ವಿಜಯಪುರ: 2024-25ನೇ ಸಾಲಿನ ವಿಜಯಪುರ ಜಿಲ್ಲೆಯ ಕಿರಿಯ ಪ್ರಾಥಮಿಕ ಶಾಲೆ, ಹಿರಿಯ ಪ್ರಾಥಮಿಕ ಶಾಲೆ ಹಾಗೂ ಪ್ರೌಢಶಾಲಾ ವಿಭಾಗದಲ್ಲಿ ಜಿಲ್ಲಾ ಮಟ್ಟದ ಅತ್ಯುತ್ತಮ ಶಿಕ್ಷಕ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.
ಸೆಪ್ಟೆಂಬರ್ 5ರಂದು ನಗರದ ಕಂದಗಲ್ ಹನಂತರಾಯ ರಂಗಮಂದಿರದಲ್ಲಿ ನಡೆಯುವ ಶಿಕ್ಷಕರ ದಿನಾಚರಣೆ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ಶಾಲಾ ಶಿಕ್ಷಣ ಇಲಾಖೆಯ ಉಪ ನಿರ್ದೇಶಕರು ತಿಳಿಸಿದ್ದಾರೆ.
ಕಿರಿಯ ಪ್ರಾಥಮಿಕ ಶಾಲಾ ವಿಭಾಗ:
ಮುದ್ದೇಬಿಹಾಳ ತಾಲ್ಲೂಕಿನ ಎಲ್.ಪಿ.ಎಸ್ ಗಡಿಸೋಮನಾಳ ಎಲ್.ಟಿ-1 ಶಾಲೆಯ ಸಹ ಶಿಕ್ಷಕ ಹುಲಿಗೆಪ್ಪ ಎಸ್, ವಿಜಯಪುರ ಜಲನಗರದ ಯು.ಬಿ.ಎಲ್.ಪಿ.ಎಸ್ ನಂ.20ನೇ ಶಾಲೆಯ ಸಹ ಶಿಕ್ಷಕಿ ಯಾಸ್ಮೀನ್ ಬಾನು ಜಿ. ಇನಾಮದಾರ, ಬಸವನ ಬಾಗೇವಾಡಿ ತಾಲ್ಲೂಕಿನ ದಿಂಡವಾರದ ಎಲ್.ಪಿ.ಎಸ್ ತಿಮ್ಮಾಪೂರ ಬಡಾವಣೆ ಶಾಲೆಯ ಮುಖ್ಯ ಶಿಕ್ಷಕರಾದ ಮೈಹಿಬುಬ ನದಾಫ್, ಚಡಚಣ ತಾಲ್ಲೂಕಿನ ಎಲ್.ಪಿ.ಎಸ್ ಹೊರ್ತಿ ಎಚ್.ಕೆ ಶಾಲೆಯ ಸಹ ಶಿಕ್ಷಕ ಸತೀಶ ಕುಲಕರ್ಣಿ, ಸಿಂದಗಿ ತಾಲ್ಲೂಕಿನ ಎಲ್.ಪಿ.ಎಸ್ ಬಿಸನಾಳ ಶಾಲೆಯ ಸಹ ಶಿಕ್ಷಕರಾದ ಭಾರತಿ ಚಿಮ್ಮಲಗಿ, ಇಂಡಿ ತಾಲ್ಲೂಕಿನ ಎಲ್.ಪಿ.ಎಸ್ ಹಿರೇಬೇನೂರ ಎಲ್.ಟಿ ಶಾಲೆಯ ಸಹ ಶಿಕ್ಷಕ ಪಾಯಣ್ಣ ಬೋಗಾರ ಹಾಗೂ ವಿಜಯಪುರ ಗ್ರಾಮೀಣ ಎಲ್.ಪಿ.ಎಸ್ ಕರ್ಪೇ ವಸ್ತಿ ಟಕ್ಕಳಕಿ ಶಾಲೆಯ ಸಹ ಶಿಕ್ಷಕ ಮಾರುತಿ ಲಮಾಣಿ ಅವರು ಪ್ರಶಸ್ತಿಗೆ ಭಾಜನರಾಗಿದ್ದಾರೆ.
ಹಿರಿಯ ಪ್ರಾಥಮಿಕ ಶಾಲಾ ವಿಭಾಗ:
ಮುದ್ದೇಬಿಹಾಳ ತಾಲ್ಲೂಕಿನ ಎಚ್.ಪಿ.ಎಸ್ ಸರೂರ ಶಾಲೆಯ ಸಹ ಶಿಕ್ಷಕ ಎಸ್.ಎಂ.ಕಟ್ಟಿಮಠ, ವಿಜಯಪುರ ನಗರದ ಕೆ.ಬಿ.ಎಂ.ಪಿ.ಎಸ್. ನಂ.51 ಶಾಲೆಯ ಸಹ ಶಿಕ್ಷಕ ಲೀಲಾಧರ ಆರ್. ನಾಯಕ, ಬಸವನ ಬಾಗೇವಾಡಿ ತಾಲ್ಲೂಕಿನ ಎಚ್.ಪಿ.ಎಸ್ ಇವಣಗಿ ಶಾಲೆಯ ಸಹ ಶಿಕ್ಷಕ ಎಸ್.ಸಿದ್ದಪ್ಪ (ಅವಜಿ), ಚಡಚಣ ತಾಲ್ಲೂಕಿನ ಎಂ.ಪಿ.ಎಸ್ ಅರ್ಜನಾಳ ಶಾಲೆಯ ಸಹ ಶಿಕ್ಷಕ ರಮೇಶ ಎಸ್. ಗೋಡಿಕಾರ, ಸಿಂದಗಿ ತಾಲ್ಲೂಕಿನ ಕೆ.ಜಿ.ಎಚ್.ಪಿ.ಎಸ್ ಮುಳಸಾವಳಗಿ ಶಾಲೆಯ ಸಹ ಶಿಕ್ಷಕ ಸುಭಾಸ ಕೆ. ಹೊಸಮನಿ, ಇಂಡಿ ತಾಲ್ಲೂಕಿನ ಕೆ.ಜಿ.ಎಂ.ಪಿ.ಎಸ್ ಸಾಲೋಟಗಿ ಶಾಲೆಯ ಸಹ ಶಿಕ್ಷಕ ಸೋಮನಾಥ ಎಸ್. ನಾವಿ ಹಾಗೂ ವಿಜಯಪುರ ಗ್ರಾಮೀಣ ಎಚ್.ಪಿ.ಎಸ್ ಬಬಲೇಶ್ವರ ಬಡಾವಣೆ ಶಾಲೆಯ ಸಹ ಶಿಕ್ಷಕ ಪಿ.ಎಸ್.ಇಜೇರಿ ಆಯ್ಕೆಯಾಗಿದ್ದಾರೆ.
ಪ್ರೌಢ ಶಾಲಾ ವಿಭಾಗ:
ಮುದ್ದೇಬಿಹಾಳ ತಾಲ್ಲೂಕಿನ ಬ.ಸಾಲವಾಡಗಿಯ ಸರ್ಕಾರಿ ಪ್ರೌಢ ಶಾಲೆ ಸಹ ಶಿಕ್ಷಕ ಈರಪ್ಪ ಎಂ.ಚಿಮ್ಮಲಗಿ, ವಿಜಯಪುರ ನಗರದ ಸರ್ಕಾರಿ ಉರ್ದು ಪ್ರೌಢ ಶಾಲೆಯ ಸಹ ಶಿಕ್ಷಕಿ ಅನಸೂಯಾ ಎನ್. ಬನ್ನೂರ, ಬಸವನ ಬಾಗೇವಾಡಿ ತಾಲ್ಲೂಕಿನ ಆದರ್ಶ ವಿದ್ಯಾಲಯದ ಹುಣಶ್ಯಾಳ ಪ್ರೌಢಶಾಲೆಯ ಮುಖ್ಯ ಶಿಕ್ಷಕ ಸುಭಾಸ ಹರಿಜನ, ಚಡಚಣ ತಾಲ್ಲೂಕಿನ ಝಳಕಿಯ ಸರ್ಕಾರಿ ಪ್ರೌಢ ಶಾಲೆಯ ಸಹ ಶಿಕ್ಷಕ ಪ್ರಕಾಶ ಎಸ್. ನಂದರಗಿ, ಸಿಂದಗಿ ತಾಲ್ಲೂಕಿನ ಕೆರೂಟಗಿಯ ಪಿ.ಎಂ.ಶ್ರೀ ಪ್ರೌಢ ಶಾಲೆಯ ಸಹ ಶಿಕ್ಷಕ ಸಂತೋಷಕುಮಾರ ಗುಮಶೆಟ್ಟಿ ಹಾಗೂ ವಿಜಯಪುರ ಗ್ರಾಮೀಣ ತಿಡಗುಂದಿಯ ಬಂಜಾರ ವಿ.ವ ಸಂಘದ ಪ್ರೌಢ ಶಾಲೆಯ ಸಹ ಶಿಕ್ಷಕ ರಾಜಕುಮಾರ ಚವ್ಹಾಣ ಅವರು ಸೇರಿದಂತೆ ಕಿರಿಯ / ಹಿರಿಯ ಪ್ರಾಥಮಿಕ ಹಾಗೂ ಪ್ರೌಢಶಾಲಾ ವಿಭಾಗದಿಂದ ಒಟ್ಟು 21 ಜನ ಶಿಕ್ಷಕರನ್ನು ಆಯ್ಕೆ ಮಾಡಲಾಗಿದೆ ಎಂದು ಅವರು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.