ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಳೂತಿ ಬೀಬಿ ಫಾತೀಮಾ ಜಾರತ್ ಅದ್ದೂರಿ

Last Updated 19 ಆಗಸ್ಟ್ 2022, 14:13 IST
ಅಕ್ಷರ ಗಾತ್ರ

ಕೊಲ್ಹಾರ: ತಾಲ್ಲೂಕಿನ ಬಳೂತಿ ಗ್ರಾಮದಲ್ಲಿ ಐತಿಹಾಸಿಕ ಬೀಬಿ ಫಾತೀಮಾ ಜಾರತ್ ಉತ್ಸವದ ಡೋಲಿ ಮೆರವಣಿಗೆ ಸಹಸ್ರಾರು ಜನರ ನಡುವೆ ವೈಭವದಿಂದ ನಡೆಯಿತು.

ಉತ್ಸವದಲ್ಲಿ 150ಕ್ಕೂ ಅಧಿಕ ಹೆಜ್ಜೆ ಮೇಳ ತಂಡಗಳು ಪಾಲ್ಗೊಂಡು, ವಿವಿಧ ಹಲಗೆ ಹಾಗೂ ಭಕ್ತಿಭಾವದ ರಿವಾಯತ್ ಪದಗಳಿಗೆ ಹೆಜ್ಜೆ ಹಾಕಿದವು.

ಈ ಸಂಭ್ರಮ ಕಣ್ತುಂಬಿಕೊಂಡು ಭಾವೈಕ್ಯ ದೇವಿ ಕೃಪೆಗೆ ಪಾತ್ರರಾಗಲು ವಿಜಯಪುರ ಹಾಗೂ ಬಾಗಲಕೋಟೆ ಅವಳಿ ಜಿಲ್ಲೆಗಳ ಸುತ್ತಮುತ್ತಲಿನ ತಾಲ್ಲೂಕುಗಳು ಹಾಗೂ ವಿವಿಧ ಗ್ರಾಮಗಳಿಂದ ಅಂದಾಜು 20 ಸಾವಿರಕ್ಕೂ ಅಧಿಕ ಸಂಖ್ಯೆಯಲ್ಲಿ ಭಕ್ತಸಾಗರವೇ ಹರಿದು ಬಂದಿತ್ತು.

ಕೊನೆಯ ದಿನ ನಸುಕಿನಲ್ಲಿ ಗ್ರಾಮಸ್ಥರು ದೇವಿಯನ್ನು ಎಬ್ಬಿಸಿ ಮೆರವಣಿಗೆ ಮೂಲಕ ಗ್ರಾಮದ ಲಕ್ಕವ್ವ ಹಾಗೂ ದ್ಯಾಮವ್ವ ದೇವಿಗಳಿಗೆ ದರ್ಶನ ಮಾಡಿಸಿ ತದನಂತರ‌ ಮರಳಿ ದರ್ಗಾದ ಮೂಲಸ್ಥಾನಕ್ಕೆ ತಂದು ಹಲವು ಪೂಜಾ ಕೈಂಕರ್ಯಗಳನ್ನು ಸಲ್ಲಿಸಿದರು. ಸಂಪ್ರದಾಯದಂತೆ ಮತ್ತೆ ಸಂಜೆ ಹೊತ್ತು ಗ್ರಾಮದಲ್ಲಿ ಬೀಬಿ ಫಾತೀಮಾ ದೇವಿಯ ಡೋಲಿ ಮೆರವಣಿಗೆ ಅತ್ಯಂತ ವೈಭವದಿಂದ ಜರುಗಿತು.

ಗ್ರಾಮಸ್ಥರು ಅನ್ನಪ್ರಸಾದ ಸೇವೆ ಏರ್ಪಡಿಸಿದ್ದರು. ಈ‌ ಬಾರಿಯ ಕೊನೆಯ ದಿನದ ಉತ್ಸವದಲ್ಲಿ ಬರೋಬ್ಬರಿ 35 ಕ್ವಿಂಟಲ್ ಸುರ್ಮಾ ತಯಾರಿಸಲಾಗಿತ್ತು. ಬೀಬಿ ಫಾತೀಮಾ ಡೋಲಿ ಮೆರವಣಿಗೆಯಲ್ಲಿ ಪುಷ್ಪಾರ್ಚನೆಗಾಗಿ ಗ್ರಾಮದ ಭಕ್ತರು 10 ಕ್ವಿಂಟಲ್ ಗೂ ಅಧಿಕ ತರತರಹದ ಹೂಗಳನ್ನು ದೇವಿಗೆ ಹಾರಿಸಿ ಭಕ್ತಿ ಮೆರೆದರು.

ಮೊಹರಂ ನಂತರದ ಹತ್ತು ದಿನಗಳ ಕಾಲ ಜರುಗುವ ಬಳೂತಿ ಗ್ರಾಮದ ವಿಶಿಷ್ಟ ಬೀಬಿ ಫಾತೀಮಾ ಜಾರತ್ ಉತ್ಸವದಲ್ಲಿ ಇಡೀ ಗ್ರಾಮವೇ ಭಕ್ತಿಯಿಂದ ಪಾಲ್ಗೊಂಡು ಸಂಭ್ರಮಿಸುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT