ಬಸವನಬಾಗೇವಾಡಿ: ಪಟ್ಟಣದಲ್ಲಿರುವ ರಾಷ್ಟ್ರೀಕೃತ ಬ್ಯಾಂಕ್ಗಳ ಎಟಿಎಂಗಳಲ್ಲಿ ಕಳೆದೊಂದು ವಾರದಿಂದ ಹಣದ ಅಭಾವ ಸೃಷ್ಟಿಯಾಗಿ ಸಾರ್ವಜನಿಕರು ತೀವ್ರ ತೊಂದರೆ ಅನುಭವಿಸುವಂತಾಗಿದೆ.

ಪಟ್ಟಣದ ಪಿಎಲ್ಡಿಇ ಬ್ಯಾಂಕ್ ಕೆಳಗಿರುವ ಎಸ್.ಬಿ.ಐ ಎಟಿಎಂ ವಾರದಿಂದ ಬಂದ್ ಆಗಿ ಶೆಟರ್ ಹಾಕಲಾಗಿದೆ. ಐತಿಹಾಸಿಕ ಬಸವೇಶ್ವರ ದೇವಸ್ಥಾನ ಸಂಕೀರ್ಣದಲ್ಲಿರುವ ಎಸ್.ಬಿ.ಐ ಎಟಿಎಂನಲ್ಲಿ ಎರಡು ಡಿಪಾಸಿಟ್ ಎಟಿಎಂಗಳಿದ್ದು, ಯಾರಾದರೂ ಗ್ರಾಹಕರು ಹಣ ಡಿಪಾಸಿಟ್ ಮಾಡಿದರೆ ಮಾತ್ರ ಇತರರಿಗೆ ಹಣ ತೆಗೆಯಲು ಲಭ್ಯವಾಗುತ್ತಿದೆ. ಬಿಜಾಪುರ ರಸ್ತೆಯಲ್ಲಿನ ಮತ್ತೊಂದು ಎಸ್.ಬಿ.ಐ ಎಟಿಎಂನಲ್ಲಿ ಕಳೆದ ನಾಲ್ಕೈದು ದಿನದಿಂದ ಹಣವೇ ಇಲ್ಲ. ಇನ್ನು ತಾಲ್ಲೂಕು ಆಸ್ಪತ್ರೆ ಪಕ್ಕದಲ್ಲಿನ ಕೆನರಾ ಬ್ಯಾಂಕ್ ಎಟಿಎಂನಲ್ಲಿ ತಾಂತ್ರಿಕ ಸಮಸ್ಯೆಗಳಿಂದ ಕಳೆದೆರಡು ದಿನಗಳಿಂದ ಎಟಿಎಂ ಸೇವೆ ಸ್ಥಗಿತವಾಗಿದೆ.

ಬಸವನಬಾಗೇವಾಡಿ ದೊಡ್ಡ ಪಟ್ಟಣವಾಗಿದ್ದು, ವ್ಯಾಪಾರಸ್ಥರು, ರೈತರು, ಜನರಿಗೆ ದಿನನಿತ್ಯದ ವ್ಯವಹಾರಕ್ಕಾಗಿ ಅನುಕೂಲವಾಗಬೇಕಾದ ರಾಷ್ಟ್ರೀಕೃತ ಬ್ಯಾಂಕ್ ಗಳ ಎಟಿಎಂಗಳಲ್ಲಿ ವಾರದಿಂದ ಹಣದ ಅಭಾವವಾಗುತ್ತಿದೆ. ಒಂದೆಡೆ ಬ್ಯಾಂಕ್ ಗಳಲ್ಲಿ ಜನದಟ್ಟಣೆಗೆ ಜನರು ಹೈರಾಣಾದರೆ ಮತ್ತೊಂದೆಡೆ ಎಟಿಎಂಗಳಲ್ಲಿ ಹಣದ ಅಭಾವದಿಂದ ತೀವ್ರ ತೊಂದರೆ ಎದುರಿಸುವಂತಾಗಿದೆ. ಕೂಡಲೇ ಸಂಬಂಧಿಸಿದ ಅಧಿಕಾರಿಗಳು ಪಟ್ಟಣದ ಎಲ್ಲಾ ಎಟಿಎಂಗಳಲ್ಲಿ ಹಣ ಹಾಕಿ ಸಾರ್ವಜನಿಕರಿಗೆ ತೊಂದರೆಯಾಗದಂತೆ ನಿರಂತರವಾಗಿ ನಿಗಾವಹಿಸಬೇಕು ಎಂದು ವಿವೇಕ ಬ್ರಿಗೇಡ್ ನ ವಿನುತ್ ಕಲ್ಲೂರು ಹಾಗೂ ಡಿಎಸ್ಎಸ್ ಜಿಲ್ಲಾ ಸಂಚಾಲಕ ಅರವಿಂದ ಸಾಲವಾಡಗಿ ಆಗ್ರಹಿಸಿದ್ದಾರೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260411-26-146314623

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.