ತಾಳಿಕೋಟೆ: ‘ನಿಮಗೆ ಒಳ್ಳೆಯ ಶಿಕ್ಷಣ ನೀಡಿ ನಿಮ್ಮ ಭವಿಷ್ಯ ಉಜ್ವಲಗೊಳಿಸಲು ಹೆತ್ತವರು ಹಗಲಿರಳು ಕಷ್ಟ ಪಡುತ್ತಾರೆ, ಅವರ ನಿರೀಕ್ಷೆ ಹುಸಿಗೊಳಿಸಬೇಡಿ ಎಂದು ಮಡಿಕೇಶ್ವರ ಸರ್ಕಾರಿ ಪ್ರೌಢಶಾಲೆ ಸಹಶಿಕ್ಷಕ ಬಸವರಾಜ ಹಂಚಲಿ ಹೇಳಿದರು.

ತಾಲ್ಲೂಕಿನ ಬಿಳೇಭಾವಿ ಗ್ರಾಮದ ಭಾಗ್ಯವಂತಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶನಿವಾರ ಏರ್ಪಡಿಸಿದ್ದ ವಾರ್ಷಿಕ ಸ್ನೇಹ ಸಮ್ಮೇಳನದಲ್ಲಿ ಮಾತನಾಡಿದರು.

ಹೆತ್ತವರು ಮಕ್ಕಳನ್ನು ಹೀಯಾಳಿಸದೆ ಪ್ರೋತ್ಸಾಹಿಸುವ ಕಾರ್ಯ ಮಾಡಬೇಕು. ಮಕ್ಕಳಿಗೆ ತಂದೆ ತಾಯಿಗಳು ಮಾದರಿಯಾಗಬೇಕು. ಅವರನ್ನು ಕೇವಲ ಅಂಕಗಳಿಕೆಗಾಗಿ ಸಿದ್ಧಪಡಿಸದೆ ಒಳ್ಳೆಯ ವ್ಯಕ್ತಿಯನ್ನಾಗಿ ನಿರ್ಮಾಣ ಮಾಡಲು ಪ್ರಯತ್ನಿಸಬೇಕು. ಈ ಶಿಕ್ಷಣ ಸಂಸ್ಥೆಯಲ್ಲಿ ಶಿಕ್ಷಣದೊಂದಿಗೆ ಸಂಸ್ಕಾರಗಳನ್ನು ಕಲಿಸಿ ಕೊಡುವ ಕಾರ್ಯ ಆಗುತ್ತಿರುವುದು ಶ್ಲಾಘನೀಯ ಎಂದರು.

ಕೆಪಿಸಿಸಿ ರಾಜ್ಯ ಪ್ರಧಾನ ಕಾರ್ಯದರ್ಶಿ, ನೇತ್ರ ತಜ್ಞ ಡಾ.ಪ್ರಭುಗೌಡ ಲಿಂಗದಳ್ಳಿ, ಜಿ.ಪಂ.ಮಾಜಿ ಸದಸ್ಯ ಬಸನಗೌಡ ವಣಕಿಹಾಳ ,ಯುವ ಮುಖಂಡ ಸಂಗನಗೌಡ ಪಾಟೀಲ (ಸಾಸನೂರ) ಮಾತನಾಡಿದರು. ಸಮಾರಂಭದ ಸಾನ್ನಿಧ್ಯ ವಹಿಸಿದ್ದ ಸಾಸನೂರ ಗುರುಕುಲದ ಅಡವಿ ಶಿವಲಿಂಗ ಸ್ವಾಮೀಜಿ ಆಶೀರ್ವಚನ ನೀಡಿದರು. ಮಹಾಂತಲಿಂಗ ಶಿವಾಚಾರ್ಯರು ಸಮ್ಮುಖ ವಹಿಸಿದ್ದರು. ಮಲ್ಲಣ್ಣ ಗು.ಅಸ್ಕಿ ಅಧ್ಯಕ್ಷತೆ ಹಾಗೂ ಸಂಸ್ಥೆಯ ಅಧ್ಯಕ್ಷ ಮಲ್ಲಣ್ಣ ಚಂ.ಪರಸನಳ್ಳಿ ನೇತೃತ್ವ ವಹಿಸಿದ್ದರು.

ಜಿ.ಪಂ ಮಾಜಿ ಸದಸ್ಯ ಎಚ್.ಸಿ. ಪೋಲಿಸ ಪಾಟೀಲ ಹಾಗೂ ಡಾ.ಬಿ.ಎಂ.ಅಳ್ಳಿಕೋಟಿ ಉದ್ಘಾಟಿಸಿದರು.

ಇದೇ ಸಂದರ್ಭದಲ್ಲಿ ವಿವಿಧ ಕ್ರೀಡೆಯಲ್ಲಿ ಉತ್ತಮ ಸಾಧನೆ ತೋರಿದ ಹಾಗೂ ನವೋದಯ, ಸೈನಿಕ ಶಾಲೆಗಳಿಗೆ ಆಯ್ಕೆಯಾದ 100 ಮಕ್ಕಳಿಗೆ ಗೌರವಿಸಲಾಯಿತು. ಸಿದ್ರಾಮಯ್ಯ ಮಠ ಸ್ವಾಗತಿಸಿದರು. ಶಿಕ್ಷಕ ಮಹೆಮೂದ ಬಾಗಲಕೋಟ ನಿರೂಪಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.