಜಯಪುರಕ್ಕೆ ಬೊಮ್ಮಾಯಿ ಆಗಮನ; ಗರಿಗೆದರಿದ ಕುತೂಹಲ

ಕೃಷ್ಣೆಗೆ ಬಾಗಿನ; ವಿಜಯಪುರದಲ್ಲಿ ₹ 454 ಕೋಟಿ ಮೊತ್ತದ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ
Last Updated 29 ಸೆಪ್ಟೆಂಬರ್ 2022, 14:22 IST
ಅಕ್ಷರ ಗಾತ್ರ

ವಿಜಯಪುರ:ಮುಂಬರುವ ವಿಧಾನಸಭೆ ಹಾಗೂ ವಿಜಯಪುರ ಮಹಾನಗರ ಪಾಲಿಕೆ ಚುನಾವಣೆ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಸೆ.30ರಂದುಜಿಲ್ಲೆಗೆ ಆಗಮಿಸುತ್ತಿರುವುದು ಕುತೂಹಲ ಕೆರಳಿಸಿದೆ.

ಐತಿಹಾಸಿಕ ವಿಜಯಪುರ ನಗರ ಸೇರಿದಂತೆ ಜಿಲ್ಲೆಗೆ ಮಹತ್ವದ ಕೊಡುಗೆ ಅಥವಾ ಭರವಸೆಗಳನ್ನು ಮುಖ್ಯಮಂತ್ರಿ ನೀಡುವರೇ ಎಂಬುದು ಕಾದುನೋಡಬೇಕಿದೆ. ಜೊತೆಗೆ ಮುಖ್ಯಮಂತ್ರಿ ಆಗಮನದ ಹಿನ್ನೆಲೆಯಲ್ಲಿ ಬಿಜೆಪಿಯಲ್ಲಿ ರಾಜಕೀಯ ಚಟುವಟಿಕೆಗಳು ಗರಿಗೆದರಿವೆ.

ಅಂದು ಬೆಳಿಗ್ಗೆ 10ಕ್ಕೆ ಆಲಮಟ್ಟಿಯಲ್ಲಿ ಕೃಷ್ಣೆಗೆ ಬಾಗಿನ ಅರ್ಪಿಸಿದ ಬಳಿಕ ವಿಜಯಪುರ ನಗರಕ್ಕೆ ಬೆಳಿಗ್ಗೆ 11ಕ್ಕೆ ಆಗಮಿಸುವ ಮುಖ್ಯಮಂತ್ರಿ ಬೊಮ್ಮಾಯಿ, ಪಾಲಿಕೆ ವ್ಯಾಪ್ತಿಯಲ್ಲಿ ಕೈಗೊಂಡಿರುವ ₹ 454.84 ಕೋಟಿ ಮೊತ್ತದ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಶಂಕುಸ್ಥಾಪನೆ ಮತ್ತು ಉದ್ಘಾಟನೆ ನೆರವೇರಿಸಲಿದ್ದಾರೆ.

ಮುಖ್ಯಮಂತ್ರಿ ಅವರೊಂದಿಗೆ ಸಚಿವರಾದ ಗೋವಿಂದ ಕಾರಜೋಳ, ವಿ.ಸೋಮಣ್ಣ, ಸಿ.ಸಿ.ಪಾಟೀಲ, ಆನಂದ ಸಿಂಗ್‌, ಮುನಿರತ್ನ, ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಭಾಗವಹಿಸಲಿದ್ದಾರೆ. ಜ್ಞಾನ ಯೋಗಾಶ್ರಮದ ಸಿದ್ದೇಶ್ವರ ಶ್ರೀಗಳು ಕಾರ್ಯಕ್ರಮದ ಸಾನ್ನಿಧ್ಯ ವಹಿಸಲಿದ್ದಾರೆ.

ಉದ್ಘಾಟನೆ:ಮಹಾನಗರ ಪಾಲಿಕೆ ನೂತಯನ ಕಟ್ಟಡ, ಗಾಂಧಿ ಭವನ ಹಾಗೂ ಅಕ್ಕಮಹಾದೇವಿ ಮಹಿಳಾ ವಿವಿ ಆವರಣದಲ್ಲಿ ನಿರ್ಮಾಣವಾಗಿರುವ ಅಂಬೇಡ್ಕರ್‌ ಸಮುದಾಯ ಭವನ, ಮಹಿಳಾ ವಸ್ತು ಸಂಗ್ರಹಾಲಯ, ಸೈನಿಕ ಶಾಲೆ ಆವರಣದಲ್ಲಿ ನಿರ್ಮಾಣವಾಗಿರುವ ಹಾಕಿ ಕೋರ್ಟ್‌, ತಾಲ್ಲೂಕು ಪಂಚಾಯ್ತಿಯ ವಾಣಿಜ್ಯ ಸಂಕೀರ್ಣ, ಸರ್ಕಾರಿ ವೀಕ್ಷಣಾಲಯದ ಹೊಸ ಕಚೇರಿ, ಡಾ.ಬಾಬು ಜನಜೀವನ್‌ರಾಂ ಭವನವನ್ನು ಮುಖ್ಯಮಂತ್ರಿ ಉದ್ಘಾಟಿಸಲಿದ್ದಾರೆ.

ತೊರವಿಯಲ್ಲಿ ₹ 35 ಕೋಟಿ ಮೊತ್ತದಲ್ಲಿ ಒಣದ್ರಾಕ್ಷಿ ಸಂಗ್ರಹಕ್ಕೆ ಶೀಥಲ ಗೃಹ ನಿರ್ಮಾಣಕ್ಕೆ ಶಂಕು ಸ್ಥಾಪನೆ ನೆರವೇರಿಸಲಿದ್ದಾರೆ.

ಜೆಎಸ್‌ಎಸ್‌ ಸೂಪರ್‌ ಸ್ಪೆಷಾಲಿಟಿ ಆಸ್ಪತ್ರೆ
ವಿಜಯಪುರ:
ಶ್ರೀ ಸಿದ್ದೇಶ್ವರ ಲೋಕ ಕಲ್ಯಾಣ ಚಾರಿಟೇಬಲ್‌ ಟ್ರಸ್ಟ್‌ ವತಿಯಿಂದ ₹ 25 ಕೋಟಿ ಮೊತ್ತದಲ್ಲಿ ನಗರದಲ್ಲಿ ನಿರ್ಮಿಸಿರುವ ಜ್ಞಾನಯೋಗಿ ಶ್ರಿ ಸಿದ್ದೇಶ್ವರ ಸ್ವಾಮೀಜಿ ಸೂಪರ್‌ ಸ್ಪೆಷಾಲಿಟಿ ಆಸ್ಪತ್ರೆಯನ್ನು ಮುಖ್ಯಮಂತ್ರಿ ಬೊಮ್ಮಾಯಿ ಉದ್ಘಾಟಿಸಲಿದ್ದಾರೆ.

108 ಬೆಡ್‌ಗಳ ಈ ಆಸ್ಪತ್ರೆಯಲ್ಲಿ 30 ಐಸಿಯು, 44 ಜನರಲ್‌, 12 ಕ್ಯಾಸುಲಿಟಿ, 14 ಮೆಟರ್ನಿಟಿ ಹಾಗೂ 8 ಡಿಲೆಕ್ಸ್‌ ಬೆಡ್‌ಗಳನ್ನು ಒಳಗೊಂಡಿದೆ.

ನ್ಯೂರೊ ಸರ್ಜರಿ ಮಾಡಬಹುದಾದಂತ ಅಂತರರಾಷ್ಟ್ರೀಯ ಮಟ್ಟದ ಮಾಡ್ಯುಲರ್‌ ಆಪರೇಷನ್‌ ಥಿಯೇಟರ್‌ ಹೊಂದಿದೆ.

ಅತ್ಯಾಧುನಿಕ ಸೌಲಭ್ಯಗಳನ್ನು ಒಳಗೊಂಡ ಎಮರ್ಜೆನ್ಸಿ ಅಂಡ್‌ ಟ್ರೋಮಾ ಕೇರ್‌, ಆಕ್ಸಿಜನ್‌ ಪ್ಲಾಂಟ್‌, ಹೈಟೆಕ್‌ ಅಂಬುಲೆನ್ಸ್‌ ವ್ಯವಸ್ಥೆ ಇದೆ.

*****

ಪಾಲಿಕೆ ವ್ಯಾಪ್ತಿಯಲ್ಲಿ ಸಿಸಿ ರಸ್ತೆ, ಒಳಚಂಡಿ, ಕುಡಿಯುವನೀರು ಪೂರೈಕೆ, ವಸತಿ ರಹಿತರಿಗೆ ಮನೆಗಳ ನಿರ್ಮಾಣ, ಓಪನ್‌ ಜಿಮ್‌, ಕ್ರೀಡಾಂಗಣ ಹಾಗೂ ಉದ್ಯಾನಗಳ ಅಭಿವೃದ್ಧಿ ಪರ್ವ ನಡೆದಿದೆ.
–ಬಸನಗೌಡ ಪಾಟೀಲ ಯತ್ನಾಳ,ಶಾಸಕ, ವಿಜಯಪುರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT