ಚಡಚಣ: ಕಳೆದ ವರ್ಷ ಸೆ.16 ರಂದು ಸ್ಥಳೀಯ ಎಸ್.ಬಿ.ಐ ಬ್ಯಾಂಕ್ ದರೋಡೆ ಸಂದರ್ಭದಲ್ಲಿ ಬ್ಯಾಂಕಿನಲ್ಲಿ ಅಡವಿಟ್ಟ ಗ್ರಾಹಕರು ಬಂಗಾರವನ್ನು ಇಲ್ಲಿಯವರೆಗೂ ಮರಳಿ ನೀಡಿಲ್ಲ. ಕೂಡಲೇ ಅಡವಿಟ್ಟ ನಿವ್ವಳ ಪ್ರಮಾಣದ ಬಂಗಾರದ ಆಭರಣಗಳನ್ನು ಮರಳಿಸು ವಂತೆ ಆಗ್ರಹಿಸಿ ಬಂಗಾರ ಅಡವಿಟ್ಟ ಗ್ರಾಹಕರು ಶನಿವಾರ ದಿನವಿಡಿ ಬ್ಯಾಂಕ್ಗೆ ಬೀಗ ಜಡಿದು ಪ್ರತಿಭಟನೆ ನಡೆಸಿದರು.

ಗ್ರಾಹಕ ಆರ್.ಕೆ.ಬೈರಗೊಂಡ ಮಾತನಾಡಿ, ನಾವು ಅಡವಿಟ್ಟ 24 ಕ್ಯಾರೆಟ್ ಬಂಗಾರದಲ್ಲಿ ಪ್ರತಿ ಗ್ರಾಂಗೆ ಶೇ 20ರಷ್ಟು ಕಡಿತಗೊಳಿಸಿ, 18 ಕ್ಯಾರೆಟ್ ಬಂಗಾರ ನಮಗೆ ಒತ್ತಾಯ ಪೂರ್ವಕ ವಾಗಿ ನೀಡುತ್ತಿದ್ದಾರೆ.

ಬ್ಯಾಂಕ್ ದರೋಡೆ ನಡೆದ ನಂತರ ಗ್ರಾಹಕರ ಸಭೆಯಲ್ಲಿ ನೀವು ಅಡ ಇಟ್ಟ ಬಂಗಾರವನ್ನು ನಿವ್ವಳ ಪ್ರಮಾಣದಲ್ಲಿ ನೀಡುವುದಾಗಿ ಬ್ಯಾಂಕ್ನ ಹಿರಿಯ ಅಧಿಕಾರಿಗಳು ತಿಳಿಸಿದ್ದರು.

ಆದರೆ ಈಗ ಅವರು ಮಾತಿನಂತೆ ನಡೆದು ಕೊಳ್ಳದೇ ಗ್ರಾಹಕರಿಗೆ ಮೋಸ ಮಾಡುತ್ತಿದ್ದಾರೆ ಎಂದ ಅವರು, ನಮಗೆ ಬ್ಯಾಂಕಿನಲ್ಲಿ ಅಡವಿಟ್ಟ ಪೂರ್ಣ ಪ್ರಮಾ ಣದ ಬಂಗಾರದ ಆಭರಣಗಳನ್ನು ಕೊಡಬೇಕು. ಇಲ್ಲದಿದ್ದರೆ ಮಾರ್ಕೆಟ್ ದರದಲ್ಲಿ ನಮಗೆ ಹಣ ನೀಡಬೇಕು. ನಮ್ಮ ಬೇಡಿಕೆಗೆ ಒಪ್ಪದಿದ್ದರೆ ಬ್ಯಾಂಕ್ಗೆ ಅನಿರ್ದಿಷ್ಠಾವಧಿಯ ವರೆಗೆ ಬೀಗ ಜಡೆದು ಪ್ರತಿಭಟನೆ ನಡೆಸುವದಾಗಿ ತಿಳಿಸಿದರು.

ಬೆಳಿಗ್ಗೆಯಿಂದಲೇ ಬ್ಯಾಂಕ್ ಸಿಬ್ಬಂದಿಗೆ ಹೊರಹಾಕಿ ಶಾಖಾ ವ್ಯಾವಸ್ಥಾಪಕರೊಂದಿಗೆ ಮಾತಿನ ಚಕಮಕಿ ನಡೆಸಿದರು. ಮಧ್ಯಾಹ್ನ ಸ್ಥಳಕ್ಕಾಗಮಿಸಿದ ಪ್ರಾದೇಶಿಕ ವ್ಯವಸ್ಥಾಪಕ ವಿಕಾಸ ಭಗೊತ್ರಾ, ವಿಜಯಪುರ ಶಾಖಾ ವ್ಯವಸ್ಥಾಪಕ ಪ್ರಲ್ಹಾದ ದೇಸಾಯಿ ವೆಂಕಟೇಶ್ವರ ಅವರೊಂದಿಗೆ ನಡೆದ ಸಭೆಯಲ್ಲಿ ಯಾವುದೇ ತೀರ್ಮಾನ ಕೈಗೊಳ್ಳಲಾಗಲಿಲ್ಲ. ನಂತರ ಬ್ಯಾಂಕ್ ಅಧಿಕಾರಿಗಳು, ನಮ್ಮ ಬ್ಯಾಂಕ್ನ ಮೇಲಾಧಿಕಾರಿಗಳೊಂದಿಗೆ ಚರ್ಚಿಸಿ ಮೇ 22 ರಂದು ಇಲ್ಲಿಗೆ ಆಗಮಿಸಿ ಗ್ರಾಹಕರಿಗೆ ಸ್ಪಷ್ಟ ನಿರ್ಧಾರ ತಿಳಿಸುವದಾಗಿ ಲಿಖಿತ ಭರವಸೆ ನೀಡಿದ ನಂತರ ಸಂಜೆ ಐದು ಗಂಟೆ ಸುಮಾರಿಗೆ ಪ್ರತಿಭಟನಾಕಾರರು ಪ್ರತಿಭಟನೆ ಹಿಂದಕ್ಕೆ ಪಡೆದರು.

ಗ್ರಾಹಕರಾದ ಕಾಶಿನಾಥ ಪಾಟೀಲ, ಮಲ್ಲು ಮೇಳಮಳ, ಬಸವರಾಜ ಶರಣಗಾರ, ವಾಸೀಮ ಮುಲ್ಲಾ, ಗುರುಲಿಂಗ ದಂಧರಗಿ, ಆದಿಲ್ ಶೆಖ್, ರಾಘವೇಂದ್ರ ಕುಲಕರ್ಣಿ, ಅಮೀನ ಪಾಟೀಲ ಸೇರಿದಂತೆ 50ಕ್ಕೂ ಅದಿಕ ಗ್ರಾಹಕರು ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260503-26-574615043

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.