ಬಸವನಬಾಗೇವಾಡಿ: ಪೂರ್ವಧಾವೆ ಪ್ರಕರಣಗಳಲ್ಲಿ, ಟ್ರಾಫಿಕ್ ಚಲನ್, ಕಂದಾಯ ಅದಾಲತ್, ಬ್ಯಾಂಕ್ ಹಾಗೂ ಹೆಸ್ಕಾಂ ವಿಭಾಗದ ವಿದ್ಯುತ್ ಬಾಕಿ ಪಾವತಿ ಪ್ರಕರಣಗಳು ಸೇರಿದಂತೆ ಒಟ್ಟು 1,04,556 ಪ್ರಕರಣಗಳಲ್ಲಿ 23,997 ಪ್ರಕರಣಗಳು ರಾಜೀ ಸಂಧಾನದ ಮೂಲಕ ಇತ್ಯರ್ಥಗೊಂಡಿವೆ ಎಂದು ತಾಲೂಕು ಕಾನೂನು ಸೇವಾ ಸಮಿತಿ ತಿಳಿಸಿದೆ.

ಪಟ್ಟಣದ ನ್ಯಾಯಾಲಯಗಳ ಸಂಕೀರ್ಣದಲ್ಲಿ ಶನಿವಾರ ಆಯೋಜಿಸಲಾಗಿದ್ದ ರಾಷ್ಟ್ರೀಯ ಲೋಕ ಅದಾಲತ್ನಲ್ಲಿ ಅಪರಾಧ, ಎಂವಿಸಿ, ಚೆಕ್ ಬೌನ್ಸ್, ಮೆಂಟೇನೆನ್ಸ್, ಪಾಲು ವಾಟ್ನಿ ಧಾವೆಗಳು, ಎಲ್.ಎ.ಸಿ ಇಪಿ ಪ್ರಕರಣಗಳು, ಎಂ.ವಿ.ಸಿ, ಇಪಿ ಪ್ರಕರಣಗಳು ಅಪರಾಧ ದಂಡ ಪ್ರಕರಣಗಳನ್ನು ಇತ್ಯರ್ಥ ಪಡಿಸಲಾಯಿತು.

ಅದಾಲತ್ನಲ್ಲಿ ನಾಲ್ಕೂ ನ್ಯಾಯಾಲಯಗಳಿಗೆ ಸಂಬಂಧಿಸಿದಂತೆ ಒಟ್ಟು 8246 ಬಾಕಿ ಇರುವ ಪ್ರಕರಣಗಳಲ್ಲಿ 1643 ಪ್ರಕರಣಗಳನ್ನು ಕೈಗೆತ್ತಿಕೊಳ್ಳಲಾಗಿತ್ತು. ಈ ಪೈಕಿ ಒಟ್ಟು 915 ಪ್ರಕರಣಗಳನ್ನು ಇತ್ಯರ್ಥಪಡಿಸಲಾಗಿದೆ.

ಪ್ರಧಾನ ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ತಾಲ್ಲೂಕು ಕಾನೂನು ಸೇವಾ ಸಮಿತಿಯ ಅಧ್ಯಕ್ಷ ಶಶಿಧರ ಎಂ. ಗೌಡ, 1ನೇ ಹೆಚ್ಚುವರಿ ಹಿರಿಯ ಸಿವಿಲ್ ನ್ಯಾಯಾಧೀಶ ಈಶ್ವರ ಮುಸಲ್ಮಾರಿ, ಸದಸ್ಯ ಕಾರ್ಯದರ್ಶಿ ಅಮಿತ ಘಟ್ಟಿ ಹಾಗೂ 1ನೇ ಹೆಚ್ಚುವರಿ ಸಿವಿಲ್ ನ್ಯಾಯಾಧೀಶ ಈರಪ್ಪ ಢವಳೇಶ್ವರ ಪ್ರಕರಣಗಳನ್ನು ಇತ್ಯರ್ಥ ಪಡಿಸಿದರು.

ಸಂಧಾನಕಾರರಾಗಿ ಭಾರತಿ ಪಿ. ಪತ್ತಾರ, ಆಯ್.ಎ.ಪರಮಗೊಂಡ, ಸಮಿರ ಕೊರಬು, ವೈ.ಎನ್.ಲಂಕೇನ್ನವರ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.