ವಿಜಯಪುರ: ಜೋಡೆತ್ತಿನ ಕೃಷಿಗೆ ಪ್ರಾಧಾನ್ಯ ನೀಡುವ ಉದ್ದೇಶದಿಂದ ಅಭಿಯಾನ ನಡೆಸುತ್ತಿರುವ ನಂದಿ ಸೇನೆ ಇದೀಗ ವಿಶಿಷ್ಟ ರಥಯಾತ್ರೆ ಆಯೋಜಿಸಲು ಮುಂದಾಗಿದೆ. ಚಿಕ್ಕೋಡಿ ತಾಲ್ಲೂಕಿನ ಸುಕ್ಷೇತ್ರ ಯಡೂರು ಗ್ರಾಮದಿಂದ ಪವಿತ್ರ ಶ್ರೀಶೈಲಂವರೆಗೆ ಮಾರ್ಚ್ 5ರಿಂದ 11 ಸಾವಿರ ಜೋಡೆತ್ತಿನ ಬಂಡಿಗಳ ಸಮ್ಮುಖದಲ್ಲಿ ರಥಯಾತ್ರೆ ಆರಂಭವಾಗಲಿದೆ. ಬಸವ ತತ್ವದ ಮೂಲಬೇರಾಗಿರುವ ಜೋಡೆತ್ತಿನ ಕೃಷಿಯ ಮಹತ್ವವನ್ನು ವಿವರಿಸುವ ಈ ಕಾರ್ಯಕ್ರಮಕ್ಕೆ ಉಪ ರಾಷ್ಟ್ರಪತಿ ಸಿ.ಪಿ. ರಾಧಾಕೃಷ್ಣನ್ ಚಾಲನೆ ನೀಡಲಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಈ ಕುರಿತು ಮಾಹಿತಿ ನೀಡಿದ ನಿವೃತ್ತ ಕೃಷಿ ಅಧಿಕಾರಿ ಎಸ್.ಜಿ. ನಾಡಗೌಡ, ‘ರಥಯಾತ್ರೆ ಸಾಗುವ ಮಾರ್ಗದಲ್ಲಿ 3ರಿಂದ 11 ಕಿ.ಮೀ. ವರೆಗೆ 11 ಸಾವಿರ ಜೋಡೆತ್ತಿನ ಬಂಡಿಗಳು ರಥದೊಂದಿಗೆ ಸಾಗಲಿವೆ’ ಎಂದು ತಿಳಿಸಿದರು.

‘ಯಡೂರು, ಕಾಗವಾಡ, ಅಥಣಿ, ಹೊನವಾಡ, ಮನಗೂಳಿ, ದೇವದುರ್ಗ ಸೇರಿದಂತೆ ವಿವಿಧ ಮಾರ್ಗಗಳ ಮೂಲಕ ರಥಯಾತ್ರೆ ಶ್ರೀಶೈಲಂ ತಲುಪಲಿದೆ. ಮಾರ್ಚ್ 8ರಂದು ವಿಜಯಪುರ ಪ್ರವೇಶಿಸುವ ರಥಯಾತ್ರೆ ಸಂದರ್ಭದಲ್ಲಿ ವಿವಿಧ ಅರ್ಥಪೂರ್ಣ ಕಾರ್ಯಕ್ರಮ ಹಮ್ಮಿಕೊಳ್ಳಲಾಗುವುದು’ ಎಂದರು.

ನಂದಿ ಕೂಗು ಅಭಿಯಾನದ ಸ್ವಯಂಸೇವಕ ಬಸವರಾಜ ಬಿರಾದಾರ ಮಾತನಾಡಿ, ‘ಯಾಂತ್ರೀಕೃತ ಕೃಷಿಗೆ ಬದಲಾಗಿ ಜೋಡೆತ್ತಿನ ಕೃಷಿ ವ್ಯವಸ್ಥೆಯನ್ನು ಮರುಸ್ಥಾಪಿಸುವುದು ಅಭಿಯಾನದ ಉದ್ದೇಶವಾಗಿದೆ. ರಾಸಾಯನಿಕ ಮತ್ತು ಯಾಂತ್ರಿಕ ಕೃಷಿಯಿಂದ ಭೂಮಿ ಹಾನಿಗೊಳಗಾಗುತ್ತಿದೆ. ಜೋಡೆತ್ತಿನ ಕೃಷಿ ಮಣ್ಣಿನ ಫಲವತ್ತತೆ ಹಾಗೂ ಮಾನವ ಆರೋಗ್ಯಕ್ಕೆ ಪೂರಕವಾಗಿದೆ’ ಎಂದರು.

‘ಜೋಡೆತ್ತಿನ ಕೃಷಿ ಬಸವ ಸಂಸ್ಕೃತಿಯ ಭಾಗವಾಗಿದ್ದು, ಸರ್ಕಾರ ಬಜೆಟ್ನಲ್ಲಿ ಜೋಡೆತ್ತಿನ ಕೃಷಿಕರಿಗೆ ಪ್ರೋತ್ಸಾಹಧನ ಘೋಷಿಸಬೇಕು’ ಎಂದು ಆಗ್ರಹಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.