ವಿಜಯಪುರ: 2022ರಲ್ಲಿ ಪರಿಷ್ಕೃತವಾಗಬೇಕಾದ ಕನಿಷ್ಠ ವೇತನ ಇಲ್ಲಿಯವರೆಗೂ ಪರಿಷ್ಕರಣೆಯಾಗಿಲ್ಲ. ಕೂಡಲೇ ಕಾರ್ಮಿಕರ ವೇತನ ಪರಿಷ್ಕರಣೆ ಮಾಡುವುದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಗುತ್ತಿಗೆ ಆಧಾರಿತ ಕಾರ್ಮಿಕರು ಸಿಐಟಿಯು ಸೇರಿದಂತೆ ವಿವಿಧ ಸಂಘಟನೆಗಳ ಸಹಯೋಗದಲ್ಲಿ ಗುರುವಾರ ಬೃಹತ್ ಪ್ರತಿಭಟನೆ ನಡೆಸಿ ಹೆಚ್ಚುವರಿ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.

ಸಂಘಟನೆಯ ಜಿಲ್ಲಾ ಘಟಕದ ಅಧ್ಯಕ್ಷೆ ಕಾಶೀಬಾಯಿ ಜನಗೊಂಡ ಮಾತನಾಡಿ, ‘ರಾಜ್ಯದಲ್ಲಿ 2022ರಲ್ಲಿ ಪರಿಷ್ಕೃತವಾಗಬೇಕಾದ ಕನಿಷ್ಠ ವೇತನ ಇಲ್ಲಿಯವರೆಗೂ ಸರ್ಕಾರ ಕನಿಷ್ಠ ವೇತನ ಪರಿಷ್ಕೃತಗೊಳಿಸಲು ಮೀನ ಮೇಷ ಮಾಡುತ್ತಿರುವುದು ಖಂಡನೀಯ’ ಎಂದರು.

‘ಈ ವೇತನವು ಕಾರ್ಮಿಕರ ಶ್ರಮಕ್ಕೆ ತಕ್ಕ ಪ್ರತಿಫಲವಾಗಿದ್ದು, ಕಾರ್ಮಿಕ ಹಾಗೂ ಕಾರ್ಮಿಕರ ಕುಟುಂಬ ನಿರ್ವಹಣೆಗೆ ನೀಡಬೇಕಾದ ಜೀವನ ಯೋಗ್ಯ ವೇತನವಾಗಿದೆ. ಕಾರ್ಮಿಕರ ಶೋಷಣೆಯಾಗದಂತೆ ತಡೆಗಟ್ಟುವ ಉದ್ದೇಶದಿಂದ ಕನಿಷ್ಠ ವೇತನ ಕಾಯ್ದೆ ಅಸ್ತಿತ್ವಕ್ಕೆ ಬಂದಿದ್ದು, ಅದರಂತೆ ನಿಯಮಿತವಾಗಿ ಬೆಲೆ ಏರಿಕೆ ಹಾಗೂ ಹಣದುಬ್ಬರಕ್ಕೆ ತಕ್ಕಂತೆ 5 ವರ್ಷಕ್ಕೊಮ್ಮೆ ಪರಿಷ್ಕರಿಸಬೇಕಾಗಿದೆ’ ಎಂದರು.

ಸಂಘದ ಜಿಲ್ಲಾ ಕಾರ್ಯದರ್ಶಿ ಮಹಾದೇವಿ ಧರ್ಮಶೆಟ್ಟಿ ಮಾತನಾಡಿ, ‘ಕನಿಷ್ಠ ವೇತನ ಸಲಹಾ ಮಂಡಳಿ ಈಗಾಗಲೇ ಕನಿಷ್ಠ ವೇತನವನ್ನು ಪರಿಷ್ಕರಿಸಿ ಕೌಶಲ ರಹಿತರಿಗೆ ಕನಿಷ್ಠ ₹21 ಸಾವಿರದಿಂದ ₹35 ಸಾವಿರವರೆಗೂ ನಿಗದಿಪಡಿಸಿ ರಾಜ್ಯ ಸರ್ಕಾರಕ್ಕೆ ಪ್ರಸ್ತಾವ ಕಳಿಸಿದೆ. ಲಕ್ಷಾಂತರ ಕಾರ್ಮಿಕರು ಅತ್ಯಂತ ಸಂತೋಷಗೊಂಡಿದ್ದರು. ಬೆಲೆ ಏರಿಕೆಯಿಂದ ತತ್ತರಿಸುತ್ತಿರುವ ಕಾರ್ಮಿಕರು ತಮಗೆ ಕೊಂಚವಾದರೂ ನೆಮ್ಮದಿ ದೊರೆಯಬಹುದೆಂಬ ನಿರೀಕ್ಷೆಯಲ್ಲಿದ್ದರು. ಈ ವಿಷಯದಲ್ಲಿ ರಾಜ್ಯ ಸರ್ಕಾರ ಕಾರ್ಮಿಕರ ಪರ ಸ್ಪಷ್ಟ ಹಾಗೂ ದೃಢ ನಿಲುವು ತೆಗೆದುಕೊಳ್ಳಬೇಕು ಮತ್ತು ಅಧಿಸೂಚನೆಯು ಸರ್ಕಾರಿ ಆದೇಶವಾಗಬೇಕಿದೆ’ ಎಂದರು.

ರೇಣುಕಾ ಕೋಲ್ಹಾರ, ಗೌರಮ್ಮ, ಶಾರದಾ, ಮಹಾದೇವಿ, ಕಲ್ಯಾಣವ್ವ, ಜಯಶ್ರೀ, ಬಾಳಾಭಾಯಿ ಹೂಗಾರ, ಶಿವಮ್ಮ ಬೂದಿಹಾಳ, ಶೋಭಾ ಬಿಜ್ಜರಗಿ, ರಜನಿ ಪಾಟೀಲ ಪಾಲ್ಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.