ಸೋಮವಾರ, 9 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ತಾಳಿಕೋಟೆ: ಭೋಗೇಶ್ವರ ಜಾತ್ರಾ ಮಹೋತ್ಸವ ಸಂಭ್ರಮ

Published 3 ಸೆಪ್ಟೆಂಬರ್ 2024, 15:40 IST
Last Updated 3 ಸೆಪ್ಟೆಂಬರ್ 2024, 15:40 IST
ಅಕ್ಷರ ಗಾತ್ರ

ತಾಳಿಕೋಟೆ: ತಾಲ್ಲೂಕಿನ ಹಿರೂರ ಗ್ರಾಮದಲ್ಲಿ ಭೋಗೇಶ್ವರ ಜಾತ್ರಾ ಮಹೋತ್ಸವ ಪ್ರಯುಕ್ತ ರಥೋತ್ಸವ ಜರುಗಿತು.

ಬೆಳಿಗ್ಗೆ ಭೋಗೇಶ್ವರ ಕರ್ತೃ ಗದ್ದುಗೆಗೆ ದೇವಸ್ಥಾನದ ಅರ್ಚಕ ಜಗನ್ನಾಥ ಜೋಶಿ ಹಾಗೂ ವೆಂಕಟೇಶ ಗುಂಡಾಚಾರ್ಯ ಜೋಶಿ ಅವರಿಂದ ರುದ್ರಾಭಿಷೇಕ ನಡೆಯಿತು.

ಹಾಲಭಾವಿಯಿಂದ ಭೋಗೇಶ್ವರ ದೇವಸ್ಥಾನದವರೆಗೆ ಗಂಗಸ್ಥಳ ಮೆರವಣಿಗೆಯು ಗ್ರಾಮದ ಪ್ರಮುಖ ಬೀದಿಗಳಲ್ಲಿ 151 ಕುಂಭಕಳಸ ಸಹಿತ ವಾದ್ಯ ವೈಭವದೊಂದಿಗೆ ನೆರವೇರಿತು.

ತಾಳಿಕೋಟೆಯ ಖಾಸ್ಗತೇಶ್ವರ ಮಠದ ಪೀಠಾಧಿಪತಿ ಬಾಲಶಿವಯೋಗಿ ಸಿದ್ಧಲಿಂಗದೇವರು ಪಲ್ಲಕ್ಕಿ ಉತ್ಸವಕ್ಕೆ ಚಾಲನೆ ನೀಡಿದರು. ಸಂಜೆ ನಡೆದ ಮಹಾರಥೋತ್ಸವಕ್ಕೆ ಅನ್ನದಾನೇಶ್ವರ ಸಂಸ್ಥಾನ ಹಿರೇಮಠದ ಪಟ್ಟಾಧ್ಯಕ್ಷ ಗುರುಶಾಂತವೀರ ಶಿವಾಚಾರ್ಯರು ಚಾಲನೆ ನೀಡಿದರು.

ಗ್ರಾಮದ ಭೋಗೇಶ್ವರ ಭಜನಾ ಮಂಡಳಿ ಹಾಗೂ ಕಲಬುರಗಿ ಜಿಲ್ಲೆ ಯಡ್ರಾಮಿ ತಾಲ್ಲೂಕಿನ ಅಲ್ಲಾಪುರ ಗ್ರಾಮದ ಶ್ರೀದೇವಿ ಭಜನಾ ಮಂಡಳಿ ವತಿಯಿಂದ ಭಜನಾ ಕಾರ್ಯಕ್ರಮ ಜರುಗಿದವು.

ಜಾತ್ರಾ ಉತ್ಸವದಲ್ಲಿ ಗ್ರಾಮದ ಭಕ್ತಾದಿಗಳು ಸೇರಿದಂತೆ ತಮದಡ್ಡಿ, ಚೋಕಾವಿ, ತಮದಡ್ಡಿ ತಾಂಡಾ ಹಾಗೂ ಸುತ್ತಮುತ್ತಲಿನ ಗ್ರಾಮಗಳ ಭಕ್ತರು ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT