ಗುರುವಾರ, 12 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಆಲಮಟ್ಟಿ: ಆ. 21ರಂದು ಕೃಷ್ಣಾ ನದಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಬಾಗಿನ

ಸಿದ್ಧತೆಗಳ ಪರಿಶೀಲನೆ ನಡೆಸಿದ ಜಿಲ್ಲಾಧಿಕಾರಿ ಟಿ.ಭೂಬಾಲನ್‌, ಕೆಬಿಜೆಎನ್ಎಲ್ ಎಂಡಿ ಕೆ.ಪಿ.ಮೋಹನರಾಜ್
Published 20 ಆಗಸ್ಟ್ 2024, 16:05 IST
Last Updated 20 ಆಗಸ್ಟ್ 2024, 16:05 IST
ಅಕ್ಷರ ಗಾತ್ರ

ಆಲಮಟ್ಟಿ: ಆಲಮಟ್ಟಿ ಜಲಾಶಯ ಭರ್ತಿ ಹಿನ್ನಲೆಯಲ್ಲಿ ಆ.21 ರಂದು ಇಲ್ಲಿಯ ಲಾಲ್ ಬಹಾದ್ದೂರ್ ಶಾಸ್ತ್ರಿ ಸಾಗರ ಅಣೆಕಟ್ಟು ಬಳಿ ಕೃಷ್ಣೆಯ ಜಲಧಿಗೆ ಮಧ್ಯಾಹ್ನ 1ಕ್ಕೆ ಮುಖ್ಯಮಂತ್ರಿ ಸಿದ್ಧರಾಮಯ್ಯ ಬಾಗಿನ ಅರ್ಪಿಸಲಿದ್ದಾರೆ.

ರಾಜಕೀಯ ಸ್ಥಿತ್ಯಂತರದ ಕಾರಣ ಮುಖ್ಯಮಂತ್ರಿಇದೇ ಆ.21 ರಂದು ಬರುವ ಅನಿಶ್ಚಿತತೆ ಮನೆ ಮಾಡಿತ್ತು.
ಅಂದು ಬೆಳಿಗ್ಗೆ 10ಕ್ಕೆ ಬೆಂಗಳೂರು ಎಚ್ಎಎಲ್ ವಿಮಾನ ನಿಲ್ದಾಣದಿಂದ ವಿಶೇಷ ವಿಮಾನದಲ್ಲಿ ಹೊರಡುವ ಅವರು ಕೊಪ್ಪಳ ಜಿಲ್ಲೆಯ ಗಿಣಿಗೇರಾ ಏರಸ್ಟ್ರಿಪ್‌ಗೆ ಬಂದು, ಅಲ್ಲಿಂದ ರಸ್ತೆಯ ಮೂಲಕ ಆಲಮಟ್ಟಿಗೆ 12.30 ಕ್ಕೆ ಆಗಮಿಸುವ ಅವರು ನೇರವಾಗಿ ಜಲಾಶಯಕ್ಕೆ ತೆರಳಿ ಗಂಗಾಪೂಜೆ ಸಲ್ಲಿಸಿ ಕೃಷ್ಣಾ ನದಿಗೆ ಬಾಗಿನ ಸಲ್ಲಿಸಲಿದ್ದಾರೆ ಎಂದು ಕೆಬಿಜೆಎನ್ಎಲ್ ಎಂಡಿ ಕೆ.ಪಿ.ಮೋಹನರಾಜ್ ತಿಳಿಸಿದರು.

ಪರಿಶೀಲನೆ: ಕೆಬಿಜೆಎನ್ಎಲ್ ಎಂಡಿ ಕೆ.ಪಿ.ಮೋಹನರಾಜ್ ಹಾಗೂ ಜಿಲ್ಲಾಧಿಕಾರಿ ಟಿ. ಭೂಬಾಲನ್, ಜಂಟಿಯಾಗಿ ಪರಿಶೀಲನೆ ನಡೆಸಿ, ಭದ್ರತೆ, ಬಾಗಿನ ಅರ್ಪಿಸುವ ಸ್ಥಳಕ್ಕೆ ಭೇಟಿ ನೀಡಿ, ಪೂಜಾ ಸ್ಥಳ, ಹೂವಿನ ಅಲಂಕಾರ, ಶಾಮಿಯಾನ ವ್ಯವಸ್ಥೆ ಸೇರಿದಂತೆ ಅಗತ್ಯ ಸಿದ್ಧತೆಗಳನ್ನು ಪರಿಶೀಲಿಸಿದರು. ಪೊಲೀಸ್ ಅಧಿಕಾರಿಗಳಿಗೆ ವಿವಿಧ ಸೂಚನೆಗಳನ್ನು ನೀಡಿದರು.

ಸಾರ್ವಜನಿಕರ ಅಹವಾಲು ಸ್ವೀಕಾರ: ರಸ್ತೆ ಮೂಲಕ ಆಗಮಿಸುವ ಸಿಎಂ, ಬಾಗಿನದ ನಂತರ ಇಲ್ಲಿಯ ಪ್ರವಾಸಿ ಮಂದಿರದ ಬಳಿ ಸಾರ್ವಜನಿಕರಿಂದ, ರೈತರಿಂದ ಅಹವಾಲು ಸ್ವೀಕರಿಸುವರು. ಪ್ರತಿ ಸಂಘಟನೆಯಿಂದ ನಾಲ್ವರು ಸದಸ್ಯರಿಗೆ ಮಾತ್ರ ಅವಕಾಶ ನೀಡಲಾಗುವುದು. ಮುಖ್ಯಮಂತ್ರಿಗಳನ್ನು ನೋಡಲು ಬರುವವರಿಗೂ ವ್ಯವಸ್ಥೆ ಮಾಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದರು.

ನಂತರ ಸುದ್ದಿಗೋಷ್ಠಿ ನಡೆಸಿ, ಕೆಲ ಕಾಲ ಪ್ರವಾಸಿ ಮಂದಿರದಲ್ಲಿಯೇ ಇದ್ದು, ಇಲ್ಲಿಂದ ಮಧ್ಯಾಹ್ನ 3ಕ್ಕೆ ಬೆಂಗಳೂರಿಗೆ ಮರುಪ್ರಯಾಣ ಬೆಳೆಸಲು ಗಿಣಿಗೇರಾ ಏರಸ್ಟಿಪ್‌ಗೆ ತೆರಳಲಿದ್ದಾರೆ ಎಂದರು. ನಾನಾ ಕಡೆ ಹೂವಿನ ಅಲಂಕಾರ ಮಾಡಲು ಸೂಚಿಸಿದರು.

ಬಿಟಿಡಿಎ ಮುಖ್ಯ ಎಂಜಿನಿಯರ್ ಡಿ. ಬಸವರಾಜು, ಕೆಬಿಜೆಎನ್ಎಲ್ ಅಧಿಕಾರಿಗಳಾದ ವಿ.ಆರ್. ಹಿರೇಗೌಡರ, ಟಿ.ವಿ.ದೊಡಮನಿ, ರವಿ ಚಂದ್ರಗಿರಿಯವರ, ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶಂಕರ ಮಾರಿಹಾಳ, ಡಿವೈಎಸ್ಪಿ ಬಲ್ಲಪ್ಪ ನಂದಗಾವಿ, ಉಪವಿಭಾಗಾಧಿಕಾರಿ ಗುರುನಾಥ ದಡ್ಡೆ, ತಹಶೀಲ್ದಾರ್ ಎ.ಡಿ. ಅಮರವಾಡಗಿ ಮತ್ತೀತರರು ಇದ್ದರು.

ಉದ್ಯಾನಗಳು ಬಂದ್: ಸಿಎಂ ಆಗಮನದ ಹಿನ್ನಲೆಯಲ್ಲಿ ಆಲಮಟ್ಟಿ ಪೆಟ್ರೋಲ್ ಬಳಿಯಿಂದ ಆಲಮಟ್ಟಿ ಪ್ರವೇಶಿಸುವ ರಸ್ತೆಯನ್ನು ಸಾರ್ವಜನಿಕರಿಗೆ ಬಂದ್ ಮಾಡಲಾಗುತ್ತದೆ. ಸಿ.ಎಂ. ಹೋಗುವವರೆಗೂ ಆಲಮಟ್ಟಿಯ ಎಲ್ಲಾ ಉದ್ಯಾನಗಳನ್ನು ಬಂದ್ ಮಾಡಲಾಗುತ್ತದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದರು.

ಬೆಳಗಾವಿ ಐಜಿಪಿ ನೇತೃತ್ವದಲ್ಲಿ ಇಬ್ಬರು ಎಸ್.ಪಿ, 3 ಜನ ಹೆಚ್ಚುವರಿ ಎಸ್.ಪಿ, 4 ಜನ ಡಿವೈಎಸ್ಪಿ, 9 ಜನ ಸಿಪಿಐ, 27 ಜನ ಪಿಎಸ್ಐ, 25 ಜನ ಎಎಸ್ಐ, 74 ಜನ ಹೆಡ್ ಕಾನ್ಸ್ ಟೇಬಲ್, 202 ಕಾನ್ಸ್ ಟೇಬಲ್, 30 ಜನ ಮಹಿಳಾ ಪೊಲೀಸರು, 3 ಡಿಎಆರ್ ವಾಹನವನ್ನು ಬಂದೋಬಸ್ತ್‌ಗೆ ನಿಯೋಜಿಸಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ಮಾಹಿತಿ ನೀಡಿದರು.

ಕೃಷ್ಣಾ ನದಿಗೆ ಬಾಗಿನ ಅರ್ಪಿಸಲು ಬುಧವಾರ ಆಲಮಟ್ಟಿಗೆ ಆಗಮಿಸುವ ಮುಖ್ಯಮಂತ್ರಿಗಳ ಕಾರ್ಯಕ್ರಮವನ್ನು ಕೆಬಿಜೆಎನ್ಎಲ್ ಎಂಡಿ ಕೆ.ಪಿ.ಮೋಹನರಾಜ್ ಹಾಗೂ ಜಿಲ್ಲಾಧಿಕಾರಿ ಟಿ.ಭೂಬಾಲನ್ ಸೇರಿದಂತೆ ವಿವಿಧ ಹಿರಿಯ ಅಧಿಕಾರಿಗಳು ಪರಿಶೀಲನೆ ನಡೆಸಿದರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT