ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಜಯಪುರ ಮಹಾನಗರ ಪಾಲಿಕೆ ಚುನಾವಣೆ: ಅಂತಿಮ ಕಣದಲ್ಲಿ 174 ಅಭ್ಯರ್ಥಿಗಳು

Last Updated 20 ಅಕ್ಟೋಬರ್ 2022, 16:12 IST
ಅಕ್ಷರ ಗಾತ್ರ

ವಿಜಯಪುರ: ವಿಜಯಪುರ ಮಹಾನಗರ ಪಾಲಿಕೆಯ 35 ವಾರ್ಡ್‌ಗಳಿಗೆಅಕ್ಟೋಬರ್‌ 28ರಂದು ನಡೆಯಲಿರುವ ಚುನಾವಣೆಗೆ ಸಂಬಂಬಂಧಿಸಿದಂತೆ 174 ಅಭ್ಯರ್ಥಿಗಳುಅಂತಿಮ ಕಣದಲ್ಲಿ ಇದ್ದಾರೆ.

ನಾಮಪತ್ರ ಹಿಂಪಡೆಯಲು ಕೊನೆಯ ದಿನವಾಗಿದ್ದ ಗುರುವಾರ ಒಟ್ಟು 230 ಅಭ್ಯರ್ಥಿಗಳ ಪೈಕಿ 56 ಅಭ್ಯರ್ಥಿಗಳು ಕಣದಿಂದ ಹಿಂದೆ ಸರಿದಿದ್ದಾರೆ.

ಕಾಂಗ್ರೆಸ್‌ನಿಂದ 35, ಬಿಜೆಪಿ 33, ಜೆಡಿಎಸ್‌ 20, ಬಿಎಸ್‌ಪಿ 1, ಕೆಆರ್‌ಎಸ್‌ 3, ಎಎಪಿ 15, ಎಐಎಂಐಎಂ 4, ಜನತಾ ಪಾರ್ಟಿ 3, ಎಸ್‌ಡಿಪಿಐ 2 ಹಾಗೂ ಸ್ವತಂತ್ರ 58 ಅಭ್ಯರ್ಥಿಗಳು ಅಂತಿಮ ಕಣದಲ್ಲಿ ಇದ್ದಾರೆ ಎಂದು ಜಿಲ್ಲಾ ಚುನಾವಣಾಧಿಕಾರಿ ವಿಜಯ ಮಹಾಂತೇಶ್‌ ತಿಳಿಸಿದ್ದಾರೆ.

1ನೇ ವಾರ್ಡ್‌ನಲ್ಲಿ 3 ಅಭ್ಯರ್ಥಿಗಳು ಅಂತಿಮ ಕಣದಲ್ಲಿದ್ದಾರೆ.ಅಂತೆಯೇ 2ನೇ ವಾರ್ಡ್‌ನಲ್ಲಿ 6,3ನೇ ವಾರ್ಡ್‌ನಲ್ಲಿ 6, 4ನೇ ವಾರ್ಡ್‌ನಲ್ಲಿ 9,5ನೇ ವಾರ್ಡ್‌ನಲ್ಲಿ 3,6ನೇ ವಾರ್ಡ್‌ನಲ್ಲಿ 3, 7ನೇ ವಾರ್ಡ್‌ನಲ್ಲಿ 5,8ನೇ ವಾರ್ಡ್‌ನಲ್ಲಿ 4, 9ನೇ ವಾರ್ಡ್‌ನಲ್ಲಿ7, 10ನೇ ವಾರ್ಡ್‌ನಲ್ಲಿ 3,11ನೇ ವಾರ್ಡ್‌ನಲ್ಲಿ 6, 12ನೇ ವಾರ್ಡ್‌ನಲ್ಲಿ 4, 13ನೇ ವಾರ್ಡ್‌ನಲ್ಲಿ 4, 14ನೇ ವಾರ್ಡ್‌ನಲ್ಲಿ 4, 15ನೇ ವಾರ್ಡ್‌ನಲ್ಲಿ4, 16ನೇ ವಾರ್ಡ್‌ನಲ್ಲಿ 6,17ನೇ ವಾರ್ಡ್‌ನಲ್ಲಿ5,18ನೇ ವಾರ್ಡ್‌ನಲ್ಲಿ 5, 19ನೇ ವಾರ್ಡ್‌ನಲ್ಲಿ 6,20ನೇ ವಾರ್ಡ್‌ನಲ್ಲಿ 9, 21ನೇ ವಾರ್ಡ್‌ನಲ್ಲಿ 6, 22ನೇ ವಾರ್ಡ್‌ನಲ್ಲಿ 6, 23ನೇ ವಾರ್ಡ್‌ನಲ್ಲಿ 5, 24ನೇ ವಾರ್ಡ್‌ನಲ್ಲಿ 4,25ನೇ ವಾರ್ಡ್‌ನಲ್ಲಿ 5,26ನೇ ವಾರ್ಡ್‌ನಲ್ಲಿ 4, 27ನೇ ವಾರ್ಡ್‌ನಲ್ಲಿ 3,28ನೇ ವಾರ್ಡ್‌ನಲ್ಲಿ 7,29ನೇ ವಾರ್ಡ್‌ನಲ್ಲಿ 10,30ನೇ ವಾರ್ಡ್‌ನಲ್ಲಿ 3,31ನೇ ವಾರ್ಡ್‌ನಲ್ಲಿ 3,32ನೇ ವಾರ್ಡ್‌ನಲ್ಲಿ 5,33ನೇ ವಾರ್ಡ್‌ನಲ್ಲಿ 3,34ನೇ ವಾರ್ಡ್‌ನಲ್ಲಿ 4, 35ನೇ ವಾರ್ಡ್‌ನಲ್ಲಿ 4 ಅಭ್ಯರ್ಥಿಗಳು ಕಣದಲ್ಲಿದ್ದಾರೆ.

ಅಭಿವೃದ್ಧಿ ಆಧರಿಸಿ ಮತಯಾಚನೆ: ಬಿಜೆಪಿ
ವಿಜಯಪುರ:
ಬಿಜೆಪಿ ಅಧಿಕಾರವಧಿಯಲ್ಲಿ ವಿಜಯಪುರ ನಗರ ಅಭಿವೃದ್ಧಿ ಪಥದಲ್ಲಿ ಸಾಗುತ್ತಿದೆ. ಅಭಿವೃದ್ಧಿ ಮತ್ತುಸಂಘಟನೆ ಆಧಾರದ ಮೇಲೆ 33 ವಾರ್ಡ್‌ಗಳಲ್ಲೂ ಗೆಲ್ಲುವ ವಿಶ್ವಾಸಿದೆಎಂದುಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಆರ್.ಎಸ್.ಪಾಟೀಲ ಕೂಚಬಾಳ ಹೇಳಿದರು.

ನಗರದಲ್ಲಿ ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು,ಮಹಾನಗರ ಪಾಲಿಕೆಚುನಾವಣೆ ಗಂಭೀರವಾಗಿ ಪರಿಗಣಿಸಲಾಗಿದೆ.ಸಾಮಾಜಿಕ ನ್ಯಾಯದ ಆಧಾರದ ಮೇಲೆ, ಮುಖಂಡರ ಒಮ್ಮತ, ಸಮನ್ವಯತೆ ಆಧಾರದ ಮೇಲೆ ಅಭ್ಯರ್ಥಿಗಳ ಆಯ್ಕೆ ಮಾಡಲಾಗಿದೆ ಎಂದರು.

ಬಂಡಾಯಗಾರರನ್ನು ಮನವೊಲಿಸುವ ಕಾರ್ಯ ನಡೆದಿದೆ. ನಾಲ್ಕೈದು ವಾರ್ಡ್‌ಗಳಲ್ಲಿ ಅಭ್ಯರ್ಥಿಗಳು ಹಿಂಪಡೆದಿದ್ದಾರೆ. ಪಕ್ಷದ ವಿರುದ್ಧವಾಗಿ ಕಣಕ್ಕಿಳಿದವರ ವಿರುದ್ಧಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.

ಮರಾಠ, ಭಾವಸಾರ ಕ್ಷತ್ರಿಯ, ಪಂಚಮಸಾಲಿ, ಬ್ರಾಹ್ಮಣ, ಭೋವಿ, ಲಂಬಾಣಿ, ಕುರುಬ, ಬಣಜಿಗ, ಗಾಣಿಗ, ರಜಪೂತ, ಹಂಡೇ ವಜೀರ, ಮಾದಿಗ, ಹರಣ ಶಿಖಾರಿ ಸಮಾಜಕ್ಕೆ ನೀಡಲಾಗಿದೆ. ಆದರೆ, ಯಾವೊಬ್ಬ ಮುಸ್ಲಿಮರು ಪಕ್ಷದ ಟಿಕೆಟ್‌ಗೆ ಬೇಡಿಕೆ ಇಡ ಕಾರಣ ನೀಡಿಲ್ಲ ಎಂದರು.

ಮುಖಂಡರಾದಚಂದ್ರಶೇಖರ ಕವಟಗಿ, ಮಲ್ಲಿಕಾರ್ಜುನ ಜೋಗೂರ, ವಿಕ್ರಮ್ ಗಾಯಕವಾಡಿ, ಬಾಪುಸಿಂಗ್ ರಜಪೂತ, ವಿಜಯ್ ಜೋಶಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT