ಶನಿವಾರ, ಜುಲೈ 31, 2021
28 °C

ವಿಜಯಪುರ: ಕ್ವಾರಂಟೈನ್‌ನಿಂದ ತಪ್ಪಿಸಿಕೊಂಡ ಏಳು ಜನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ವಿಜಯಪುರ: ಮಹಾರಾಷ್ಟ್ರದ ಮುಂಬೈನಿಂದ ಜೂನ್‌ 1ರಂದು ಜಿಲ್ಲೆಗೆ ಬಂದು, ಬಿ.ಬಿ. ಇಂಗಳಗಿ ಗ್ರಾಮದ ಮೆಟ್ರಿಕ್‌ ಪೂರ್ವ ವಸತಿ ನಿಲಯದಲ್ಲಿ ಸಾಂಸ್ಥಿಕ ಕ್ವಾರಂಟೈನ್‌ನಲ್ಲಿ ಇದ್ದ ಏಳು ಜನರು ಜೂನ್‌ 3 ರಂದು ಯಾರಿಗೂ ಹೇಳದೇ, ಕೇಳದೇ ಕ್ವಾರಂಟೈನ್‌ ಕೇಂದ್ರದಿಂದ ತಪ್ಪಿಸಿಕೊಂಡು ಹೋಗಿದ್ದಾರೆ.

ಬಿ.ಬಿ. ಇಂಗಳಗಿ ಗ್ರಾಮದ ನಿವಾಸಿಗಳಾದ ಬಸಮ್ಮ ಯಾಳವಾರ, ಪ್ರಭಾವತಿ ಯಾಳವಾರ, ಮಂಜುನಾಥ  ಯಾಳವಾರ, ರೇಣುಕಾ ನಾಯ್ಕೋಡಿ, ರಾಹುಲ್ ನಾಯ್ಕೋಡಿ, ಸಚಿನ್‌ ನಾಯ್ಕೋಡಿ ಮತ್ತು ತೇಜಸ್ ಯಾಳವಾರ ಸಾಂಸ್ಥಿಕ ಕ್ವಾರಂಟೈನ್ ಅವಧಿ ಪೂರ್ಣಗೊಳಿಸದೇ ಜಿಲ್ಲಾಧಿಕಾರಿ ಅವರ ಆದೇಶವನ್ನು ಉಲ್ಲಂಘಿಸಿ ಹೋಗಿರುವುದರಿಂದ ಅವರ ವಿರುದ್ಧ ಕಲಕೇರಿ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು