ಸಿಂದಗಿ: ಬಳಗಾನೂರ ಕೆರೆಯ ನೀರನ್ನು ಸಿಂದಗಿ, ದೇವರಹಿಪ್ಪರಗಿ, ಆಲಮೇಲ ತಾಲ್ಲೂಕುಗಳ 50ರಷ್ಟು ಹಳ್ಳಿಗಳು ಅವಲಂಬಿತವಾಗಿವೆ. ವಿಶೇಷವಾಗಿ ಸಿಂದಗಿ ಪಟ್ಟಣಕ್ಕೆ ಕುಡಿಯುವ ನೀರಿನ ಪೂರೈಕೆಗಾಗಿ ಬೇಸಿಗೆಯಲ್ಲಿ ಇದೇ ಕೆರೆ ನೀರು ಆಸರೆಯಾಗಿದೆ. ಈ ನೀರು ಸಿಂದಗಿ ಕೆರೆಗೆ ಹರಿಯದಿದ್ದರೆ ಇಲ್ಲಿ ಹಾಹಾಕಾರ ಉಂಟಾಗುತ್ತಿತ್ತು.

ಮತಕ್ಷೇತ್ರದ ಶಾಸಕರೂ ರಾಜ್ಯದ ಸಚಿವರೂ ಆಗಿದ್ದ ದಿವಂಗತ ಎಂ.ಸಿ.ಮನಗೂಳಿಯವರು ಬಳಗಾನೂರ ಕೆರೆ ನೀರನ್ನು 52 ಎಕರೆ ವಿಸ್ತಾರ ಹೊಂದಿದ ಸಿಂದಗಿ ಕೆರೆಗೆ ಹರಿಸುವ ಮೂಲಕ ಮಹದುಪಕಾರ ಮಾಡಿದ್ದಾರೆ ಎಂದು ಜನತೆ ಸ್ಮರಿಸುತ್ತಾರೆ.

2021 ರಲ್ಲಿ ಬಳಗಾನೂರ ಕೆರೆ ನೀರು ಸಿಂದಗಿಗೆ ಹರಿಸುವ ಶಾಶ್ವತ ಯೋಜನೆ ಲೋಕಾರ್ಪಣೆಗೊಂಡಿದೆ. ಬೇಸಿಗೆಯಲ್ಲಿ ಪಟ್ಟಣದಲ್ಲಿ ನೀರಿನ ಭವಣೆ ವಿಪರೀತವಾಗಿರುತ್ತಿತ್ತು. ಆದರೆ, ಈಗ ಬೇಸಿಗೆಯಲ್ಲಿಯೂ ಇಲ್ಲಿಯ ಕೆರೆಯಲ್ಲಿ ನೀರಿನ ಸಂಗ್ರಹಣೆ ಕಾಣಲಾಗುತ್ತದೆ.

ಈ ಬಾರಿ ಬೇಸಿಗೆಯಲ್ಲಿ ಕಲಬುರ್ಗಿ ಜಿಲ್ಲೆಯ ಅಫಜಲಪುರ ಪಟ್ಟಣಕ್ಕೆ ಬಳಗಾನೂರ ಕೆರೆಯಿಂದ ಸೊನ್ನ ಬ್ಯಾರೇಜ್ ಗೆ ನೀರು ಹರಿಸಲಾಗುವುದು ಎಂದು ಅಫಜಲಪುರ ಶಾಸಕರು ನೀಡಿದ ಹೇಳಿಕೆ ಈ ಭಾಗದ ಜನತೆಯಲ್ಲಿ ಆತಂಕ ಮೂಡಿಸಿತ್ತು. ಆದರೆ, ಬಳಗಾನೂರ ಕೆರೆಯಿಂದ ನೀರು ಹರಿಸುತ್ತಿಲ್ಲ. ಕೃಷ್ಣಾ ಕಾಲುವೆ ನೀರನ್ನೇ ಉಮರಾಣಿ ಬ್ಯಾರೇಜ್ ನಿಂದ ಭೀಮಾಗೆ ಹರಿಸಲಾಗುತ್ತದೆ ಎಂದು ಸಿಂದಗಿ ಕ್ಷೇತ್ರದ ಶಾಸಕ ಅಶೋಕ ಮನಗೂಳಿ ನೀಡಿದ ಸ್ಪಷ್ಟನೆ ಜನತೆಯಲ್ಲಿ ಆತಂಕ ದೂರು ಮಾಡಿದೆ.

ಆದಾಗ್ಯೂ ಸಿಂದಗಿ ಕೆರೆಯಲ್ಲಿ ಸಾಕಷ್ಟು ಪ್ರಮಾಣದಲ್ಲಿ ನೀರು ಸಂಗ್ರಹವಿದ್ದರೂ ವಾರಕ್ಕೊಮ್ಮೆ ಇಲ್ಲಾ 10 ದಿನಗಳಿಗೊಮ್ಮೆ ಮನೆ, ಮನೆಗೆ ನೀರು ಬಿಡುವುದು ಮಾತ್ರ ತಪ್ಪಿಲ್ಲ. ‘ಬೇಸಿಗೆಯಲ್ಲಿ 3 ದಿನಗಳಿಗೊಮ್ಮೆ ನೀರು ಬಿಡುವ ವ್ಯವಸ್ಥೆ ಮಾಡಲಾಗುವುದು’ ಎಂದು ಶಾಸಕ ಮನಗೂಳಿ ಸಾಕಷ್ಟು ಬಾರಿ ಹೇಳಿದ್ದರೂ ಬದಲಾವಣೆ ಮಾತ್ರ ಆಗಿಲ್ಲ.

‘ಬೇಸಿಗೆಯಲ್ಲೂ ಕೆರೆಯಲ್ಲಿ ಸಾಕಷ್ಟು ಪ್ರಮಾಣದಲ್ಲಿ ನೀರು ಸಂಗ್ರಹಣೆ ಇರುತ್ತದೆ. ಸದ್ಯ ಈ ಕೆರೆಯಲ್ಲಿ 17 ಅಡಿ ನೀರಿನ ಸಂಗ್ರಹಣೆ ಇದೆ’ ಎಂದು ಕೆಬಿಜೆಎನ್ಎಲ್ ಎಇಇ ವಿಜಯಕುಮಾರ ‘ಪ್ರಜಾವಾಣಿ’ ಗೆ ತಿಳಿಸಿದರು.

Quote - ಬಳಗಾನೂರ ಕೆರೆಯಿಂದ 50 ಹಳ್ಳಿಗಳಿಗೆ ಸಿಂದಗಿ ಪಟ್ಟಣಕ್ಕೆ ಕುಡಿಯುವ ನೀರು ಪೂರೈಕೆ ಆಗುತ್ತದೆ. ಹೀಗಾಗಿ ಅಫಜಲಪುರಕ್ಕೆ ಈ ಕೆರೆಯಿಂದ ನೀರು ಹರಿಸಲಾಗುತ್ತಿಲ್ಲ. ಉಮರಾಣಿ ಬ್ಯಾರೇಜ್ನಿಂದ ಅಫಜಲಪುರಕ್ಕೆ ನೀರು ಹರಿಸಲಾಗುತ್ತದೆ. -ಅಶೋಕ ಮನಗೂಳಿ ಶಾಸಕ ಸಿಂದಗಿ

Quote - ಬಳಗಾನೂರ ಕೆರೆಯಿಂದ ಅಫಜಲಪುರ ಪಟ್ಟಣಕ್ಕೆ ನೀರು ಹರಿಸುವಂತೆ ಅಲ್ಲಿನ ಶಾಸಕರು ಸರ್ಕಾರಕ್ಕೆ ಒತ್ತಾಯಿಸಿದ್ದಾರೆ. ಅಲ್ಲಿಗೆ ನೀರು ಹರಿಸಿದರೆ ಇದೇ ಕೆರೆಯ ಮೇಲೆ ಅವಲಂಬಿವಾಗಿರುವ ಸಿಂದಗಿ ಪಟ್ಟಣಕ್ಕೆ ಬೇಸಿಗೆಯಲ್ಲಿ ನೀರಿನ ತೊಂದರೆ ಎದುರಾಗಬಹುದಾಗಿದೆ. -ಅಶೋಕ ಅಲ್ಲಾಪೂರ ಅಧ್ಯಕ್ಷ ನಗರ ಸುಧಾರಣಾ ವೇದಿಕೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.