ಸೋಲಾಪುರ: ಗ್ಯಾಸ್ ಸಿಲಿಂಡರ್ ದರ ಏರಿಕೆ ವಿರೋಧಿಸಿ ಸೋಲಾಪುರ ನಗರ ಕಾಂಗ್ರೆಸ್ ಸಮಿತಿಯ ವತಿಯಿಂದ ಮಂಗಳವಾರ ಸೋಲಾಪುರ ಲೋಕಸಭಾ ಕ್ಷೇತ್ರದ ಸಂಸದೆಯಾದ ಪ್ರಣಿತಿ ಶಿಂಧೆ ಮಾರ್ಗದರ್ಶನದಲ್ಲಿ ವಿಭಿನ್ನ ರೀತಿಯ ಪ್ರತಿಭಟನೆ ನಡೆಸಿತು.

ಕುಂಬಾರ ವೇಸ್ ಚರಂಡಿ ಸಮೀಪ ನಗರ ಕಾಂಗ್ರೆಸ್ ಅಧ್ಯಕ್ಷ ಚೇತನಭಾವು ನರೋಟೆ ಅವರ ನೇತೃತ್ವದಲ್ಲಿ ಕಾರ್ಯಕರ್ತರು ಪ್ರಧಾನಮಂತ್ರಿ ನರೇಂದ್ರ ಮೋದಿ ಪ್ರಸ್ತಾಪಿಸಿದ್ದ ‘ಚರಂಡಿಯಿಂದ ಗ್ಯಾಸ್ ಉತ್ಪಾದನೆ’ ಪ್ರಸ್ತಾಪನೆಯನ್ನು ಉಲ್ಲೇಖಿಸಿ ಪ್ರತಿಭಟನೆ ನಡೆಸಿದರು.

ಕಾಂಗ್ರೆಸ್ ನಗರ ಘಟಕದ ಅಧ್ಯಕ್ಷ ಚೇತನ ನರೋಟೆ ಮಾತನಾಡಿ, ಮೋದಿ ಸರ್ಕಾರದ ತಪ್ಪು ಮತ್ತು ಜನವಿರೋಧಿ ನೀತಿಗಳಿಂದ ದೇಶದಲ್ಲಿ ಗ್ಯಾಸ್ ಸಿಲಿಂಡರ್ ಕೊರತೆ ಉಂಟಾಗಿದ್ದು, ನಿರಂತರ ದರ ಏರಿಕೆಯಿಂದ ಸಾಮಾನ್ಯ ಜನರ ಆರ್ಥಿಕ ಸ್ಥಿತಿ ಹದಗೆಟ್ಟಿದೆ ಎಂದು ಟೀಕಿಸಿದರು.

ನಗರ ಕಾಂಗ್ರೆಸ್ ಇ-ಬ್ಲಾಕ್ ಅಧ್ಯಕ್ಷ ಉದಯಶಂಕರ ಚಾಕೋತೆ ಮಾತನಾಡಿ, ಹಬ್ಬದ ಸಮಯದಲ್ಲಿ ಗ್ಯಾಸ್ ಕೊರತೆಯಿಂದ ಮಹಿಳೆಯರು, ಹೋಟೆಲ್ ಉದ್ಯಮಿಗಳು ಮತ್ತು ಸಣ್ಣ ವ್ಯಾಪಾರಿಗಳು ಸಂಕಷ್ಟಕ್ಕೆ ಸಿಲುಕಿದ್ದಾರೆ. ಆದ್ದರಿಂದ ಗ್ಯಾಸ್ ದರವನ್ನು ತಕ್ಷಣ ಇಳಿಸಿ, ಕೊರತೆಯನ್ನು ನಿವಾರಿಸಬೇಕು ಎಂದು ಅವರು ಆಗ್ರಹಿಸಿದರು.

ಪ್ರತಿಭಟನೆ ವೇಳೆ ಚರಂಡಿಯ ಬಳಿ ಉಪಕರಣಗಳ ಸಹಾಯದಿಂದ ಗ್ಯಾಸ್ ಉತ್ಪಾದನೆ ಮಾಡುವ ಪ್ರಯತ್ನವೂ ನಡೆಸಲಾಯಿತು. ಆದರೆ ವಾಸ್ತವವಾಗಿ ಗ್ಯಾಸ್ ಉತ್ಪಾದನೆ ಸಾಧ್ಯವಾಗದ ಹಿನ್ನೆಲೆ, ಈ ಸಂಕಲ್ಪ ಕೇವಲ ಘೋಷಣೆಗಷ್ಟೇ ಸೀಮಿತ ಎಂದು ಕಾಂಗ್ರೆಸ್ ಕಾರ್ಯಕರ್ತರು ಆರೋಪಿಸಿದರು.

ಮಾಜಿ ಮೇಯರ್ ಸಂಜಯ ಹೇಮಗಡ್ಡಿ, ಪ್ರಾಂತ ಕಾರ್ಯದರ್ಶಿ ರಾಹುಲ್ ವರ್ಧಾ, ಮಹಿಳಾ ಅಧ್ಯಕ್ಷೆ ಪ್ರಮಿಲಾತಾಯಿ ತೂಪಲವಂಡೆ, ಯುವ ಘಟಕದ ಅಧ್ಯಕ್ಷ ಗಣೇಶ್ ಡೋಂಗ್ರೆ, ಮೀಡಿಯಾ ಸೆಲ್ ಅಧ್ಯಕ್ಷ ತಿರುಪತಿ ಪರಕಿಪಂಡ್ಲಾ, ಸೇವಾದಳ ಯಂಗ್ ಬ್ರಿಗೇಡ್ ಅಧ್ಯಕ್ಷ ವಿವೇಕ ಕನ್ನಾ, ಉದ್ಯಮ ಮತ್ತು ವಾಣಿಜ್ಯ ಸೆಲ್ ಅಧ್ಯಕ್ಷ ಪಶುಪತಿ ಮಾಶಾಳ, ಅಸಂಘಟಿತ ಕಾರ್ಮಿಕ ಸೆಲ್ ಅಧ್ಯಕ್ಷ ಸುಭಾಷ ವಾಘಮಾರೆ ಸೇರಿದಂತೆ ಅನೇಕ ಪದಾಧಿಕಾರಿಗಳು ಮತ್ತು ಕಾರ್ಯಕರ್ತರು ದೊಡ್ಡ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.