ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಜಯಪುರ: ಯುವ ಭಾರತ ಸಮಿತಿ ವತಿಯಿಂದ ಕುಡಿಯುವ ನೀರಿನ ಅರವಟಿಗೆ ಆರಂಭ

Last Updated 30 ಮಾರ್ಚ್ 2022, 12:28 IST
ಅಕ್ಷರ ಗಾತ್ರ

ವಿಜಯಪುರ: ಬಿಸಿಲಿನ ಪ್ರಖರತೆ ಹೆಚ್ಚುತ್ತಿರುವುದರಿಂದ ಸಾರ್ವಜನಿಕರಿಗೆ ಕುಡಿಯುವ ನೀರಿನ ಅನುಕೂಲಕ್ಕಾಗಿ ಯುವ ಭಾರತ ಸಮಿತಿ ವತಿಯಿಂದ ಕುಡಿಯುವ ನೀರಿನ ಅರವಟಿಗೆ ಸ್ಥಾಪಿಸಲಾಯಿತು.

ನಗರದ ಕಿರಾಣಾ ಬಜಾರ್‌ದಲ್ಲಿ ಸ್ಥಾಪಿಸಲಾಗಿರುವ ಕುಡಿಯುವ ನೀರಿನ ಅರವಟಿಗೆ ಲೋಕಾರ್ಪಣೆಗೊಳಿಸಿ ಮಾತನಾಡಿದ ಯುವ ಭಾರತ ಸಮಿತಿ ಸಂಸ್ಥಾಪಕ ಅಧ್ಯಕ್ಷ ಉಮೇಶ ಕಾರಜೋಳ, ಬಿಸಿಲಿನ ಪ್ರಖರತೆ ಈಗಾಗಲೇ ಅಧಿಕವಾಗಿದೆ, ಕುಡಿಯುವ ನೀರಿನ ದಾಹ ಅಧಿಕವಾಗುತ್ತಿದೆ, ಈ ಹಿನ್ನೆಲೆಯಲ್ಲಿ ಜನತೆಗೆ ಕುಡಿಯುವ ನೀರಿನ ದಾಹ ತಣಿಸುವ ದೃಷ್ಟಿಯಿಂದ ಈ ಅರವಟಿಗೆ ಸ್ಥಾಪಿಸಲಾಗಿದೆ ಎಂದರು.

ಜನತೆಯ ಅನುಕೂಲಕ್ಕಾಗಿ ವಿವಿಧ ಭಾಗಗಳಲ್ಲಿ ಈ ಅರವಟಿಗೆಗಳನ್ನು ಸ್ಥಾಪಿಸುವ ಉದ್ದೇಶ ಹೊಂದಲಾಗಿದೆ, ಜನ ಸೇವೆಯೇ ಯುವ ಭಾರತ ಸೇವೆಯ ಧ್ಯೇಯವಾಗಿದೆ ಎಂದರು.

ಸತೀಶ ಬಾಗಿ, ವಿರೇಶ ಗೊಬ್ಬೂರ, ಗಿರಿಶ ಕುಲಕರ್ಣಿ, ಜಕರಾಯ ಪೂಜಾರಿ, ಸಾಗರ ಗಾಯಕವಾಡ, ಸಂತೋಷ ಝಳಕಿ, ಬಸವರಾಜ ಕರಿಕಬ್ಬಿ, ಈರಯ್ಯ ಹುಣಸಗಿಮಠ, ಸೋಮಶೇಖರ ಬಿರಾದಾರ, ವಿನೋದಕುಮಾರ ಮಣೂರ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT