ಶುಕ್ರವಾರ, 20 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಆಲಮಟ್ಟಿ ವೃತ್ತಕ್ಕೆ ಕಲೆಯ ಮೆರುಗು

‘ಜೀವನ ಚಕ್ರ’ ಪರಿಕಲ್ಪನೆಯಡಿ ಅಮೂರ್ತ ಕಲಾಕೃತಿಗಳ ನಿರ್ಮಾಣ
ಚಂದ್ರಶೇಖರ ಕೋಳೇಕರ
Published : 18 ಆಗಸ್ಟ್ 2024, 4:48 IST
Last Updated : 18 ಆಗಸ್ಟ್ 2024, 4:48 IST
ಫಾಲೋ ಮಾಡಿ
Comments

ಆಲಮಟ್ಟಿ: ರಾಜ್ಯದ ಪ್ರಸಿದ್ಧ ಆಲಮಟ್ಟಿ ಜಲಾಶಯಕ್ಕೆ ಹತ್ತಿಕೊಂಡೇ ಇರುವ ವೃತ್ತಕ್ಕೆ ನಾಲ್ಕೈದು ದಿನಗಳ ಹಿಂದೆ ಅಳವಡಿಸಿದ ಎಂಟು ಕಲಾಕೃತಿಗಳು ‘ಜೀವನ ಚಕ್ರ’ವನ್ನು ನಿರೂಪಿಸುತ್ತವೆ. 

ಆ ಎಂಟು ಅಮೂರ್ತ ರೂಪದ ಕಲಾಕೃತಿಗಳು ಬದುಕಿನ ಎಂಟು ಘಟ್ಟಗಳನ್ನು ಸಾರುತ್ತವೆ. ಈ ಥೀಮ್‌ನ ಹೆಸರು ಜೀವನ ಚಕ್ರ. ಇಲ್ಲಿ ಸಾದರಹಳ್ಳಿ ಗ್ರಾನೈಟ್‌ ಕಲ್ಲುಗಳಲ್ಲಿ ಅಮೂರ್ತ ರೂಪದಲ್ಲಿ ಮಾನವ ಜೀವನದ ಪ್ರಮುಖ ಮಜಲುಗಳನ್ನು ಎಂಟು ಶಿಲಾ ಶಿಲ್ಪ ರೂಪದಲ್ಲಿ ವೃತ್ತವನ್ನು ಅಲಂಕರಿಸಲಾಗಿದೆ ಹಾಗೂ ಅವುಗಳಿಗೆ ಹೊಂದುವಂತಹ ಪ್ರಸಿದ್ಧ ಹೇಳಿಕೆಗಳನ್ನು ಬರೆಯಿಸಲಾಗುತ್ತಿದೆ.

ಜೀವನ ಚಕ್ರ – 8 ಕುಟುಂಬ
ಜೀವನ ಚಕ್ರ – 8 ಕುಟುಂಬ

ಪುರುಷ (ಪ್ರಜ್ಞೆ), ಸ್ತ್ರೀ (ಪ್ರಕೃತಿ), ಜೊತೆ ಜೊತೆಯಲ್ಲಿ, ಮಿಲನ, ಜೀವಾಂಕುರ, ತಾಯ್ತನ, ಪಿತೃತ್ವ, ಕೊನೆಯದಾಗಿ ಇಡೀ ಕುಟುಂಬ ಹೀಗೆ ಎಂಟು ಆಕೃತಿಗಳ ಅಮೂರ್ತ ರೂಪವನ್ನು ಇಲ್ಲಿ ಕಲಾಕೃತಿಗಳಲ್ಲಿ ಚಿತ್ರಿಸಲಾಗಿದೆ.

ಸುಮಾರು ನಾಲ್ಕು ಅಡಿ ಎತ್ತರ ಇರುವ ಈ ಕಲಾಕೃತಿಗಳನ್ನು ಮೈಸೂರಿನ ಇಲವಾಲದ ಡಾ. ಎ. ದೇವರಾಜು ಅವರು ರಚಿಸಿದ್ದಾರೆ. ಒಂದೊಂದು ಕಲಾಕೃತಿಗೆ 20 ರಿಂದ 25 ದಿನಗಳಲ್ಲಿ ರೂಪಿಸಿದ್ದು ವಿಶೇಷ.

ಜೀವನ ಚಕ್ರ-2 ಸ್ತ್ರೀ
ಜೀವನ ಚಕ್ರ-2 ಸ್ತ್ರೀ

ಚಿಕ್ಕಬಳ್ಳಾಪುರದ ಸದರಹಳ್ಳಿ ಗ್ರಾನೈಟ್‌ನಲ್ಲಿ ಈ ಕಲಾಕೃತಿಗಳನ್ನು ರಚಿಸಲಾಗಿದೆ. ಒಂದೊಂದು ಕಲಾಕೃತಿಗಳು ₹2.2 ಲಕ್ಷ  ವೆಚ್ಚದಲ್ಲಿ ನಿರ್ಮಿಸಲಾಗಿದೆ ಎನ್ನುತ್ತಾರೆ ಆರ್. ಎಫ್ .ಓ ಮಹೇಶ ಪಾಟೀಲ.

ಜೀವನ ಚಕ್ರ-5 ಜೀವಾಂಕುರ
ಜೀವನ ಚಕ್ರ-5 ಜೀವಾಂಕುರ

ರಾಕ್ ಉದ್ಯಾನಗಳಿಂದ ಪ್ರಸಿದ್ಧವಾಗಿದ್ದ ಆಲಮಟ್ಟಿಗೆ ಹೊಸ ಕಲಾಕೃತಿಗಳ ಬರ ಇತ್ತು. ಈಗ ಜಲಾಶಯದ ವೃತ್ತದಲ್ಲಿಯೇ ಈ ಕಲಾಕೃತಿಗಳು ರಚನೆಯಾಗಿದ್ದು, ಪ್ರವಾಸಿಗರನ್ನು ಆಕರ್ಷಿಸುತ್ತವೆ ಜತೆಗೆ ಬದುಕಿನ ಪಾಠವನ್ನು ಅರಿಯಬಹುದು.

ಜೀವನ ಚಕ್ರ-6 ತಾಯ್ತನ
ಜೀವನ ಚಕ್ರ-6 ತಾಯ್ತನ
ಸೆಳೆಯುವ ಹಿರಿಯರ ನುಡಿಸಾಲು
ಪ್ರತಿಯೊಂದು ಕಲಾಕೃತಿಯ ಕೆಳಗಡೆ ಆ ಕಲಾಕೃತಿಗೆ ತಕ್ಕಂತೆ ಜಗತ್ತಿನ ದಾರ್ಶನಿಕರು ರೂಪಿಸಿದ ಹೇಳಿಕೆಯನ್ನು ಕನ್ನಡ ಮತ್ತು ಆಂಗ್ಲಭಾಷೆಯಲ್ಲಿ ಬರೆಸಲಾಗಿದೆ. ರಾಷ್ಟ್ರಕವಿ ಕುವೆಂಪು, ಜಿ.ಎಸ್.ಶಿವರುದ್ರಪ್ಪ, ಕೆ.ಎಸ್.ನರಸಿಂಹಮೂರ್ತಿ, ಭಗವದ್ಗೀತೆ ಸಾಲು, ಪಿ. ಲಂಕೇಶ್, ವಿಲಿಯಂ ವರ್ಡ್ಸ್‌ವರ್ತ್‌, ಎಡ್ವಿನ್ ಲೂಯಿಸ್ ಕೋಲ್ ಅವರ ಹೇಳಿಕೆಯನ್ನು ಬರೆಸಲಾಗಿದೆ ಎಂದು ಉಪ ಅರಣ್ಯ ಸಂರಕ್ಷಣಾಧಿಕಾರಿ ರಾಜಣ್ಣ ನಾಗಶೆಟ್ಟಿ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT