ವಿಜಯಪುರ: ಮೇ ಸಾಹಿತ್ಯ ಮೇಳ ವಿಜಯಪುರ ಬಳಗದಿಂದ ಏಪ್ರಿಲ್ 10 ರಿಂದ 14ರ ವರೆಗೆ ನಗರದ ದರ್ಬಾರ್ ಹೈಸ್ಕೂಲ್ ಮೈದಾನದಲ್ಲಿ ಬುದ್ಧ, ಬಸವ, ಬಾಬಾ ಸಾಹೇಬ ಅಂಬೇಡ್ಕರ್ ಪುಸ್ತಕ ಮೇಳವನ್ನು ಆಯೋಜಿಸಲಾಗುವುದು ಎಂದು ಪ್ರಗತಿಪರ ಚಿಂತಕ ಬಸವರಾಜ ಸೂಳಿಬಾವಿ ತಿಳಿಸಿದರು.

ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು, ವಿಜಯಪುರದಲ್ಲಿ ಪ್ರಥಮ ಬಾರಿಗೆ ನಿರ್ದಿಷ್ಟ ತಾತ್ವಿಕ ವಿಚಾರದ ನೆಲೆಯೊಳಗೆ ಆಯೋಜಿಸಲಾಗುತ್ತಿರುವ ಪುಸ್ತಕ ಮೇಳದಲ್ಲಿ ಕೇವಲ 50 ಮಳಿಗೆಗಳಿಗೆ ಮಾತ್ರ ಅವಕಾಶ ಇರಲಿದೆ ಎಂದರು.

ಸಮಾಜ ವಿರೋಧಿ ಬರಹಗಳ ಪುಸ್ತಕ, ಸಮಾಜದೊಳಗೆ ದ್ವೇಷ ಹುಟ್ಟಿಸುವಂತ ಪುಸ್ತಕ, ಸಮಾಜ ವಿಭಜಿಸುವ ಪುಸ್ತಕಗಳಿಗೆ, ಕೋಮುದ್ವೇಷಕ್ಕೆ ಕಾರಣವಾಗುವಂತ ಪುಸ್ತಕಗಳ ಪ್ರಕಾಶಕರಿಗೆ ಮೇಳದಲ್ಲಿ ಭಾಗವಹಿಸಲು ಅವಕಾಶ ನೀಡುವುದಿಲ್ಲ ಎಂದರು.

ಪುಸ್ತಕ ಮೇಳವು ಸಾಂಸ್ಕೃತಿಕ ಸಮಾವೇಶದಂತೆ ಇರಲಿದೆ. ಐದು ದಿನಗಳ ಲೇಖಕರ ಮತ್ತು ಓದುಗರ ಮಹಾಮೇಳ ಏರ್ಪಡಲಿದೆ. ಲೇಖಕರ ಜೊತೆ ಸಂವಾದ, ವಿದ್ಯಾರ್ಥಿ– ಯುವಜನರ ಚಿಂತನೆ, ಸಾಂಸ್ಕೃತಿಕ ಕಾರ್ಯಕ್ರಮ ಇಲಿದೆ. ಕನಿಷ್ಠ ಒಂದು ಲಕ್ಷ ಯುವ ಜನರು ಈ ಮೇಳದಲ್ಲಿ ಪಾಲ್ಗೊಳ್ಳುವಂತೆ ಆಯೋಜನೆ ಮಾಡಲಾಗುವುದು ಎಂದರು.

ಏ.10 ರಂದು ಪುಸ್ತಕ ಮೇಳದ ಉದ್ಘಾಟನೆ ಅಂಗವಾಗಿ ಡಾ.ಬಿ.ಆರ್.ಅಂಬೇಡ್ಕರ್ ವೃತ್ತದಿಂದ ಪುಸ್ತಕ ಮೇಳ ನಡೆಯುವ ಸ್ಥಳದವರೆಗೆ ಪುಸ್ತಕಗಳ ಜೊತೆ ಲೇಖಕರ ಮೆರವಣಿಗೆ ನಡೆಯಲಿದೆ ಎಂದರು.

ಏ.11ರಂದು ಮಹಾತ್ಮ ಜ್ಯೋತಿ ಬಾ ಫುಲೆ ಜನ್ಮದಿನದ ಅಂಗವಾಗಿ ನಗರದ ಸಾವಿತ್ರಿಬಾಯಿ ಪುಲೆ ಮಾರ್ಗದಿಂದ ಪುಸ್ತಕ ಮೇಳದ ಸ್ಥಳದ ವರೆಗೆ ಶಿಕ್ಷಕ ದಂಪತಿಗಳ ಮೆರವಣಿಗೆ ಇರಲಿದೆ ಎಂದು ತಿಳಿಸಿದರು.

ಏ.12ರಂದು ಬಸವಾದಿ ಶರಣರ ವಚನಗಳ ಕಟ್ಟುಗಳೊಂದಿಗೆ ಬಸವೇಶ್ವರ ವೃತ್ತದಿಂದ ಪುಸ್ತಕ ಮೇಳದ ಸ್ಥಳದ ವರೆಗೆ ಬಸವಾನುಯಾಯಿಗಳ ಮೆರವಣಿಗೆ ನಡೆಯಲಿದೆ ಎಂದು ಹೇಳಿದರು.

ಏ.13ರಂದು ಅಸ್ಪೃಶ್ಯರ ಶಿಕ್ಷಣಕ್ಕಾಗಿ ಶ್ರಮಿಸಿದ ಕಾಕಾ ಕಾರ್ಖಾನೀಸ್ ಸ್ಮರಣಾ ಕಾರ್ಯಕ್ರಮ ನಡೆಯಲಿದ್ದು, ಅವರ ಮನೆಯಿಂದ ಪುಸ್ತಕ ಮೇಳದ ಸ್ಥಳದ ವರೆಗೆ ಮೆರವಣಿಗೆ ನಡೆಯಲಿದೆ ಎಂದರು.

ಏ.14ರಂದು ಡಾ.ಬಿ.ಆರ್.ಅಂಬೇಡ್ಕರ್ ಜನ್ಮ ದಿನದ ಅಂಗವಾಗಿ ಅಂಬೇಡ್ಕರ್ ವೃತ್ತದಿಂದ ದರ್ಬಾರ್ ಮೈದಾನದ ವರೆಗೆ ಸಂವಿಧಾನ ಪೀಠಿಕೆ ಕಂಠಪಾಠ ಮಾಡಿದ ವಿದ್ಯಾರ್ಥಿ ಮತ್ತು ಶಿಕ್ಷಕರಿಂದ ಮೆರವಣಿಗೆ ಇರಲಿದೆ ಎಂದು ತಿಳಿಸಿದರು.

ಪ್ರತಿ ದಿನ ಸಂಜೆ 4ರಿಂದ ರಾತ್ರಿ 9ರ ವರೆಗೆ ಕವಿಗೋಷ್ಠಿ, ವಿದ್ಯಾರ್ಥಿಗಳಿಂದ ಪುಸ್ತಕ ಕುರಿತು ಮಾತು, ಲೇಖಕರಿಂದ ಸಂವಾದ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ ಎಂದರು.

ರಿಯಾಯಿತಿ ದರದಲ್ಲಿ ಮಾರಾಟ

ಪುಸ್ತಕ ಮೇಳದ ಸಂಘಟಕರಾದ ಅನಿಲ ಹೊಸಮನಿ ಮಾತನಾಡಿ, ಪುಸ್ತಕ ಮೇಳದಲ್ಲಿ ಪಾಲ್ಗೊಳ್ಳುವ ಪ್ರಕಾಶಕರಿಂದ ಅಲ್ಪ ಮೊತ್ತದ ಶುಲ್ಕ ಸಂಗ್ರಹಿಸಲಾಗುವುದು, ಪ್ರಕಾಶಕರಿಗೆ ಊಟ, ವಸತಿ ವ್ಯವಸ್ಥೆ ಕಲ್ಪಿಸಲಾಗುವುದು, ರಿಯಾಯಿತಿ ದರದಲ್ಲಿ ಪುಸ್ತಕಗಳು ಮಾರಾಟವಾಗಲಿದ್ದು, ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಮೇಳಕ್ಕೆ ಭೇಟಿ ನೀಡಿ, ಪುಸ್ತಕ ಖರೀದಿ ಮಾಡಬೇಕು ಎಂದು ಮನವಿ ಮಾಡಿದರು.

ಪುಸ್ತಕ ಮೇಳದ ಸಂಘಟಕರಾದ ಚೆನ್ನು ಕಟ್ಟಿಮನಿ, ಫಯಾಜ್ ಕಲಾದಗಿ, ಭೋಗೇಶ ಸೋಲಾಪುರ, ಸಂಜೀವ ಕಂಬಾಗಿ, ಸುಖದೇವ ಕಟ್ಟಿಮನಿ, ಶಿವಪುತ್ರ ಅಜಮಾನಿ, ಯಮನಪ್ಪ ಗುಣಕಿ, ಪ್ರಭುಗೌಡ ಪಾಟೀಲ, ಸಂಗೀತಾ ಪೂಜಾರಿ, ಮಹಾದೇವ ಬನಸೋಡೆ ಪತ್ರಿಕಾಗೋಷ್ಠಿಯಲ್ಲಿ ಇದ್ದರು.

ಜೀವಪರವಾದ ಮನುಷ್ಯ ಪರವಾದ ಸೌಹಾರ್ದ ಮೂಡಿಸುವ ಪ್ರಗತಿಪರವಾದ ಪುಸ್ತಕಗಳ ಪ್ರಕಾಶಕರಿಗೆ ಮಾತ್ರ ‘ಬಿಜಾಪುರ ಬುದ್ಧ ಬಸವ ಅಂಬೇಡ್ಕರ್ ಪುಸ್ತಕ ಮೇಳ’ಕ್ಕೆ ಆಹ್ವಾನ ನೀಡಲಾಗುವುದು
–ಬಸವರಾಜ ಸೂಳಿಬಾವಿ, ಪ್ರಗತಿಪರ ಚಿಂತಕ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.